‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

By Web DeskFirst Published Nov 10, 2018, 9:19 PM IST
Highlights

‘ವಿಜ್ಞಾನ’ ಪತ್ರಿಕೆಯ ಶತಮಾನೋತ್ಸವ | ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ | ನ್ಯಾಷನಲ್ ಕಾಲೇಜಿನಲ್ಲಿ ಕಾರ್ಯಕ್ರಮ

ಬೆಂಗಳೂರು:  ‘ವಿಜ್ಞಾನ’ ಪತ್ರಿಕೆಯ ಶತಮಾನೋತ್ಸವದ ಅಂಗವಾಗಿ ಭಾನುವಾರ  ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಎಂಬ ವಿಚಾರದಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ, ಇಜ್ಞಾನ ಟ್ರಸ್ಟ್ ಮತ್ತು ಉದಯಭಾನು ಕಲಾಸಂಘವು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು,  ಡಾ. ಎ.ಎಚ್. ರಾಮರಾವ್ ಇದನ್ನು ಉದ್ಘಾಟಿಸಲಿದ್ದಾರೆ.

ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

ಸಂವಾದದಲ್ಲಿ, ಸುವರ್ಣನ್ಯೂಸ್.ಕಾಂ ನ ಮುಖ್ಯಸಂಪಾದಕ ಎಸ್.ಕೆ. ಶಾಮಸುಂದರ್, ಜಿ.ಕೆ. ರವೀಂದ್ರ ಕುಮಾರ್, ಟಿ.ಆರ್. ಶಿವಪ್ರಸಾದ್ ಮತ್ತು ರವಿಶಂಕರ್ ಭಟ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರೊ. ಎಸ್.ಎನ್. ನಾಗರಾಜ ರೆಡ್ಡಿ, ಪ್ರೊ. ಕೆ.ಎಸ್. ನಟರಾಜ್, ಎಂ. ನರಸಿಂಹ  ಹಾಗೂ ಟಿ.ಜಿ. ಶ್ರೀನಿಧಿ ಕೂಡಾ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳ: ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ, ನ್ಯಾಷನಲ್ ಕಾಲೇಜು, ಜಯನಗರ, ಬೆಂಗಳೂರು. ಬೆಳಗ್ಗೆ 10 ಗಂಟೆಗೆ

ತಲುಪುವುದು ಹೇಗೆ:

'ವಿಜ್ಞಾನ'ದ ಬಗ್ಗೆ:
ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು 1918ರಲ್ಲಿ ಪ್ರಾರಂಭಿಸಿದ್ದ 'ವಿಜ್ಞಾನ' ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಕನ್ನಡದ ಮೊದಲ ವಿಜ್ಞಾನ ಪತ್ರಿಕೆ.  'ವಿಜ್ಞಾನ' ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದೆ.

click me!