ವೀರ್ ಸಾವರ್ಕರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್; ಕೋಮು ಸೌಹಾರ್ದತೆಗೆ ಕೊಳ್ಳಿ ಇಡಲು ಯತ್ನಿಸಿದ ಆರೋಪಿ ಬಂಧನ

Published : May 30, 2024, 08:58 AM IST
ವೀರ್ ಸಾವರ್ಕರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್; ಕೋಮು ಸೌಹಾರ್ದತೆಗೆ ಕೊಳ್ಳಿ ಇಡಲು ಯತ್ನಿಸಿದ ಆರೋಪಿ ಬಂಧನ

ಸಾರಾಂಶ

ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮತ್ತು ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದ ಬೆನ್ನಲ್ಲೇ ಇದೀಗ ಕೊಪ್ಪಳ ಜಿಲ್ಲೆಯ ಕುಷ್ಟಗಿ ಜಿಲ್ಲೆಯ ಕೋಮುಸೂಕ್ಷ್ಮ ಪ್ರದೇಶವಾಗಿರುವ ದೋಟಿಹಾಳ ಗ್ರಾಮದಲ್ಲಿ ಸಾವರ್ಕರ್‌ಗೆ ಅವಮಾನ ಮಾಡಿದ ಘಟನೆ ನಡೆದಿದೆ. 

ಕೊಪ್ಪಳ (ಮೇ.30): ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮತ್ತು ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದ ಬೆನ್ನಲ್ಲೇ ಇದೀಗ ಕೊಪ್ಪಳ ಜಿಲ್ಲೆಯ ಕುಷ್ಟಗಿ ಜಿಲ್ಲೆಯ ಕೋಮುಸೂಕ್ಷ್ಮ ಪ್ರದೇಶವಾಗಿರುವ ದೋಟಿಹಾಳ ಗ್ರಾಮದಲ್ಲಿ ಸಾವರ್ಕರ್‌ಗೆ ಅವಮಾನ ಮಾಡಿದ ಘಟನೆ ನಡೆದಿದೆ.

'ಸಾವರ್ಕರ್ ದೇಶದ ಮೊದಲ ಟೆರರಿಸ್ಟ್, ವೀರ್ ಸಾವರ್ಕರ್ ರಣ ಹೇಡಿ ಎಂಬಂತಹ ಪೋಸ್ಟ್ ಹಾಕಿಕೊಂಡಿರುವ ದೋಟಿಹಾಳ ಗ್ರಾಮದ ಹುಸೇನ್ ಸಾಬ್ ಕೊಳ್ಳಿ. ಟಿಪ್ಪು ಟಿಪ್ಪು ಎಂಬ ಫೇಸ್‌ಬುಕ್‌ನಲ್ಲಿ ಕೋಮುಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿರುವ ಹುಸೇನ್ ಸಾಬ್. ಪ್ರಚೋದನಕಾರಿ ಪೋಸ್ಟ್ ಹಾಕಿದ ಹಿನ್ನೆಲೆ ಕುಷ್ಟಗಿ ಪೊಲೀಸರು ಬಂಧಿಸಿದ್ದು, ಕಿಡಿಗೇಡಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಧಾನಿ ಮೋದಿ ನನಗೆ ಬಂಡವಾಳ ಏನೂ ಕೊಟ್ಟಿಲ್ಲ, ಪ್ರಚಾರ ಮಾಡಲು ಅವಕಾಶ ಕೊಟ್ಟಿದ್ದಾರೆ: ಚಕ್ರವರ್ತಿ ಸೂಲಿಬೆಲೆ

ಟಿಪ್ಪು ಟಿಪ್ಪು ಹೆಸರಲ್ಲಿ ಫೇಕ್‌ ಅಕೌಂಟ್ ಕ್ರಿಯೆಟ್ ಮಾಡಿರುವ ಹುಸೇನ್ ಸಾಬ್ ಕೊಳ್ಳಿ. ಕೋಮುಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದಾನೆ. ಈಹಿಂದೆಯೂ ಈ ರೀತಿ ಪೋಸ್ಟ್ ಹಾಕಿದ್ದಾನೆ. ಫೇಸ್‌ಬುಕ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು. ಇದೀಗ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!