ಅತ್ತ ಅರಶಿನ, ಇತ್ತ ಮೆಣಸು, ಮಧ್ಯದಲ್ಲಿ ಗಾಂಜಾ..!

By Kannadaprabha NewsFirst Published Jan 21, 2020, 3:24 PM IST
Highlights

ಮೆಣಸಿನಕಾಯಿ ಗಿಡ ಹಾಗೂ ಅರಿಶಿನ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿಯ ಸಿಆರ್‌ ನಗರ ಗ್ರಾಮದ ವಾಸಿ ಲೂರ್ದಸ್ವಾಮಿ(45) ಎಂಬಾತ ಬಂಧಿತ ಆರೋಪಿ.

ಚಾಮರಾಜನಗರ(ಜ.21): ಮೆಣಸಿನಕಾಯಿ ಗಿಡ ಹಾಗೂ ಅರಿಶಿನ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿಯ ಸಿಆರ್‌ ನಗರ ಗ್ರಾಮದ ವಾಸಿ ಲೂರ್ದಸ್ವಾಮಿ(45) ಎಂಬಾತ ಬಂಧಿತ ಆರೋಪಿ.

ಸುಮಾರು 12 ಕೆಜಿ 900 ಗ್ರಾಂನ ಸುಮಾರು 13 ಗಾಜಾ ಗಿಡಗಳು ವಶಪಡಿಸಿಕೊಡಿದ್ದಾರೆ. ಈತನು ತನ್ನ ಜಮೀನಿನಲ್ಲಿ ಬೆಳೆದಿದ್ದ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡ ಬೆಳೆದಿರುವುದಾಗಿ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ನವೀನ್‌ಕುಮಾರ್‌ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಗಾಜಾ ಗಿಡ ಸಮೇತ ಬಂಧಿಸಲಾಗಿದೆ.

ಮಂಗಳೂರು ಬಾಂಬ್ ಬ್ಲಾಸ್ಟ್ : ಶಂಕಿತನ ಬಗ್ಗೆ ಕಂಡಕ್ಟರ್ ಬಾಯ್ಬಿಟ್ರು ಸ್ಫೋಟಕ ವಿಚಾರ

ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ದಾಳಿಯಲ್ಲಿ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಉಪನೀರಿಕ್ಷಕ ವೀರಭದ್ರಪ್ಪ, ಪಟ್ಟಣ ಪೊಲೀಸ್‌ ಠಾಣೆಯ ಎಸ್‌ಐ ರಾಜೇಂದ್ರ, ಎಎಸ್‌ಐ ಚಲುವರಾಜು, ಮುಖ್ಯಪೇದೆ ಮಧುಕುಮಾರ್‌, ನಾಗರಾಜು, ಮಹೇಶ್‌ಕುಮಾರ್‌, ಗೋವಿಂದರಾಜು, ರವಿಕುಮಾರ್‌, ತಕೀಉಲ್ಲಾ, ಪೇದೆಗಳಾದ ಶಂಕರ್‌ ಮೂರ್ತಿ, ಶುಕ್ರುನಾಯ್ಕ, ಮಹೇಂದ್ರ, ಚಾಲಕ ಮಹೇಶ್‌, ಪಾಳ್ಯ ಹೋಬಳಿ ರಾಜಸ್ವ ನೀರಿಕ್ಷಕ ಎಂ.ಮಹದೇವಸ್ವಾಮಿ, ಸತ್ತೇಗಾಲ ಗ್ರಾಮಲೆಕ್ಕಿಗ ಸುರೇಶ್‌ ಇದ್ದರು.

click me!