* ಮಹಾರಾಷ್ಟ್ರದ ಸೋಲಾಪೂರ ಜಿಲ್ಲಾಧಿಕಾರಿಗೆ ರೈತನ ಮನವಿ
* ಪೊಲೀಸ್ ದೂರು ದಾಖಲಿಸಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ
* ಕಬ್ಬು ಬೆಳೆದರೆ ಸರಿಯಾದ ಸಮಯಕ್ಕೆ ಬಿಲ್ ಪಾವತಿಸದ ಕಾರ್ಖಾನೆಗಳು
ಸಂಕೇಶ್ವರ(ಆ.28): ಬೆಳೆಯಲು ಅನುಮತಿ ನೀಡಬೇಕೆಂದು ಕೋರಿ ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಮೊಹಳ ತಾಲೂಕಿನ ಶಿರಾಪೂರ ಗ್ರಾಮದ ರೈತನೊಬ್ಬ ಸೋಲಾಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ.
ಶಿರಾಪೂರ ಗ್ರಾಮದ ಅನಿಲ ಪಾಟೀಲ ಎಂಬಾತನೇ ಮನವಿ ಸಲ್ಲಿಸಿದ ರೈತ. ಸ್ವಗ್ರಾಮವಾದ ಶಿರಾಪೂರದಲ್ಲಿ ನನಗೆ 2 ಎಕರೆ ಜಮೀನು ಇದ್ದು, ಅಲ್ಲಿ ಏನೇ ಕೃಷಿ ಮಾಡಿದರೂ ಕೃಷಿ ಬೆಳೆಗಳಿಗೆ ಮಾಡಿದ ವೆಚ್ಚದಷ್ಟು ಸಹಿತ ಪ್ರತಿಫಲ ದೊರೆಯುತ್ತಿಲ್ಲ. ಆದರೆ ಕೃಷಿಗಾಗಿ ಮಾಡಬೇಕಾದ ವೆಚ್ಚಗಳು ಮಾತ್ರ ಪ್ರತಿ ವರ್ಷ ಹೆಚ್ಚಾಗುತ್ತಲೆ ಇದೆ. ಕಬ್ಬು ಬೆಳೆದರೆ ಕಾರ್ಖಾನೆಗಳು ಸರಿಯಾದ ಸಮಯಕ್ಕೆ ಬಿಲ್ ಪಾವತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನನ್ನ 2 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆಯಲು ಉದ್ದೇಶಿಸಿದ್ದು, ಇದಕ್ಕಾಗಿ ಈ ಲಿಖಿತ ಮನವಿಯನ್ನು ನೀಡುತ್ತಿದ್ದೇನೆ. ಆದ್ದರಿಂದ 15.9.2021ರೊಳಗೆ ತನಗೆ ಗಾಂಜಾ ಬೆಳೆಯಲು ಅನುಮತಿ ನೀಡಬೇಕು. ಇಲ್ಲದಿದ್ದರೆ 16.9.2021ರಂದು ತನಗೆ ಅನುಮತಿ ದೊರೆಕಿದೆ ಎಂದು ತಿಳಿದು ಗಾಂಜಾ ಬೆಳೆಯುವುದಾಗಿ ತಿಳಿಸಿರುವ ರೈತ, ಗಾಂಜಾ ಬೆಳೆದಿದ್ದಕ್ಕೆ ಮುಂದೇನಾದರೂ ಪೊಲೀಸ್ ದೂರು ದಾಖಲಿಸಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾನೆ.
ಲವರ್‌ಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ..!
ಈ ಮನವಿಯನ್ನು ಸೋಲಾಪೂರ ಜಿಲ್ಲಾಡಳಿತದ ಜನಸಂಪರ್ಕ ಅಧಿಕಾರಿ ಸ್ವೀಕರಿಸಿದ್ದಾರೆ. ಒಟ್ಟಿನಲ್ಲಿ ರೈತ ಅನಿಲ ಪಾಟೀಲ ಗಾಂಜಾ ಬೆಳೆಯಲು ಪರವಾನಗಿ ಕೇಳಿದ್ದು ಅಧಿಕಾರಿಗಳ ಹುಬ್ಬೇರಿಸುವಂತಾಗಿದೆ.