Gadag: ಮುಸ್ಲಿಂ ಬಾಬಾನಿಂದ ಲಿಂಗಪೂಜೆ.. ಹಿಂದೂ ದೇವರ ಆರಾಧನೆ!

By Govindaraj SFirst Published May 14, 2022, 11:41 PM IST
Highlights

* ನರಗುಂದ ಇಮಾಮ್ ಸಾಬ್ ದರ್ಗಾದ ಬಾಬಾನಿಂದ ಭಾವೈಕ್ಯತೆಯ ಸಂದೇಶ.
* ಬಾಬು ಸಾಹೇಬ್ ಜಮಾದಾರ್ ಎಂಬ ಬಾಬಾರಿಂದ ನಿತ್ಯ ಲಿಂಗ ಪೂಜೆ.
* ಗದಗ ಜಿಲ್ಲೆ ನರಗುಂದ ಪಟ್ಟಣದ ಹೊರ ವಲಯದ ದರ್ಗಾದ ಬಾಬಾ ಬಾಬು ಸಾಹೇಬ.

ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಮೇ.14): ಜಿಲ್ಲೆಯ ನರಗುಂದ (Nargund) ಪಟ್ಟಣದ ಇಮಾಮ್ ಸಾಬ್ (Imaam Saab) ದರ್ಗಾದ ಬಾಬಾ ನಿತ್ಯ ಲಿಂಗಪೂಜೆ (Shivaling) ಮಾಡಿಕೊಳ್ಳುವ ಮೂಲಕ ಭಾವೈಕ್ಯತೆ ಸಂದೇಶ ಸಾರುತ್ತಿದ್ದಾರೆ. ಭಾವೈಕ್ಯತೆಗೆ ಹೆಸರು ವಾಸಿಯಾದ ದರ್ಗಾದ ಬಾಬಾ, ಬಾಬು ಸಾಹೇಬ್ ಅವರು ನಿತ್ಯ ಹಿಂದೂ ದೇವರ ಪೂಜೆ, ಮುಸ್ಲಿಂ (Muslim) ಸಂಪ್ರದಾಯದಂರೆ ಫಾತೇಹಾ, ದುವಾ ನಡೆಸ್ತಾರೆ. ದರ್ಗಾದಲ್ಲಿ ನಿತ್ಯ ಶಿವನಾಮಸ್ಮರಣೆ ನಡೆಯೋದು ವಿಶೇಷ. ಲಿಂಗೈಕ್ಯ ಇಮಾಮ್ ಸಾಹೇಬರ ಸ್ಮರಣಾರ್ಥ 2005ರಲ್ಲಿ ಪಟ್ಟಣದ ಹುಬ್ಬಳ್ಳಿ, ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿಯ ದರ್ಗಾದಲ್ಲಿ ಗದ್ದುಗೆ ನಿರ್ಮಿಸಲಾಗಿದೆ. 

ಅಂದಿನಿಂದ ದೇವರು ನಿರಾಕಾರಿ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಎಂಬ ಬಸವ‌ ತತ್ವ ಸಾರುವಲ್ಲಿ ದರ್ಗಾ ನಿರತವಾಗಿದೆ. ಜಾತಿ, ಧರ್ಮದ ಹಂಗಿಲ್ಲದೆ ಅಲ್ಲಾ ಮತ್ತು ಶಿವನಾಮ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಅನ್ನೋ ಉದಾತ್ತ ಚಿಂತನೆ ಜನರಿಗೆ ಮುಟ್ಟಿಸಲಾಗ್ತಿದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನದಂದು ದರ್ಗಾದ ಬಾಬಾ, ಬಾಬುಸಾಹೇಬ ಅಜ್ಜನವರಿಂದ ಮೌನಾಚರಣೆ, ವಿಶೇಷ ಪೂಜೆ, ಪುನಸ್ಕಾರ, ಭಕ್ತರಿಗೆ ಹಿತೋಪದೇಶ ನಡೆಯುತ್ತದೆ. ಹಾಗೂ ವಿಶೇಷ ಸಂದರ್ಭಗಳಲ್ಲಿ ದರ್ಗಾದಲ್ಲಿ ಭಜನೆ, ಪುರಾಣವೂ ನಡೆಯುತ್ತವೆ. ಬೆಳಗ್ಗೆ ಸಂಜೆ ದರ್ಗಾದಲ್ಲಿನ ದೇವರ ಫೋಟೋಗಳಿಗೆ ಪೂಜೆ ಸಲ್ಲಿಸುತ್ತಾರೆ.‌ 

