ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

By Kannadaprabha News  |  First Published Apr 11, 2020, 7:31 AM IST

ಉದ್ಯಾವರದ ಪಿತ್ರೋಡಿ ಗ್ರಾಮದ ಪಾಪನಾಶಿನಿ ಹೊಳೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಮೀನು ಹಿಡಿಯುತ್ತಿದ್ದವರ 11 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಫ್ತು ಮಾಡಿದ್ದಾರೆ.


ಉಡುಪಿ(ಏ.11): ಉದ್ಯಾವರದ ಪಿತ್ರೋಡಿ ಗ್ರಾಮದ ಪಾಪನಾಶಿನಿ ಹೊಳೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಮೀನು ಹಿಡಿಯುತ್ತಿದ್ದವರ 11 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಫ್ತು ಮಾಡಿದ್ದಾರೆ.

ಮೀನು ಒಂದು ಆಹಾರ ವಸ್ತುವಾಗಿರುವುದರಿಂದ, ಜಿಲ್ಲೆಯಲ್ಲಿ 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರದೆ ಸಾಂಪ್ರದಾಯಿಕವಾಗಿ ಮೀನುಗಾರಿಕೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಗುರುವಾರ ಸಂಜೆ ಈ ಹೊಳೆಯಲ್ಲಿ ಮುಳುಗಿ ಕಪ್ಪೆಚಿಪ್ಪು (ಮರುವಾಯಿ) ಮೀನು ತೆಗೆಯಲು ಯುವಕರ ದಂಡೆ ಮುಗಿಬಿದ್ದಿತ್ತು.

Latest Videos

undefined

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

ನದಿಯಲ್ಲಿ ನೀರು ಇಳಿಮುಖವಾಗುವಾಗ ಭರಪೂರ ಚಿಪ್ಪು ಮೀನು ಸಿಗುತ್ತದೆ. ಇದನ್ನು ಹಿಡಿಯಲು ನೂರಾರು ಮಂದಿ ಆಗಮಿಸಿದ್ದರು. ಅವರು ಸಾಮಾಜಿಕ ಅಂತರ, ನಿಷೇಧಾಜ್ಞೆ ಉಲ್ಲಂಘಿಸಿದ್ದರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ಜನರನ್ನು ಚದುರಿಸಿದರು ಮತ್ತು ಮೀನು ಹಿಡಿಯುತ್ತಿದ್ದವರ 11 ಬೈಕುಗಳನ್ನು ಜಪ್ತು ಮಾಡಿದ್ದಾರೆ.

ಮಲ್ಪೆಯಲ್ಲಿ ಬಲೆಗೆ ಬಿತ್ತು ಸ್ಪಾನರ್ ಕ್ರ್ಯಾಬ್..! 1 ಕೆಜಿ ತೂಗುತ್ತೆ ಈ ಏಡಿ

click me!