ಮುಂಬರೋ ವಿಧಾನಸಭಾ ಚುನಾವಣೆಯಲ್ಲಿ ತರೀಕೆರೆ ಕ್ಷೇತ್ರದಿಂದ ಗೋಪಿಕೃಷ್ಣ ಅವರಿಗೆ ಟಿಕೆಟ್ ಸಿಕ್ಕಿ, ಅವರೇ ಗೆಲ್ಲುವಂತೆ ಆಶೀರ್ವದಿಸು ತಾಯೆ ಎಂದು ಭಕ್ತರು ಬಾಳೆಹಣ್ಣಿನ ಮೇಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ಹೆಸರು ಬರೆದು ರಥದ ಮೇಲೆ ಎಸೆದಿರೋ ಘಟನೆ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.5): ಮುಂಬರೋ ವಿಧಾನಸಭಾ ಚುನಾವಣೆಯಲ್ಲಿ ತರೀಕೆರೆ ಕ್ಷೇತ್ರದಿಂದ ಗೋಪಿಕೃಷ್ಣ ಅವರಿಗೆ ಟಿಕೆಟ್ ಸಿಕ್ಕಿ, ಅವರೇ ಗೆಲ್ಲುವಂತೆ ಆಶೀರ್ವದಿಸು ತಾಯೆ ಎಂದು ಭಕ್ತರು ಬಾಳೆಹಣ್ಣಿನ ಮೇಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ಹೆಸರು ಬರೆದು ರಥದ ಮೇಲೆ ಎಸೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಅಜ್ಜಂಪುರ ತಾಲೂಕಿನಲ್ಲಿ ಇತಿಹಾಸ ಪ್ರಸಿದ್ಧ ಅಂತರಘಟ್ಟಮ್ಮನ ಜಾತ್ರೆ ನಡೆಯುತ್ತಿದೆ. ಅಂತರಘಟ್ಟಮ್ಮ ಅಂದ್ರೆ ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಭಾರೀ ಭಯ ಹಾಗೂ ನಂಬಿಕೆ. ಈ ಜಾತ್ರೆಗೆ ಹೋದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ಅಭಿಮಾನಿಗಳು ಬಾಳೆಹಣ್ಣಿನ ಮೇಲೆ ಗೋಪಿಕೃಷ್ಣ ಹೆಸರು ಬರೆದು, ತರೀಕೆರೆ ಎಂಎಲ್ಎಗೋಪಿಕೃಷ್ಣ ಎಂದು ಬರೆದು ತೇರಿನ ಮೇಲೆ ಎಸೆದಿದ್ದಾರೆ.
undefined
ತರೀಕೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಭಾರೀ ಲಾಬಿ ನಡೆಯುತ್ತಿದೆ. ಈ ಬಾರಿ ತರೀಕೆರೆಯಲ್ಲಿ ಕಾಂಗ್ರೆಸ್ ಟಿಕೆಟ್ 13 ಜನ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್ ಹಾಗೂ ಹೆಚ್.ಎಂ. ಗೋಪಿಕೃಷ್ಣ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಒಬ್ಬರ ಮೇಲೋಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಂಡು ನನಗೆ ಟಿಕೆಟ್ ಎಂದು ಓಡಾಡುತ್ತಿದ್ದಾರೆ. ಕೆಲ ಸಮುದಾಯದ ಮುಖಂಡರು ಹಾಗೂ ಪಕ್ಷದ ಮುಖಂಡರೂ ಕೂಡ ಇವರಿಗೆ ಟಿಕೆಟ್ ನೀಡಬೇಕೆಂದು ಬೆಂಗಳೂರಿಗೆ ಎಡತಾಕುತ್ತಿದ್ದಾರೆ. ಆದರೆ, ಟಿಕೆಟ್ ಯಾರಿಗೆ ಅನ್ನೋದು ಇನ್ನು ಕನ್ಫರ್ಮ್ ಆಗಿಲ್ಲ. ಆದರೆ, ಲಾಬಿ ಮಾತ್ರ ದಿನದಿಂದ ದಿನಕ್ಕೆ ಹೆಚ್ವುತಲೇ ಇದೆ. ಈ ಮಧ್ಯೆ ಟಿಕೆಟ್ ಯಾರಿಗೆ ಕೊಡಬೇಕೆಂದು ಕಾಂಗ್ರೆಸ್ ವರಿಷ್ಠರು ಕೂಡ ತಲೆಕೆಡಿಸಿಕೊಂಡಿದ್ದಾರೆ.
