ಅತ್ತ ಕೈಕೊಟ್ಟ ತೊಗರಿ, ಇತ್ತ ಫೈನಾನ್ಸ್ ಕಾಟ, ವಿಜಯಪುರದಲ್ಲಿ ಪ್ರಾಣ ಬಿಟ್ಟ ರೈತ!

Published : Feb 07, 2025, 12:19 PM IST
ಅತ್ತ ಕೈಕೊಟ್ಟ ತೊಗರಿ, ಇತ್ತ ಫೈನಾನ್ಸ್ ಕಾಟ, ವಿಜಯಪುರದಲ್ಲಿ ಪ್ರಾಣ ಬಿಟ್ಟ ರೈತ!

ಸಾರಾಂಶ

ಸಿಎಂ ಸಿದ್ದರಾಮಯ್ಯ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಳಿಕವೂ ರಾಜ್ಯದಲ್ಲಿ ಜನರಿಗೆ ಮೈಕ್ರೋ ಪೈನಾನ್ಸ್ ಕಾಟ ತಪ್ಪಿಲ್ಲ.‌ ರಾಜ್ಯದಲ್ಲಿ ಫೈನಾನ್ಸ್ ಟಾರ್ಚರ್‌ಗೆ ನೊಂದು ಆತ್ಮಹತ್ಯೆ ಮಾಡಿಕೊಳ್ತಿರೋರ ಸಂಖ್ಯೆ ಹೆಚ್ಚಾಗ್ತಿದೆ. 

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಫೆ.07): ಸಿಎಂ ಸಿದ್ದರಾಮಯ್ಯ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಳಿಕವೂ ರಾಜ್ಯದಲ್ಲಿ ಜನರಿಗೆ ಮೈಕ್ರೋ ಪೈನಾನ್ಸ್ ಕಾಟ ತಪ್ಪಿಲ್ಲ.‌ ರಾಜ್ಯದಲ್ಲಿ ಫೈನಾನ್ಸ್ ಟಾರ್ಚರ್‌ಗೆ ನೊಂದು ಆತ್ಮಹತ್ಯೆ ಮಾಡಿಕೊಳ್ತಿರೋರ ಸಂಖ್ಯೆ ಹೆಚ್ಚಾಗ್ತಿದೆ. ಈಗ ಮತ್ತೆ ಮೈಕ್ರೋ ಪೈನಾನ್ಸ್ ಕಾಟಕ್ಕೆ ವಿಜಯಪುರ ಜಿಲ್ಲೆಯಲ್ಲಿ ತೈತನೊಬ್ಬ ತೊಗರಿಗೆ ಸಿಂಪಡಿಸುವ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. 8 ಮೈಕ್ರೋ ಫೈನಾನ್ಸ್ ಗಳಲ್ಲಿ ಲಕ್ಷ-ಲಕ್ಷ ಸಾಲ ಪಡೆದಿದ್ದಾತ ಸಾಲ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ವಿಜಯಪುರದಲ್ಲು ಮೈಕ್ರೋ ಫೈನಾನ್ಸ್ ಅಟ್ಟಹಾಸ: ಮೈಕ್ರೊ ಫೈನಾನ್ಸ್ ಕಂಪನಿಯವರ ಕಿರುಕುಳ ತಾಳಲಾರದೆ ರೈತ ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಸಲಾದಹಳ್ಳಿ ಗ್ರಾಮದ ಬಸನಗೌಡ ಹಣಮಂತ್ರಾಯಗೌಡ ಬಿರಾದಾರ(52) ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಸುಮಾರು 8 ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಾಲ‌ ಪಡೆದಿದ್ದ. ಸಾಲ ಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಪತ್ನಿ ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಕ್ರೋ ಫೈನಾನ್ಸ್‌ ಸಾಲ ವಸೂಲಾತಿಗೆ ಗೂಂಡಾಗಳ ಬಳಕೆ ಸಹಿಸಲ್ಲ: ಶಾಸಕ ಕೋಳಿವಾಡ

