ಯಾದಗಿರಿಯ ಹಳ್ಳಿಗಳಿಗೆ ಕಾಲಿಟ್ಟ ತೆಲಂಗಾಣ, ಆಂಧ್ರದ ನಕಲಿ ಹತ್ತಿ ಬೀಜ

By Kannadaprabha News  |  First Published May 30, 2024, 9:21 AM IST

ತೆಲಂಗಾಣದ ಮಹಿಬೂಬ್ ನಗರ ಜಿಲ್ಲೆಯ ಬೂತ್ಪೂರ್ನಲ್ಲಿ ಉತ್ಪನ್ನ ಆಗುವ ಹತ್ತಿ ಬೀಜಗಳಿಗೆ ಕೆಲವು ರೈತರ ಬೇಡಿಕೆ ಇದೆ. ತೆಲಂಗಾಣದಲ್ಲಿ ಇದರ ಮಾರಾಟಕ್ಕೆ ನಿಷೇಧವಿದೆ. ಸೀಮಾಂಧ್ರ ಬಿಟಿ ಹತ್ತಿ ಬೀಜಗಳಿಗೂ ಡಿಮ್ಯಾಂಡ್ ಇದೆ. ಇವೆರಡೂ ಅಲ್ಲಿನ ರಾಜ್ಯಗಳಲ್ಲಿ ನಿಷೇಧಕ್ಕೆ ಒಳಪಟ್ಟಿವೆ. ಕಳೆದ ವರ್ಷವೂ ಇಂತಹ ಪ್ರಕರಣಗಳು ವರದಿಯಾಗಿದ್ದವು. ಪ್ರತಿ ಬಾರಿ ತೆಲಂಗಾಣ ಪೊಲೀಸರು ಇಲ್ಲಿಗೆ ಬಂದು ತಪ್ಪಿತಸ್ಥರನ್ನು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಿಸುತ್ತಿದ್ದಾರೆ.

ಗುರುಮಠಕಲ್(ಮೇ.30):  ನಕಲಿ ಬಿತ್ತನೆ ಬೀಜಗಳ ಮಾರಾಟ ಜಾಲ ಯಾದಗಿರಿ ಜಿಲ್ಲೆ ಗುರುಮಠಕಲ್‌ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದೆ. ತೆಲಂಗಾಣ ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟ ನಕಲಿ ಹತ್ತಿ ಬೀಜಗಳನ್ನು ಕೃಷಿ ಇಲಾಖೆಯ ಕಣ್ತಪ್ಪಿಸಿ ಇಲ್ಲಿನ ಗ್ರಾಮೀಣ ಭಾಗಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ಆಂಧ್ರ ಮೂಲದ ಕೆಲ ಅಂಗಡಿಗಳಿಗೆ ನಕಲಿ ಬೀಜ ಪೂರೈಕೆಯಾಗುತ್ತಿದೆ. 

