ಸಂಘಟನೆ ಕೊರತೆಯಿಂದ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ : ನಬಾರ್ಡ್ ಕಾರ್ಯನಿರ್ವಾಹಕ ವ್ಯವಸ್ಥಾಪಕ ಟಿ. ರಮೇಶ್

By Kannadaprabha News  |  First Published Jan 9, 2024, 11:24 AM IST

ಸಂಘಟನೆ ಕೊರತೆಯಿಂದಾಗಿ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ನರ್ಬಾಡ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಟಿ. ರಮೇಶ್ ತಿಳಿಸಿದರು.


  ಮೈಸೂರು :  ಸಂಘಟನೆ ಕೊರತೆಯಿಂದಾಗಿ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ನರ್ಬಾಡ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಟಿ. ರಮೇಶ್ ತಿಳಿಸಿದರು.

ಮೈಸೂರಿನ ಬಂಡಿಪಾಳ್ಯದಲ್ಲಿರುವ ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಆವರಣದಲ್ಲಿ ಮೊಬೈಲ್ ವ್ಯಾನ್ ಮೂಲಕ ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿದ ಮಾತನಾಡಿದ ಅವರು, ರೈತರಿಹೆ ಶೋಷಣೆ ತಪ್ಪಿಸಲು ರೈತ ಉತ್ಪಾದಕ ಸಂಸ್ಥೆಗಳು ರೈತರಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಹೇಳಿದರು.

Latest Videos

undefined

ನರ್ಬಾಡ್ ಸಂಸ್ಥೆ ಬಹಳಷ್ಟು ನೆರವು ನೀಡಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜೊತೆಗೆ ರೈತ ಉತ್ಪಾದಕ ಸಂಸ್ಥೆಗಳಿಗೆ ಹೆಚ್ಚಿನ ನೆರವು ನೀಡಿ ರೈತರು ಸ್ವಾವಲಂಬಿಗಳಾಗಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿ ರೈತ ಮಿತ್ರ ಉತ್ಪಾದಕ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಅವರು ಶ್ಲಾಘಿಸಿದರು.

ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಶೋಷಣೆ ಹೆಚ್ಚಾಗಿದೆ. ಬೆಲೆ, ತೂಕದಲ್ಲಿ ಮೋಸ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಹೀಗಾಗಿ ರೈತರು ಸ್ವಾವಲಂಬಿಗಳಾಗಲು, ಸಂಘಟಿತರಾಗಲು ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ರೈತಮಿತ್ರ ರೈತ ಉದ್ಪಾದಕ ಸಂಸ್ಥೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ದೇಶದಲ್ಲಿ 13 ಸಾವಿರ ರೈತ ಉತ್ಪಾದಕ ಸಂಸ್ಥೆಗಳು ಲಕ್ಷಾಂತರ ಕೋಟಿ ವಿನಿಯೋಗಿಸಿವೆ. ಸಹಕಾರಿ ಕೃಷಿಯನ್ನೇ ಹೋಲುವ ರೈತ ಉತ್ಪಾದಕ ಸಂಸ್ಥೆಗಳ ಹಿಡಿತ ಹಾಗೂ ಪ್ರಾಯೋಜಕತ್ವ ದೊಡ್ಡ ದೊಡ್ಡ ಕಂಪನಿಗಳ ಹಿಡಿತಕ್ಕೆ ಸಿಲುಕಬಾರದು. ರೈತರು ಜಾತಿ, ಪಕ್ಷ ರಾಜಕಾರಣ ದೂರ ಇಟ್ಟು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ನಾಗೇಶ್, ನಬಾರ್ಡ್ ಜಿಲ್ಲಾ ಮುಖ್ಯಸ್ಥ ಶಾಂತವೀರ್, ಕಾವೇರಿ ಗ್ರಾಮೀಣ ಬ್ಯಾಂಕಿನ ಶಂಕರ್ ನಾರಾಯಣ್, ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಆಡಳಿತ ಮಂಡಳಿ ಪದಾಧಿಕಾರಿ ಟಿ.ವಿ. ಗೋಪಿನಾಥ್, ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಲೀಕ ಕುಮಾರ್, ಚೇತನ್ ಗಾರ್ಡನ್ ಮಾಲೀಕ ಚೇತನ್, ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜು, ಪಿ. ಸೋಮಶೇಖರ್, ಕಿರಗಸೂರು ಶಂಕರ್, ಎಸ್.ಬಿ. ಸಿದ್ನಾಳ್, ನಾಗರಾಜಮೂರ್ತಿ, ಕುರುಬೂರು ಸಿದ್ದೇಶ್, ಮಂಜು, ಪ್ರದೀಪ್ಕುಮಾರ್, ಕೆ.ಜಿ. ಗುರುಸ್ವಾಮಿ, ಶಿವಪ್ರಸಾದ್ ಮೊದಲಾದವರು ಇದ್ದರು.

click me!