ಮಾಜಿ ಸಚಿವ ಈಟಿ ಶಂಭುನಾಥ ವಿಧಿವಶ

By Web Desk  |  First Published Aug 9, 2018, 5:02 PM IST

1989ರಲ್ಲಿ ನಡೆದ ವಿದಾನಸಭೆ ಚುನಾವಣೆಯಲ್ಲಿ ಹೂವಿನ ಹಡಗಲಿ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ ವಿರುದ್ದ  ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.


ಬಳ್ಳಾರಿ(ಆ.09): ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಈಟಿ ಶಂಭುನಾಥ[77] ವಿಧಿವಶರಾಗಿದ್ದಾರೆ.

ಕರುಳು ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. 1941 ಡಿಸೆಂಬರ್  23ರಂದು ಹಡಗಲಿಯಲ್ಲಿ ಜನಿಸಿದ್ದರು. 1990ರ ಬಂಗಾರಪ್ಪ ಸರ್ಕಾರದಲ್ಲಿ ಅರಣ್ಯ ಖಾತೆ ಸಚಿವರಾಗಿದ್ದರು.

Tap to resize

Latest Videos

1989ರಲ್ಲಿ ನಡೆದ ವಿದಾನಸಭೆ ಚುನಾವಣೆಯಲ್ಲಿ ಹೂವಿನ ಹಡಗಲಿ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ ವಿರುದ್ದ  ಸ್ಪರ್ಧಿಸಿ   ಗೆಲುವು ಸಾಧಿಸಿದ್ದರು.  1992ರಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕ ಗುರು ಪೀಠ ಸ್ಥಾಪಿಸುವಲ್ಲಿ ಇವರ ಪಾತ್ರ ಪ್ರಮುಖವಾದುದು. ನಾಳೆ ಮದ್ಯಾಹ್ನ ತಮ್ಮ ಸ್ವ ಗ್ರಾಮದಲ್ಲಿ ಹಡಗಲಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

click me!