ಭ್ರಷ್ಟಾಚಾರ ಬಯಲಿಗೆಳೆದ ಕಾರಣಕ್ಕೆ ಬಂಧನ, ಸುಳ್ಳು ವದಂತಿಗೆ ಲೋಕೇಶ್ ತಾಳಿಕಟ್ಟೆ ಖಂಡನೆ:
ತರೀಕೆರೆ: ಶಿಕ್ಷಣ ಇಲಾಖೆಯಲ್ಲಿ ಮಹಾ ಭ್ರಷ್ಟಾಚಾರ ಬಯಲಿಗೆಳೆದ ಕಾರಣಕ್ಕೆ ಬಂಧನ ಎಂಬ ಸುಳ್ಳು ವದಂತಿಯನ್ನು ಖಂಡಿಸುವುದಾಗಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಹೇಳಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ರಥಯಾತ್ರೆ ಮಹಾಸಂಗಮ: ಸಿ.ಟಿ.ರವಿ
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.1 ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ರುಪ್ಸಾ ಅಧ್ಯಕ್ಷನಾದ ನಾನು ನಿರೀಕ್ಷಣಾ ಜಾಮೀನು ಅದೇಶದೊಂದಿಗೆ ವಿಧಾನಸೌಧದ ಪೋಲೀಸ್ ಠಾಣೆಗೆ ಸಲ್ಲಿಸಲು ಹೋಗಿದ್ದು ಈ ಸಂದರ್ಭವನ್ನು ಬಳಸಿಕೊಂಡು ಕೆಲ ಕಿಡಿಗೇಡಿಗಳು ನನ್ನನ್ನು ಬಂಧಿಸಲಾಗಿದೆ ಎಂಬ ಸುಳ್ಳು ವದಂತಿ ಹಬ್ಬಿಸಿದ್ದಾರೆ, ಈ ಮೂಲಕ ನನ್ನನ್ನು ತೇಜೋವಧೆ ಮಾಡಲು ಪ್ರಯತ್ನಿಸುವುದು ಹಾಸ್ಯಾಸ್ಪದ, ಭ್ರಷ್ಠಾಚಾರದ ವಿರುದ್ಧ ನನ್ನ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚುನಾವಣೆ ಗೆಲ್ಲಲು ಬಿಜೆಪಿಯಿಂದ ರಥಯಾತ್ರೆ, ಕಾಂಗ್ರೆಸ್‌ನಲ್ಲಿ ಹೆಚ್ಚಾಯ್ತಾ ಅಸಾಮಾಧಾನ ಕಿಡಿ?
ನಾನು ಕಾನೂನು ಬದ್ಧವಾಗಿ ಸರ್ಕಾರದ ಅನುಮತಿ ಪಡೆದೆ ಕಳೆದ 13 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ತಾಳಿಕಟ್ಟೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾದರಿಯಾಗಿರುವುದು ವಾಸ್ತವ ಸತ್ಯ, ನಮ್ಮ ಶಾಲೆಗೆ ಕೆಟ್ಟಹೆಸರು ತರಲು ಜವಾಬ್ದಾರಿಯುತ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೇರಿದಂತೆ ಇವರೂ ಪ್ರಯತ್ನಿಸಿದ್ದು ನನ್ನ ಮೇಲಿರುವ ಇವರ ಮನಸ್ಥಿತಿಯನ್ನು ತೋರಿಸುತ್ತದೆ. ಇವರ ಈ ವ್ಯರ್ಥ ಪ್ರಯತ್ನ ಯಾವುದೇ ಕಾರಣದಿಂದಲೂ ಯಶಸ್ವಿಯಾಗುವುದಿಲ್ಲ, ಈ ರೀತಿಯ ಅಪಪ್ರಚಾರ ಮಾಡಿರುವ ಇಲಾಖೆ ಮುಖ್ಯಸ್ಥರ ವಿರುದ್ಧ ಈಗಾಗಲೇ ಕಾನೂನು ರೀತಿ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.