Vijayapura: ಗುಮ್ಮಟನಗರಿಯಲ್ಲಿ ಹೋರಿಗೂ ಬರ್ತಡೇ: ಊರಿಗೆ ಊಟ ಹಾಕಿದ ಅನ್ನದಾತ!

By Govindaraj SFirst Published Jan 28, 2023, 10:23 PM IST
Highlights

ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳಿಗೆ ಬರ್ತಡೇ ಮಾಡಿ ಕುಟುಂಬಸ್ಥರು ಸಂಭ್ರಮಿಸ್ತಾರೆ. ಅಷ್ಟೆ ಯಾಕೆ ದೊಡ್ಡವರ ಬರ್ತಡೇಗಳು ಗ್ರ್ಯಾಂಡ್ ಆಗಿ ನಡೆಯುತ್ತವೆ. ಅಪರೂಪಕ್ಕೆ ಮನೆಯಲ್ಲಿ ಸಾಕಿದ ಶ್ವಾನಕ್ಕು ಬರ್ತಡೇ ಮಾಡೋದನ್ನ ನಾವೆಲ್ಲ ಕಂಡಿದ್ದೇವೆ. 

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜ.28): ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳಿಗೆ ಬರ್ತಡೇ ಮಾಡಿ ಕುಟುಂಬಸ್ಥರು ಸಂಭ್ರಮಿಸ್ತಾರೆ. ಅಷ್ಟೆ ಯಾಕೆ ದೊಡ್ಡವರ ಬರ್ತಡೇಗಳು ಗ್ರ್ಯಾಂಡ್ ಆಗಿ ನಡೆಯುತ್ತವೆ. ಅಪರೂಪಕ್ಕೆ ಮನೆಯಲ್ಲಿ ಸಾಕಿದ ಶ್ವಾನಕ್ಕು ಬರ್ತಡೇ ಮಾಡೋದನ್ನ ನಾವೆಲ್ಲ ಕಂಡಿದ್ದೇವೆ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ರೈತರೊಬ್ಬರು ತಾವು ಸಾಕಿದ ಹೋರಿಗೆ ಬರ್ತಡೇ ಆಚರಿಸಿ ಅಚ್ಚರಿ ಮೂಡಿಸಿದ್ದಾರೆ.

ಹೋರಿಯ ಬರ್ತಡೇ ಆಚರಿಸಿದ ರೈತ: ಹೌದು! ಇದು ಅಚ್ಚರಿಯಾದ್ರು ನಿಜ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ರೈತರೊಬ್ಬರು ತಾವು ಸಾಕಿದ ಹೋರಿಯ ಬರ್ತಡೇ ಆಚರಿಸಿದ್ದಾರೆ. ಗ್ರಾಮದಲ್ಲಿ ಜನರನ್ನ ಸೇರಿಸಿ ಅದ್ದೂರಿಯಾಗಿ ಹೋರಿಯ ಬರ್ತಡೇ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.. ಮಸಬಿನಾಳ ರೈತ ಮಲ್ಲಪ್ಪ ಗಾಜರೆ ಹೋರಿಯ ಬರ್ತಡೇ ಆಚರಿಸಿದ್ದಾರೆ. 

