ಮಡಿವಾಳ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ ಜೊತೆಗೆ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಸ್ಥಾನಮಾನದಿಂದಲೂ ಹಿಂದುಳಿದಿದೆ. ಜನಾಂಗಕ್ಕೆ ನ್ಯಾಯವೊದಗಿಸಲು ಸರ್ಕಾರ ಅನ್ನಪೂರ್ಣಮ್ಮ ವರದಿ ಜಾರಿಗೊಳಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್ ಹೇಳಿದರು.
ನಂಜನಗೂಡು : ಮಡಿವಾಳ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ ಜೊತೆಗೆ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಸ್ಥಾನಮಾನದಿಂದಲೂ ಹಿಂದುಳಿದಿದೆ. ಜನಾಂಗಕ್ಕೆ ನ್ಯಾಯವೊದಗಿಸಲು ಸರ್ಕಾರ ಅನ್ನಪೂರ್ಣಮ್ಮ ವರದಿ ಜಾರಿಗೊಳಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್ ಹೇಳಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಮಡಿವಾಳ ಸಮುದಾಯ ಭವನದ ಕಚೇರಿಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸಮುದಾಯದ ಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು.
undefined
ಸಮುದಾಯವು ಹಿಂದಿನಿಂದಲೂ ಸಹ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಶಿಕ್ಷಿತರಾಗಬೇಕಾದರೆ ನಮ್ಮ ಸಮುದಾಯವನ್ನು ಅನ್ನಪೂರ್ಣಮ್ಮ ವರದಿ ಜಾರಿಗೊಳಿಸಿ ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಲು ಸರ್ಕಾರ ಕ್ರಮವಹಿಸಬೇಕು ಮತ್ತು ಜಾತಿ ಜನಗಣತಿ ಆಯೋಗವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಶಿವಣ್ಣ, ಕೆ.ಎಂ. ಬಸವರಾಜು, ಸೋಮಣ್ಣ, ನಾಗರಾಜು, ಮಹದೇವಸ್ವಾಮಿ, ಬಸವರಾಜು, ಸುರೇಶ್, ವೆಂಕಟೇಶ್, ಶಿವಕುಮಾರ್, ರವಿ, ಪ್ರಭುಸ್ವಾಮಿ, ಮಹದೇವಣ್ಣ, ನಾರಾಯಣಸ್ವಾಮಿ, ನಂಜುಂಡ ಇದ್ದರು.
ಸಂಕಷ್ಟ ಪರಿಹರಿಸುವ ಜೋಕುಮಾರಸ್ವಾಮಿ
ಅಫಜಲ್ಪುರ(ಸೆ.28): ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರೆ ತುಂಬಿ ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಮನೆ ಹೊಕ್ಯಾನೆ ಜೋಕುಮಾರ... ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಜನಪದ ಶೈಲಿಯಲ್ಲಿ ಹಾಡುವುದನ್ನು ಕೇಳುವುದೇ ಬಲು ಚಂದ.
ಜೋಕುಮಾರನ ಕುರಿತ ವಿಶಿಷ್ಟ ಜಾನಪದ ಹಾಡುಗಳನ್ನು ಹಾಡುವ ಮಹಿಳೆಯರ ತಂಡ, ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿಕೊಂಡು ಆತನ ಬಾಯಿಯಲ್ಲಿ ಬೆಣ್ಣೆ ಇಟ್ಟು, ಮನೆಗಳಿಗೆ ಹೊತ್ತೂಯ್ಯುವ ಜೋಗಪ್ಪನ ಹಬ್ಬದ ಆಚರಣೆ ತಾಲೂಕಿನ ಮಣ್ಣೂರ ಹೊಸೂರ ರಾಮನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ಉಡಚಣ ಗ್ರಾಮಗಳಲ್ಲಿ ಕಂಡು ಬಂತು. ಈ ಭಾಗದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಿ ಜನರು ಬದುಕು ಸುಧಾರಿಸಲಿ ಎಂಬ ಉದ್ದೇಶದಿಂದ ಜೋಕುಮಾರನ ಹಬ್ಬ ಆಚರಣೆ ಮಾಡಲಾಗುತ್ತದೆ.
ಅನಂತ ಚತುರ್ದಶಿ,ಶಿವನ ಆಶೀರ್ವಾದ ಪಡೆಯುವ 5 ರಾಶಿಯವರು ಇವರೇ..!
ಜೋಕುಮಾರನನ್ನು ಬುಟ್ಟಿಯಲ್ಲಿ ಕೂಡ್ರಿಸಿಕೊಂಡು ಮನೆ ಮನೆಗೆ ಹೊತ್ತೂಯ್ಯುವ ಮಹಿಳೆಯರು ಮನೆಗಳ ಮುಂದೆ ಜೋಕುಮಾರನಿಗೆ ವಿಶೇಷ ಪೂಜೆ ಸಲ್ಲಿಸಿ, ಆ ಮನೆಯಿಂದ ದವಸ ಧಾನ್ಯಗಳನ್ನು ಪಡೆದುಕೊಳ್ಳುತ್ತಾರೆ. ಮನೆಯ ಮಂದಿಯೆಲ್ಲ ಬೆಣ್ಣೆ ಪ್ರೀಯನಾದ ಜೋಕುಮಾರನ ಬಾಯಿಗೆ ಬೆಣ್ಣೆ ಸವರಿ ತಮ್ಮ ಹರಕೆಗಳು ಈಡೇರಲಿ ಎಂದು ಪ್ರಾರ್ಥಿಸುವುದು ವಾಡಿಕೆ.
ಜೋಕುಮಾರನ ಕೈಯಲ್ಲಿ ಇರುವ ಖಡ್ಗ, ಆತನು ಶೂರನು ಮತ್ತು ಪರಾಕ್ರಮಿಯೂ ಎಂಬುದನ್ನು ಬಿಂಬಿಸುತ್ತದೆ. ಜೋಕುಮಾರನ ಪೂಜೆ ಮಾಡಿ ಹರಕೆ ಕಟ್ಟಿದರೆ ಬಂಜೆತನ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯೂ ಗ್ರಾಮೀಣ ಭಾಗದಲ್ಲಿ ಪ್ರಸ್ತುತವಾಗಿದೆ.
ಪಿತೃಪಕ್ಷದ ಸಮಯದಲ್ಲಿ ಕೂದಲು, ಗಡ್ಡ ಕತ್ತರಿಸಿದರೆ ಅಪಶಕುನವೇ?
ಜೋಕುಮಾರನ ಪೂಜೆ ನಂತರ ಅವನನ್ನು ಹೊತ್ತು ತಂದ ಮಹಿಳೆಯರು ನೀಡುವ ಚರಗಾ ಎಂಬ ಪ್ರಸಾದವನ್ನು ರೈತರು ತಮ್ಮ ಹೊಲದಲ್ಲಿ ಚೆಲ್ಲಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಸಂಪ್ರದಾಯ ಆಚರಣೆಗಳಲ್ಲಿ ವಿಶಿಷ್ಟತೆಗಳ ಮಹಾಪೂರವೇ ಇದ್ದು, ಜೋಕುಮಾರನ ಹಬ್ಬ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಪ್ರತಿವರ್ಷ ಗಣೇಶ ಹಬ್ಬದ ನಡುವೆ ಜೋಕುಮಾರನ ಪೂಜೆ ನಡೆಯುವುದು ವಾಡಿಕೆ.