
ರಾಯಚೂರು [ಜ.21]: ಜೀವದ ಹಂಗು ತೊರೆದು ಪ್ರವಾಹ ಮಧ್ಯೆ ಆ್ಯಂಬ್ಯುಲೆನ್ಸ್ ಗೆ ದಾರಿ ತೋರಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ.
ರಾಯಚೂರು ಜಿಲ್ಲೆ ದೇವದುರ್ಗಾ ತಾಲೂಕಿನ ಹಿರೇರಾಯನ ಕುಂಪಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಬಾಲಕ ವೆಂಕಟೇಶ್ ಗೆ ಭಾರತ ಸರ್ಕಾರದಿಂದ ಪ್ರಶಸ್ತಿ ಪ್ರಕಟವಾಗಿದೆ. ಜನವರಿ 26 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಕಳೆದ ಆಗಸ್ಟ್ ತಿಂಗಳ 10ನೇ ತಾರೀಕು ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಈ ಸಂದರ್ಭದಲ್ಲಿ ಹಿರೇರಾಯನಕುಂಪಿ ಹಾಗು ಗೂಗಲ್ ಮಧ್ಯದ ಸೇತುವೆ ಮುಳುಗಡೆ ಆಗಿತ್ತು. ಬೆಂಗಳೂರಿನಿಂದ ಯಾದಗಿರಿ ಜಿಲ್ಲೆ ಗೆ ಹೋಗಬೇಕಾದ ಆ್ಯಂಬುಲೆನ್ಸ್ ಚಾಲಕ ದಾರಿ ಕಾಣದೆ ಪರದಾಡುತ್ತಿದ್ದ.
ನೆರೆ ವೇಳೆ ಆ್ಯಂಬುಲೆನ್ಸ್‌ಗೆ ದಾರಿ ತೋರಿದ್ದ ಬಾಲಕಗೆ ಖುಲಾಯಿಸಿದ ಭರ್ಜರಿ ಅದೃಷ್ಟ!...
11 ವರ್ಷದ ಬಾಲಕ ವೆಂಕಟೇಶ್ ತನ್ನ ಜೀವದ ಹಂಗು ತೊರೆದು ಆ್ಯಂಬ್ಯುಲೆನ್ಸ್ ಗೆ ದಾರಿ ತೋರಿಸಿದ್ದನು. ಈ ಬಾಲಕನ ಸಾಹಸವನ್ನು ಗುರುತಿಸಿ ರಾಯಚೂರು ಜಿಲ್ಲಾಡಳಿತ ಆಗಸ್ಟ್ 15ರಂದು ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.
ಎದ್ದು ಬಿದ್ದು ಆ್ಯಂಬುಲೆನ್ಸ್’ಗೆ ದಾರಿ ತೋರಿದ ಬಾಲಕನಿಗೆ ಶೌರ್ಯ ಪ್ರಶಸ್ತಿ!...
ಕೇರಳದ ಸ್ವಯಂಸೇವಾ ಸಂಸ್ಥೆ ಸೇರಿದಂತೆ ರಾಜ್ಯದ ಹಲವು ಕಡೆ ಬಾಲಕ ವೆಂಕಟೇಶನನ್ನು ಸನ್ಮಾನಿಸಲಾಗಿತ್ತು. ಈಗ ಕೇಂದ್ರ ಸರಕಾರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ ಪಡೆಯುತ್ತಿರುವ ಜಿಲ್ಲೆಯ ಮೊದಲ ಬಾಲಕ ಎಂಬ ಹೆಗ್ಗಳಿಕೆಯೂ ವೆಂಕಟೇಶ್ ಪಾತ್ರವಾಗಲಿದ್ದಾನೆ.
"
ಉತ್ತರ ಕನ್ನಡ ಬಾಲಕಿಗೂ ಪ್ರಶಸ್ತಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದ ಆರತಿ ಶೇಟ್(9) 2018ರ ಜು.12ರಂದು ತನ್ನ ಮನೆಯ ಬಳಿ ಎರಡು ವರ್ಷದ ಸೋದರ ಕಾರ್ತಿಕ್‌ನೊಂದಿಗೆ ಟ್ರೈಸೈಕಲ್…ನಲ್ಲಿ ಆಡುತ್ತಿದ್ದಳು. ಕಾರ್ತಿಕ್ ಟ್ರೈ ಸೈಕಲಲ್ಲಿ ಕೂತಿದ್ದರೆ ಆರತಿ ಆ ಸೈಕಲ್ ಅನ್ನು ತಳ್ಳುತ್ತಿದ್ದಳು. ಇದ್ದಕ್ಕಿದ್ದಂತೆ ಓಡಿ ಬಂದ ಹಸುವೊಂದು ಇವರಿಬ್ಬರನ್ನು ಹಾಯಲು ಮುಂದಾದಾಗ ತನ್ನ ಪ್ರಾಣವನ್ನು ಲೆಕ್ಕಿಸದೇ ತಮ್ಮನನ್ನು ಎತ್ತಿಕೊಂಡು ಓಡಿ ಅದರ ಕೊಂಬಿನ ದಾಳಿಯಿಂದ ರಕ್ಷಿಸಿದ್ದಳು. ಇವಳೂ ಕೂಡ ಇದೀಗ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.