- ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಬಿ ಶೇಷಾದ್ರಿ ಇನ್ನಿಲ್ಲ
-ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಸದಸ್ಯರಾಗಿದ್ದರು
-ಬಳ್ಳಾರಿಯ ಸ್ವಗೃಹದಲ್ಲಿ ನಿಧನರಾಗಿದ್ದರು.
ಬಳ್ಳಾರಿ (ಆ. 10): ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಬಿ ಶೇಷಾದ್ರಿ (80) ಬಳ್ಳಾರಿಯ ಸ್ವಗೃಹದಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಇಂದು ಸಂಜೆಗೆ ಅಂತ್ಯಕ್ರಿಯೆ ನಡೆಯಲಿದೆ.
ಬಿ ಶೇಷಾದ್ರಿ ಕಳೆದ ಹತ್ತು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಸದಸ್ಯರು ಆಗಿದ್ದರು. ಹೈಕ ಭಾಗದ 371 ಜೆ ಕಲಂ ಅನುಷ್ಠಾನಕ್ಕೆ ನಂಜುಂಡಪ್ಪ ವರದಿ ಪ್ರಮುಖ ಕಾರಣವಾಗಿತ್ತು. ಹರಪನಹಳ್ಳಿ ಹಿಂದುಳಿದ ತಾಲೂಕು ಎಂದು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಈ ಸಮಿತಿಯಲ್ಲಿ ಶೇಷಾದ್ರಿ ಸದಸ್ಯರಾಗಿದ್ದರು.