ಮೃತ ವ್ಯಕ್ತಿಯ ಬಿಲ್ ಪಾವತಿಗೆ ಪರದಾಟ

Kannadaprabha News   | Asianet News
Published : Apr 11, 2020, 07:49 AM IST
ಮೃತ ವ್ಯಕ್ತಿಯ ಬಿಲ್ ಪಾವತಿಗೆ ಪರದಾಟ

ಸಾರಾಂಶ

ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟವ್ಯಕ್ತಿಯ ಚಿಕಿತ್ಸೆಯ ಬಿಲ್‌ ಪಾವತಿಗೆ ಪರದಾಡುತ್ತಿದ್ದ ಕುಟುಂಬಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿ ಮೃತದೇಹ ಹಸ್ತಾಂತರಕ್ಕೆ ಸೂಚಿಸಿದ ವಿದ್ಯಮಾನ ನಡೆದಿದೆ..

ಮಂಗಳೂರು(ಏ.11): ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟವ್ಯಕ್ತಿಯ ಚಿಕಿತ್ಸೆಯ ಬಿಲ್‌ ಪಾವತಿಗೆ ಪರದಾಡುತ್ತಿದ್ದ ಕುಟುಂಬಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿ ಮೃತದೇಹ ಹಸ್ತಾಂತರಕ್ಕೆ ಸೂಚಿಸಿದ ವಿದ್ಯಮಾನ ನಡೆದಿದೆ.

ಬಂಟ್ವಾಳದ ಲಕ್ಷ್ಮಣ ಭಂಡಾರಿ (48) ಎಂಬವರನ್ನು ಮಾ.28ರಂದು ಅವರ ಸಂಬಂಧಿಕರು ವೆನ್ಲಾಕ್‌ ಆಸ್ಪತ್ರೆಗೆ ತೆರಳುವ ಬದಲು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ದಾಖಲಾದ ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ರೋಗಿಯ ಪರವಾಗಿ 80 ಸಾವಿರ ರು. ಮೊತ್ತವನ್ನು ಕೂಡಲೇ ಪಾವತಿಸುವಂತೆ ಸೂಚಿಸಿದ್ದರು. ಇದರಿಂದ ಸಂಬಂಧಿಕರು ತಮ್ಮಲ್ಲಿದ್ದ ಹಣ, ಒಡವೆ ಅಡವಿಟ್ಟು ಹಣ ಹೊಂದಿಸಿದ್ದರು. ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿ ಶಿಫಾರಸು ಪತ್ರ ತಂದರೆ ಆಯುಷ್ಮಾನ್‌ ಯೋಜನೆಯಿಂದ ಮೊತ್ತ ಭರಿಸಬಹುದು ಎಂಬ ಕನಿಷ್ಠ ಮಾಹಿತಿಯನ್ನೂ ಖಾಸಗಿ ಆಸ್ಪತ್ರೆ ಅಧಿಕಾರಿಗಳು ನೀಡಿರಲಿಲ್ಲ. ಇದೇ ವೇಳೆ ರೋಗಿ ಲಕ್ಷ್ಮಣ ಭಂಡಾರಿ ಸಾವಿಗೀಡಾಗಿದ್ದರು. ಮೃತದೇಹ ಪಡೆಯಲು 55,000 ರು. ಕೂಡಲೇ ಪಾವತಿಸುವಂತೆ ಆಸ್ಪತ್ರೆ ಅಧಿಕಾರಿಗಳು ಪಟ್ಟುಹಿಡಿದಿದ್ದರು. ಈ ವಿಚಾರ ತಿಳಿದ ಡಿವೈಎಫ್‌ಐ ಸಂಘಟನೆ ಮುಖಂಡರು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ತಂದರು.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

ಮೃತರ ಕುಟುಂಬದಲ್ಲಿ ಹಣ ಇಲ್ಲದ ಕಾರಣ ಬಾಕಿ ಮೊತ್ತವನ್ನು ಆಯುಷ್ಮಾನ್‌ ಮೂಲಕ ಭರಿಸಲಾಗುವುದು. ಆದ್ದರಿಂದ ಮೃತದೇಹವನ್ನು ಮನೆಯವರಿಗೆ ಕೂಡಲೇ ಹಸ್ತಾಂತರಿಸುವಂತೆ ಆರೋಗ್ಯಾಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಸೂಚನೆ ನೀಡುವ ಮೂಲಕ ಸಮಸ್ಯೆ ಬಗೆಹರಿಸಲಾಯಿತು.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!