8 ಮೈಕ್ರೋ ಫೈನಾನ್ಸ್‌ಗಳಲ್ಲಿ ಲಕ್ಷ-ಲಕ್ಷ ಸಾಲ: ರೈತ ಬಸನಗೌಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 3.5 ಲಕ್ಷ ರೂಪಾಯಿ ಸಾಲ ಪಡೆದು ಸುಮಾರು 4.2ಎಕರೆ ಜಮೀನಿನಲ್ಲಿ ಜಿ.ಆರ್.ಜಿ ತೋಗರಿ ಬೆಳೆದಿದ್ದ. ಬೆಳೆ ಕೈ ಕೊಟ್ಟ ಕಾರಣ ಮನನೊಂದಿದ್ದು. ಉಪಜೀವನಕ್ಕೆ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿ ಸಾಲ ತೀರಿಸಲು ಕೆಂಭಾವಿಯ ವಿವಿಧ ಕಂಪನಿಗಳಲ್ಲಿ ಅಂದರೆ, ಕೆಂಭಾವಿಯ ಮೈಕ್ರೋ ಫೈನಾನ್ಸ್ ನಲ್ಲಿ 1ಲಕ್ಷ, ಎಲ್.ಆಂಡ್.ಟಿ ನಲ್ಲಿ 1.10ಲಕ್ಷ, ನವಚೇತನ ನಲ್ಲಿ 1ಲಕ್ಷ,ಈ.ಎಸ್.ಎಫ್.ಎಸ್ ನಲ್ಲಿ 75ಸಾವಿರ, ಚೇತನ್ಯ ನಲ್ಲಿ 1ಲಕ್ಷ,ಸುಗ್ಮಯ್ಯಾ ನಲ್ಲಿ 50ಸಾವಿರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ನಲ್ಲಿ 1ಲಕ್ಷ, ಆರ್.ಬಿ.ಎಲ್. ತಾಳಿಕೋಟಿನಲ್ಲಿ 1ಲಕ್ಷ ರೂಪಾಯಿ ಹೀಗೆ ಒಟ್ಟು-7.35ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ..

ಸಾಲ ತೀರಿಸಲು ಪರದಾಟ ; ಅವಮಾನಕ್ಕೆ ನೊಂದು ಆತ್ಮಹತ್ಯೆ: ಸಾಲ ತೀರಿಸಲು ಪರದಾಡುತ್ತಿದ್ದ ಗುರುವಾರ ಸಾಯಂಕಾಲ ಹೊಲಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದ ಕಾರಣ ತೊಗರಿಗೆ ಹೊಡೆಯುವ ಔಷಧಿ ಸೇವಿಸಿ ಅತ್ಮಹತ್ಯೆ ಪ್ರಯತ್ನಿಸಿದ್ದಾನೆ. ಹೊಲದಿಂದ ಬಂದು ನೋಡುವುದರಲ್ಲಿ ಔಷಧಿ ಸೇವಿಸಿ ಒದ್ದಾಡುವುದನ್ನು ಗಮನಿಸಿ  ವಿಚಾರಿಸಿದಾಗ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಸಿದ್ದೇನೆ ಎಂದು ಹೇಳಿದ್ದರು. ನಂತರ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಲು ಪ್ರಯತ್ನಿಸಿದರು ಆಗದ ಕಾರಣ ಕಲಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ ಮಹಾದೇವಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಕಲಕೇರಿ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಕ್ರೋ ಫೈನಾನ್ಸ್‌ಗಳಿಂದ ಬಡವರಿಗೆ ತೊಂದರೆಯಾದರೇ ಸಹಿಸಲ್ಲ: ಸಚಿವ ತಂಗಡಗಿ

ಅತ್ತ ತೊಗರಿ ಬೆಳೆಯು ನಾಶ ; ಇತ್ತ ಫೈನಾನ್ಸ್ ಕಾಟ: ರೈತ ಬಸನಗೌಡ ಸಾಲ ಮಾಡಿ ಜಿ.ಆರ್.ಜಿ ತೊಗರಿ ತಂದು 4.2ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದ. ಆಳೆತ್ತರದ ಬೆಳೆದ ತೊಗರಿಬೇಳೆ ಕೈ ಕೊಟ್ಟ ಕಾರಣ ದಿಕ್ಕು ತೋರಿಸದೆ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿ ಅವರ ಕಿರಿಕಿರಿಗೆ ಮನೆಯಲ್ಲಿದ್ದ ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