ಬಿಜೆಪಿಗೆ ಕಾಂಗ್ರೆಸ್‌ ಕಂಡರೆ ಭಯ: ಸಿದ್ದರಾಮಯ್ಯ ತಿರುಗೇಟು

ಪ್ರೀತಿಯ ರಾಜನಿಗೆ 5ನೇ ವರ್ಷದ ಬರ್ತಡೇ: ರೈತರಿಗು ಅವರು ಸಾಕಿದ ಜಾನುವಾರುಗಳಿಗೆ ಎಲ್ಲಿಲ್ಲ್ ನಂಟು. ಮನೆಯಲ್ಲಿ ಸಾಕಿದ ಆಕಳು, ಹೋರಿ, ಎತ್ತು, ಮೇಕೆ, ಕುರಿಗಳ ಮೇಲೆ ರೈತರಿಗೆ ಎಲ್ಲಿಲ್ಲದ ಅಕ್ಕರೆ ಇರುತ್ತೆ. ಹಾಗೆಯೆ ಮಲ್ಲಪ್ಪ ಗಜರೆ ಕೂಡ 5 ವರ್ಷದ ಹಿಂದೆ ತಮ್ಮ ಮನೆಯಲ್ಲಿ ಹುಟ್ಟಿದ ಹೋರಿಗೆ ಬರ್ತಡೇ ಆಚರಿಸಿದ್ದಾರೆ.‌ ಹೋರಿ ಹುಟ್ಟಿದಾಗಲೇ ಹೋರಿಗೆ ಪ್ರೀತಿಯಿಂದ ರಾಜ ಅಂತಾ ಹೆಸರಿಟ್ಟಿದ್ದಾರೆ. ಪ್ರತಿ ವರ್ಷವೂ ರಾಜನ ಬರ್ತಡೇ ಮಾಡುತ್ತ ಬರ್ತಿದ್ದಾರೆ.

ಹೋರಿ ಹುಟ್ಟುಹಬ್ಬ, ಊರಿಗೆ ಊಟ: ಅನ್ನದಾನ ಹೋರಿಯ ಬರ್ತಡೇ ಹಿನ್ನೆಲೆ, ಮಸಿಬಿನಾಳ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿ ವರ್ಷ ಜನೆವರಿ 26 ರಂದು ಹೋರಿಯ ಬರ್ತಡೇ ಆಚರಿಸ್ತಾರೆ. ಅಂದು ಊರಿಗೆ ಊಟ ಹಾಕುತ್ತಾರೆ. ಡಿಜೆ ಹಚ್ಚಿ ಯುವಕರು ಸೇರಿ ಸಂಭ್ರಮಿಸುತ್ತಾರೆ. ಈ ವರ್ಷವೂ 5 ನೇ ವರ್ಷದ ಬರ್ತಡೇಯನ್ನ ಸಂಭ್ರಮದಿಂದ ಆಚರಿಸಿದ್ದಾರೆ‌. 

ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್‌

5 ಕೆ.ಜಿ ಕೇಕ್ ಕಟ್ ಮಾಡಿದ ಮಾಲೀಕ: ರಾಜನ 5ನೇ ವರ್ಷದ ಬರ್ತಡೇಗೆ ಹೋರಿ ಮಾಲೀಕ ಮಲ್ಲಪ್ಪ 5 ಕೆ.ಜಿಯ ಕೇಕ್ ರೆಡಿ ಮಾಡಿಸಿದ್ದಾನೆ. ಊರ ಜನರನ್ನ ಸೇರಿಸಿ ಬರ್ತಡೇ ಆಚರಿಸಿದ್ದಾನೆ. ಒಂದನೇ ವರ್ಷದ ಬರ್ತಡೇಗೆ ಒಂದು ಕೆ.ಜಿ, ಎರಡನೇ ವರ್ಷದ ಬರ್ತಡೇಗೆ ಎರಡು ಕೆ.ಜಿ, ಮೂರನೇ ವರ್ಷಕ್ಕೆ‌ ಮೂರು ಕೆ.ಜಿ, ಹೀಗೆ ಈ 5 ನೇ ವರ್ಷದ ಬರ್ತಡೇ ಗೆ 5 ಕೆ.ಜಿ ಕೇಕ್ ಕಟ್ ಮಾಡಿದ್ದಾರೆ‌. ಹೀಗೆ ಪ್ರತಿ ವರ್ಷವೂ ಒಂದೊಂದು ಕೆ.ಜಿ ಹೆಚ್ಚು ಕೇಕ್ ತಯಾರಿಸಿ ಕಟ್ ಮಾಡುವುದಾಗಿ ಮಾಲೀಕ ಮಲ್ಲಪ್ಪ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್‌ಗೆ ಮಾಹಿತಿ ನೀಡಿದ್ದಾರೆ.

click me!