ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದರ ಕುರಿತು ಇನ್ನು ಚರ್ಚೆಗಳು ನಡೆದಿಲ್ಲ| ನನಗೆ ಸಚಿವ ಸ್ಥಾನ ನೀಡುವುದು ಬಿಡುವುದು ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು| ಕಷ್ಟ ಕಾಲದಲ್ಲೂ ಪಕ್ಷದ ಜೊತೆಗೆ ಇದ್ದೇನೆ|ಸೂಕ್ತ ಸ್ಥಾನಮಾನ ಲಭಿಸುವ ಭರವಸೆ ಇದೆ| ನಾನು ಸಚಿವನಾಗಬೇಕೆಂಬುದು ಜನರ ಬೇಡಿಕೆಯಾಗಿದೆ ಎಂದ ಶಾಸಕ ಜಿ. ಕರುಣಾಕರರೆಡ್ಡಿ|
ಬಳ್ಳಾರಿ[ಡಿ.20]: ನಾನೇನು ಸನ್ಯಾಸಿಯಲ್ಲ. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ಆಶಾವಾದಿಯಾಗಿದ್ದೇನೆ ಎಂದು ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದ್ದಾರೆ.
ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದರ ಕುರಿತು ಇನ್ನು ಚರ್ಚೆಗಳು ನಡೆದಿಲ್ಲ. ನನಗೆ ಸಚಿವ ಸ್ಥಾನ ನೀಡುವುದು ಬಿಡುವುದು ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಕಷ್ಟ ಕಾಲದಲ್ಲೂ ಪಕ್ಷದ ಜೊತೆಗೆ ಇದ್ದೇನೆ. ಹಾಗಾಗಿ ಸೂಕ್ತ ಸ್ಥಾನಮಾನ ಲಭಿಸುವ ಭರವಸೆ ಇದೆ. ನಾನು ಸಚಿವನಾಗಬೇಕೆಂಬುದು ಜನರ ಬೇಡಿಕೆಯಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿಸಬೇಕು ಎಂಬುದು ಅಲ್ಲಿನ ಜನರ ಬೇಡಿಕೆಯಾಗಿದೆ. ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದ ಸಭೆಯಲ್ಲಿ ಈ ಕುರಿತು ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಆಗ ವಿಷಯವನ್ನು ತಾತ್ಕಾಲಿಕವಾಗಿ ಡಿ. 5ರ ನಂತರ ಚರ್ಚಿಸುವುದಾಗಿ ಮುಂದೂಡಿದ್ದರು. ಹಾಗಾಗಿ ಇದೀಗ ಮುಖ್ಯಮಂತ್ರಿಗಳು ಹಾಲಿ, ಮಾಜಿ ಶಾಸಕರು, ಸಂಸದರ ಸಭೆ ಕರೆಯುವುದಾಗಿ ಹೇಳಿದ್ದಾರೆ. ಸಭೆಯಲ್ಲಿ ನಮ್ಮ ನಿಲುವನ್ನು ತಿಳಿಸುತ್ತೇವೆ ಎಂದರು.