ನಿಶ್ಚಿತಾರ್ಥದ ದಿನವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಕಳೆದ 15 ವರ್ಷಗಳಿಂದ ರಂಜಾನ್ ತಿಂಗಳಲ್ಲಿ ಇಫ್ತಿಯಾರ್ ಕೂಟಕ್ಕೆ ಸರ್ವ ಧರ್ಮದವರಿಗೂ ದಾಸೋಹ ನಡೆಯುತ್ತೆ. ನಿತ್ಯ ಶ್ಲೋಕಗಳೊಂದಿಗೆ ಮಹಾ ಮಂಗಳಾರತಿ ಹಾಡಲಾಗುತ್ತದೆ. ಪ್ರತಿ ಶುಕ್ರವಾರ ದರ್ಗಾದಲ್ಲಿರುವ ಎಲ್ಲ ದೇವತೆಗಳಿಗೂ ಎಲೆ ಅಡಿಕೆ, ಬಾಳೆಹಣ್ಣು, ಅರಿಶಿಣ ಬೇರು, ಅಕ್ಕಿಕಾಳು, ಕುಂಕುಮ ಸಾಮಗ್ರಿಗಳಿಂದ ಉಡಿ ತುಂಬುವುದು ಮತ್ತೊಂದು ಮಹತ್ವದ ವಿಶೇಷ. ಪ್ರತಿವರ್ಷದ ಮೊಹರಂ ಹಬ್ಬ ಆಚರಣೆ ಸಂದರ್ಭದಲ್ಲಿ ಆಲಿ ದೇವರುಗಳ ಸೇವೆ ಮಾಡುವುದರ ಮೂಲಕ ಶಾಂತಿ, ನೆಮ್ಮದಿ ಏಕತೆ ಕೋಮು ಸೌಹಾರ್ದ, ಸಾರ್ವಜನಿಕರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲಾಗುತ್ತಿದೆ.

ಧರ್ಮ ದಂಗಲ್ ಗೆ ಎಂಟ್ರಿಯಾದ್ರಾ ಪೊಲೀಸರು?: ರಾಜ್ಯದಲ್ಲಿ ಕಳ್ಳರು, ಕೊಲೆಗಡುಕರು ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಕರ್ನಾಟಕ ಪೊಲೀಸ್ ಈ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಸ್ವತಃ ಪೊಲೀಸರೇ ಅಪರಾಧಿ ಸ್ಥಾನದಲ್ಲಿರುವ ನೀಡಿರುವ ಈ ಪ್ರಕರಣಕ್ಕೆ ಕಾರಣವಾಗಿರುವುದು ಧರ್ಮ ದಂಗಲ್. ಹಿಂದೂ-ಮುಸ್ಲಿಂ ನಡುವೆ ಇಡೀ ಸಂಘರ್ಷಕ್ಕೆ ಕಾರಣವಾಗಿದ್ದು ಹಿಜಾಬ್ ವಿಚಾರ. ಹಿಜಾಬ್ ಸುದ್ದಿಯಿಂದ ಆರಂಭವಾದ ದಂಗಲ್ ಇಂದು ತನ್ನ ಬಾಹುಗಳನ್ನು ಬಹುತೇಕ ಎಲ್ಲಾ ವಿಚಾರಗಳಿಗೂ ವ್ಯಾಪಿಸಿದೆ. 

Gadag: 'ಎಸಿಬಿ ರೇಡ್' ನಾಟಕ ಮಾಡಿ ಹಣ ಕಿತ್ತಲು ಮುಂದಾದ ಖದೀಮರ ಟೀಮ್!

ಹಿಜಾಬ್ ನಿಂದ ಆರಂಭವಾದ ಗಲಾಟೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಎದುರು ಬೆಂಕಿ ಹಾಕುವವರೆಗೂ ಹೋಗಿ ಮುಟ್ಟಿದೆ. ಇಡೀ ಧರ್ಮ ದಂಗಲ್ ಸಂದರ್ಭದಲ್ಲಿ ಆಗಬಹುದಾಗಿದ್ದ ದೊಡ್ಡ ಅನಾಹುತಗಳನ್ನು ತಪ್ಪಿಸುವಲ್ಲಿ ಪೊಲೀಸರು ಅಪಾರ ಶಮ್ರವಹಿಸಿದ್ದಾರೆ. ಶಾಂತಿ ಕಾಪಾಡಲು ಪೊಲೀಸರು ಹಗಲಿರುಳು ಶ್ರಮ ವಹಿಸಿರುವ ವೇಳೆ ಮಂಗಳೂರಿನ ಬಜ್ಪೆ ಪೊಲೀಸರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತನೊಬ್ಬನ ಮೇಲೆ ಯಾವುದೇ ದೂರುಗಳಿಲ್ಲದ ನಡುವೆಯೂ ಠಾಣೆಗೆ ಕರೆಸಿ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಕೊಟ್ಟಿರೋದು ಈಗ ವಿವಾದದ ಮೂಲವಾಗಿದೆ.

click me!