ಲಾಕ್‌ಡೌನ್‌: ವಲಸೆ ಕಾರ್ಮಿಕರ ಎಕೌಂಟ್‌ಗೆ 2000 ರೂಪಾಯಿ..?

By Kannadaprabha NewsFirst Published Apr 16, 2020, 7:27 AM IST
Highlights

ಕೂಳೂರಿನ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್‌ ಗೆ ಹಾಕಲಾಗುತ್ತದೆ ಎಂಬ ಮಾಹಿತಿ ಮಂಗಳೂರಿನ ಹಲವೆಡೆ ಹಬ್ಬಿತ್ತು. ನೂರಾರು ಮಂದಿ ಇದ್ದಕ್ಕಿದ್ದಂತೆ ಸಾಲುಗಟ್ಟಿನಿಂತ ಹಣಕ್ಕಾಗಿ ನಿಂತಿದ್ದರು.

ಮಂಗಳೂರು(ಏ.16): ಎರಡು ಸಾವಿರ ರು. ಹಣ ಸಿಗುತ್ತದೆ ಎಂದು ಯಾರೋ ಕಿಡಿಗೇಡಿಗಳು ಹಬ್ಬಿಸಿದ ವದಂತಿ ನಂಬಿ ನೂರಾರು ಮಂದಿ ಇದ್ದಕ್ಕಿದ್ದಂತೆ ಸಾಲುಗಟ್ಟಿನಿಂತ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ.

ಕೂಳೂರಿನ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್‌ ಗೆ ಹಾಕಲಾಗುತ್ತದೆ ಎಂದು ತಪ್ಪು ಮಾಹಿತಿ ಹರಡಿದ ಹಿನ್ನೆಲೆಯಲ್ಲಿ ಪುರುಷ- ಮಹಿಳೆ ಭೇದವಿಲ್ಲದೆ ಜನರು ತಂಡೋಪತಂಡವಾಗಿ ಮಧ್ಯಾಹ್ನದಿಂದಲೇ ಆಗಮಿಸತೊಡಗಿದ್ದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ 600-750 ಮಂದಿ ಪರಸ್ಪರ ತಾಗಿಕೊಂಡು ಕ್ಯೂನಲ್ಲಿ ನಿಂತಿದ್ದರು.

Fact Check: ಅ.15 ರ ವರೆಗೆ ಹೋಟೆಲ್‌ಗಳು ಬಂದ್‌ ಆಗುತ್ತಾ?

ಈ ಕುರಿತು ಮಾತನಾಡಿದ ಮಹಿಳೆಯೊಬ್ಬರು, ನಮ್ಮ ಬ್ಯಾಂಕ್‌ ಖಾತೆಗೆ 2 ಸಾವಿರ ರು. ಹಣ ಎಂದು ಯಾರೋ ಹೇಳಿದ್ದರು. ಅದಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಯಾರು ಹೇಳಿದ್ದು? ಎಂದು ಕೇಳಿದರೆ ಯಾರಲ್ಲೂ ನಿಖರವಾದ ಉತ್ತರ ಇಲ್ಲ. ಎಲ್ಲರೂ ಬ್ಯಾಂಕ್‌ ಪಾಸ್‌ ಪುಸ್ತಕ, ಆಧಾರ್‌ ಕಾರ್ಡ್‌ಗಳನ್ನು ಹಿಡಿದುಕೊಂಡಿದ್ದರು. ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

Fact Check: ಕೊರೋನಾ ಮಾರಿಗೆ ಚೀನಾದಲ್ಲಿ ಬಲಿಯಾದವರ ಅಸಲಿ ಲೆಕ್ಕ , ಸಾವಿರದಲ್ಲಿಲ್ಲ!

ಸ್ಥಳಕ್ಕೆ ಕಾರ್ಮಿಕ ಅಧಿಕಾರಿಗಳು ಆಗಮಿಸಿದಾಗ ಅವರನ್ನು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದರು. ಈ ಸಂದರ್ಭ ಅಲ್ಲಿ ನಿಲ್ಲಲಾಗದೆ ಅಧಿಕಾರಿ ಹೊರಟುಬಿಟ್ಟರು. 2000 ರು. ಸಿಗುತ್ತದೆ ಎಂದು ಆಸೆಯಿಂದ ಬಂದಿದ್ದ ಬಡವರು ನಿರಾಸೆಯಿಂದ ಮನೆಗೆ ತೆರಳಿದ್ದಾರೆ.

"

click me!