ತೆಲಂಗಾಣದ ಮಹಿಬೂಬ್ ನಗರ ಜಿಲ್ಲೆಯ ಬೂತ್ಪೂರ್ನಲ್ಲಿ ಉತ್ಪನ್ನ ಆಗುವ ಹತ್ತಿ ಬೀಜಗಳಿಗೆ ಕೆಲವು ರೈತರ ಬೇಡಿಕೆ ಇದೆ. ತೆಲಂಗಾಣದಲ್ಲಿ ಇದರ ಮಾರಾಟಕ್ಕೆ ನಿಷೇಧವಿದೆ. ಸೀಮಾಂಧ್ರ ಬಿಟಿ ಹತ್ತಿ ಬೀಜಗಳಿಗೂ ಡಿಮ್ಯಾಂಡ್ ಇದೆ. ಇವೆರಡೂ ಅಲ್ಲಿನ ರಾಜ್ಯಗಳಲ್ಲಿ ನಿಷೇಧಕ್ಕೆ ಒಳಪಟ್ಟಿವೆ. ಕಳೆದ ವರ್ಷವೂ ಇಂತಹ ಪ್ರಕರಣಗಳು ವರದಿಯಾಗಿದ್ದವು. ಪ್ರತಿ ಬಾರಿ ತೆಲಂಗಾಣ ಪೊಲೀಸರು ಇಲ್ಲಿಗೆ ಬಂದು ತಪ್ಪಿತಸ್ಥರನ್ನು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಿಸುತ್ತಿದ್ದಾರೆ.
ಆದರೆ, ನಮ್ಮ ರಾಜ್ಯದ ಪೊಲೀಸರಿಗೆ ಹಾಗೂ ಸಂಬಂಧಿಸಿದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನಕಲಿ ಹತ್ತಿ ಬೀಜಗಳ ಮಾರಾಟ ಜಾಲ ಪತ್ತೆ ಆಗದಿರುವುದು ಸಂಶಯ ಮೂಡಿಸಿದೆ ಎನ್ನುತ್ತಾರೆ ಇಲ್ಲಿನ ರೈತ ಮುಖಂಡರು.
ಎಕರೆಗೆ 10 ರಿಂದ 20 ಕ್ವಿಂಟಲ್ ಹತ್ತಿ ಇಳುವರಿ ಬರಲಿದೆ. ಹೆಚ್ಚಿನ ಕ್ರಿಮಿನಾಶಕ ಬಳಸುವ ಅಗತ್ಯವಿಲ್ಲ. ರೋಗ, ರುಜಿನಗಳು ಕಡಿಮೆ. ದೊಡ್ಡ ಕಾಯಿಗಳು ಬಿಡುತ್ತವೆ. ಇದರಿಂದ ಇಳುವರಿ ಹೆಚ್ಚು ಬರುತ್ತದೆ. ಅಂಗಡಿಗಳಲ್ಲಿ ದೊರೆಯುವುದಕ್ಕಿಂತ ಕಡಿಮೆ ದರದಲ್ಲಿ ಬೀಜ ಸಿಗುತ್ತವೆ ಎಂದೆಲ್ಲಾ ಪ್ರಚಾರ ಮಾಡುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ವಾಹನಗಳಲ್ಲಿ ಮೈಕ್‌ ಅಳವಡಿಸಿ ಭರ್ಜರಿ ಪ್ರಚಾರ ನಡೆಸಲಾಗುತ್ತದೆ.

Tap to resize

Latest Videos

undefined

ರಾಯಚೂರಿನಲ್ಲಿ ನಕಲಿ ಹತ್ತಿ ಬೀಜ ಮಾರಾಟ: ಬೆಳೆದು ನಿಂತ ಗಿಡಗಳಿಗೆ ಆಗದ ಹೂ-ಕಾಯಿ

ಮೂರು ದಿನಗಳ ಹಿಂದೆ ಸಮೀಪದ ಸೈದಾಪುರದಲ್ಲಿ ಕೃಷಿ ಅಧಿಕಾರಿಗಳು ವೇದಾ ಕಂಪನಿಯ 690 ಹತ್ತಿ ಬೀಜಗಳ ಪಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ. ಮೇ 21ರಂದು ನೆರೆಯ ತೆಲಂಗಾಣದ ಕೊಡಂಗಲ್ ಪೊಲೀಸರು ಮೇದಕ್ ಗ್ರಾಮಕ್ಕೆ ಸಮೀಪದ ಗುರುಮಠಕಲ್ ರೈತರ ಹತ್ತಿರ ನಕಲಿ ಹತ್ತಿ ಬೀಜಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಮೇ 23ರಂದು ಕುಂಟಿಮರಿ ಚೆಕ್ ಪೋಸ್ಟ್ ಹತ್ತಿರ ತೆಲಂಗಾಣ ರಾಜ್ಯದ ನಾರಾಯಣ ಪೇಟ್ ಜಿಲ್ಲಾ ಪೊಲೀಸರು ನಕಲಿ ಹತ್ತಿ ಬೀಜ ಸಾಗಿಸುತ್ತಿದ್ದವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. 

click me!