ಪರಿಶೀಲನೆ ವೇಳೆ ಮದ್ಯದಂಗಡಿ ಓಪನ್‌: ಎಣ್ಣೆಗಾಗಿ ಕ್ಯೂ ನಿಂತ ಕುಡುಕರು..!

Kannadaprabha News   | Asianet News
Published : Apr 16, 2020, 07:23 AM ISTUpdated : Apr 16, 2020, 07:37 AM IST
ಪರಿಶೀಲನೆ ವೇಳೆ ಮದ್ಯದಂಗಡಿ ಓಪನ್‌: ಎಣ್ಣೆಗಾಗಿ ಕ್ಯೂ ನಿಂತ ಕುಡುಕರು..!

ಸಾರಾಂಶ

ಕೆಲ ಹೊತ್ತು ಬಾಗಿಲು ತೆರೆದಿದ್ದ ವೈನ್‌ ಶಾಪ್|  ಪರಿಶೀಲನೆಗೆ ಭೇಟಿ ನೀಡಿದ ಅಬಕಾರಿ ಇಲಾಖೆ ಅಧಿಕಾರಿಗಳು|  ವೈನ್‌ಶಾಪ್‌ ಆರಂಭವಾಗಿದೆ ಎಂದು ತಿಳಿದು ಶಾಪ್‌ನಲ್ಲಿ ಮದ್ಯ ಕೇಳಿದ ಕೆಲವರು|

ಧಾರವಾಡ(ಏ.16): ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿದ್ದರಿಂದ ವೈನ್‌ ಶಾಪ್‌ವೊಂದು ಸೋಮವಾರ ಕೆಲ ಹೊತ್ತು ಬಾಗಿಲು ತೆರೆದಿತ್ತು. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮದ್ಯಕ್ಕಾಗಿ ಕ್ಯೂನಲ್ಲಿ ನಿಂತ ಘಟನೆ ನಗರದಲ್ಲಿ ನಡೆದಿದೆ. 

ಇಲ್ಲಿನ ಟೋಲ್‌ನಾಕಾ ವೃತ್ತದ ಬಳಿಯ ದುರ್ಗಾ ವೈನ್‌ನಲ್ಲಿ ಇತ್ತೀಚೆಗೆ ಕಳ್ಳತನದ ಯತ್ನ ನಡೆದಿತ್ತು. ಈ ಹಿನ್ನೆಲೆ ವೈನ್‌ಶಾಪ್‌ ಮದ್ಯದ ಸಂಗ್ರಹ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 

ಕೊರೋನಾ ಭೀತಿ: ಇಡೀ ಬ್ಯಾಂಕ್‌ ಸಿಬ್ಬಂದಿ ಹೋಂ ಕ್ವಾರಂಟೈನ್‌

ಈ ರಸ್ತೆಯಲ್ಲಿ ಸಂಚರಿಸುವ ಕೆಲವರು ವೈನ್‌ಶಾಪ್‌ ಆರಂಭವಾಗಿದೆ ಎಂದು ತಿಳಿದು ಶಾಪ್‌ನಲ್ಲಿ ಮದ್ಯ ಕೇಳಿದ ಘಟನೆಯೂ ನಡೆದಿದೆ. ಆದರೆ, ಸ್ಥಳದಲ್ಲಿದ್ದ ಅಬಕಾರಿ ಪೊಲೀಸರು ಅವರಿಗೆ ತಿಳಿ ಹೇಳಿ ಕಳಿಸುವುದರಲ್ಲಿ ಸಾಕಾಗಿ ಹೋಗಿದೆ. 
 

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