ಮಂಗಳೂರು: ಮಾಧ್ಯಮದ ಹೆಸರಲ್ಲಿ ಕೇರಳದಿಂದ ಬಂದವರ ಬಂಧನ

By Suvarna NewsFirst Published Dec 20, 2019, 10:41 AM IST
Highlights

ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಾಗಿದ್ದು, ಪತ್ರಕರ್ತರ ಸೋಗಿನಲ್ಲಿ ಕೇರಳದಿಂ ಬಂದ 50ಕ್ಕೂ ಹೆಚ್ಚು ಜನರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಮಂಗಳೂರು(ಡುಇ.20): ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಾಗಿದ್ದು, ಪತ್ರಕರ್ತರ ಸೋಗಿನಲ್ಲಿ ಕೇರಳದಿಂ ಬಂದ 50ಕ್ಕೂ ಹೆಚ್ಚು ಜನರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

"

ಕೇರಳದಿಂದ ಸುಮಾರು 50 ಜನರು ಮಂಗಳೂರಿಗೆ ಆಗಮಿಸಿದ್ದು, ಮಾಧ್ಯಮದ ಹೆಸರಿನಲ್ಲಿ ಆಗಮಿಸಿದ 50 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯರೂ ಸೇರಿದಂತೆ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ

ಕೇರಳದಿಂದ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿ ಮಂಗಳೂರು ನಗರ ಪ್ರವೇಶಕ್ಕೆ ಪ್ರಯತ್ನಿಸಿದ 50 ಜನರನ್ನು ಸೂಕ್ತ ಗುರುತು ಚೀಟಿ ನೀಡದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಂಗಳೂರು ನಗರ ಪ್ರವೇಶವನ್ನೂ ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.

ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧಕ್ಕೆ ಪ್ರಧಾನಿಗೆ ಪತ್ರ.

click me!