* ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಹೂಗಾರ
* ಕಳೆದ 7 ವರ್ಷದಿಂದ ನಿರಂತರ ಈ ಯೋಜನೆಗೆ ಹೋರಾಟ
* ಕಾಮಗಾರಿ ಮುಗಿಸಿ ಈ ಭಾಗದ ಮಲಪ್ರಭೆ ಜಲಾಶಯಕ್ಕೆ ನೀರು ತನ್ನಿ
ನರಗುಂದ(ಮೇ.15): ಮಹದಾಯಿ(Mahadayi) ಹಾಗೂ ಕಳಸಾ ಬಂಡೂರಿ(Kalasa Banduri) ಯೋಜನೆಗೆ ಮೀಸಲಿಟ್ಟ ಹಣವನ್ನು ಸರ್ಕಾರ ಬಳಕೆ ಮಾಡಿ ಈ ಭಾಗದ ರೈತರಿಗೆ ನೀರಾವರಿಗೆ ಅನುಕೂಲ ಮಾಡಬೇಕೆಂದು ರೈತ ಸಂಘಟನೆ ಮುಖಂಡ ವೀರಭಸಪ್ಪ ಹೂಗಾರ(Veerabhadrappa Hugar) ಆಗ್ರಹಿಸಿದರು.
ಪಟ್ಟಣದ 2493 ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ(North Karnataka) ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ನಾಲ್ಕು ಜಿಲ್ಲೆ ಹನ್ನೊಂದು ತಾಲೂಕಿನ ರೈತರು(Farmera) ಬಂಡಾಯ ನೆಲದಲ್ಲಿ ಕಳೆದ 7 ವರ್ಷದಿಂದ ನಿರಂತರ ಈ ಯೋಜನೆಗೆ ಹೋರಾಟ ಮಾಡಿದ್ದರಿಂದ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನಾಯಾಧೀಕರಣದ ನ್ಯಾಯಾಧೀಶರು ಕರ್ನಾಟಕ ರಾಜ್ಯಕ್ಕೆ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 7.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ನಂತರ ಸರ್ಕಾರ ಎರಡು ಬಜೆಟ್‌ನಲ್ಲಿ ಸುಮಾರು 1600 ಕೋಟಿ ಅನುದಾನವನ್ನು(Grant) ಯೋಜನೆಯ ಕಾಮಗಾರಿಗೆ ಮೀಸಲಿಟ್ಟಿದೆ, ಆದರೆ ಸರ್ಕಾರ ಬೇಗ ಅರ್ಧಕ್ಕೆ ನಿಂತಿರುವ ಕಳಸಾ ಕಾಮಗಾರಿ ಪೂರ್ಣಗೊಳಸಿದಲ್ಲಿ, ಇನ್ನು ಬಂಡೂರಿ ಕಾಮಗಾರಿಗೆ ಟೆಂಡರ್ ಕರೆಯದೆ ಈ ಭಾಗದ ರೈತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದರು.
Gadag: ಮುಸ್ಲಿಂ ಬಾಬಾನಿಂದ ಲಿಂಗಪೂಜೆ.. ಹಿಂದೂ ದೇವರ ಆರಾಧನೆ!
ರಾಜ್ಯದಲ್ಲಿ(Karnataka) ಆಡಳಿತ ಮಾಡುತ್ತಿರುವ ಸರ್ಕಾರ ಕೇವಲ ಈ ಭಾಗದ ರೈತರಿಗೆ ಈ ಯೋಜನಗೆ ನಮ್ಮ ಸರ್ಕಾರ ಸಾವಿರಾರು ಕೋಟಿ ಹಣವನ್ನು ಕಾಮಗಾರಿಗೆ ಮೀಸಲಿಟ್ಟದೆ ಎಂದು ಈ ಭಾಗದ ರಾಜಕಾರಣಿಗಳು ಹೇಳಿಕೆ ನೀಡಿದರೆ ಸಾಲದು, ಈ ಯೋಜನೆಗೆ ಮೀಸಲಿಟ್ಟರುವ ಹಣವನ್ನು ಬಿಡುಗಡೆ ಮಾಡಿ ಬೇಗ ಈ ಕಾಮಗಾರಿ ಮುಗಿಸಿ ಈ ಭಾಗದ ಮಲಪ್ರಭೆ ಜಲಾಶಯಕ್ಕೆ ನೀರು ತಂದು ಜೋಡಣೆ ಮಾಡಿದರೆ ಮಾತ್ರ ನೀವು ಬಜೆಟ್‌ನಲ್ಲಿ ಮೀಸಲಿಟ್ಟ ಉಪಯೋಗ ಆಗುತ್ತದೆ ಎಂದರು.
ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಅನಸವ್ವ ಶಿಂದೆ, ವಿಜಯಕುಮಾರ ಹೂಗಾರ, ರಾಮಚಂದ್ರ ಸಾಬಳೆ, ಎಲ್.ಬಿ. ಮನನೇಕೊಪ್ಪ, ನಾಗರತ್ನ ಸವಳಭಾವಿ, ವೆಂಕಪ್ಪ ಹುಜರತ್ತಿ, ವಾಸು ಚವಾಣ, ಶಂಕ್ರಪ್ಪ ಜಾಧವ, ಶಿವಪ್ಪ ಸಾತಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.