ಸುಬ್ರಮಣ್ಯದ ಮಂಪಜ ಭಾಗದಲ್ಲಿ ಚಿರತೆ ಹಾವಳಿ ಮಿತಿ ಮೀರಿದೆ. ಪಂಜ ವಲಯಾರಣ್ಯ ವ್ಯಾಪ್ತಿಯ ಬಳ್ಪದ ಕುಳ ಎಂಬಲ್ಲಿ ಕೃಷಿಕ, ಅರಣ್ಯಾಧಿಕಾರಿ ಮತ್ತು ಅರಣ್ಯ ಸಿಬ್ಬಂದಿಯನ್ನು ಗಾಯಗೊಳಿಸಿದ್ದ ಚಿರತೆಗಾಗಿ ಶೋಧ ಮುಂದುವರಿದಿದ್ದು, ನಾಗರಹೊಳೆ ತಂಡ ಮಂಗಳೂರಿಗೆ ಆಗಮಿಸಿದೆ.
ಮಂಗಳೂರು(ಜ.04): ಪಂಜ ವಲಯಾರಣ್ಯ ವ್ಯಾಪ್ತಿಯ ಬಳ್ಪದ ಕುಳ ಎಂಬಲ್ಲಿ ಕೃಷಿಕ, ಅರಣ್ಯಾಧಿಕಾರಿ ಮತ್ತು ಅರಣ್ಯ ಸಿಬ್ಬಂದಿಯನ್ನು ಗಾಯಗೊಳಿಸಿದ್ದ ಚಿರತೆಗಾಗಿ ಶೋಧ ಕಾರ್ಯ ಇಂದು(ಶನಿವಾರ) ಕೂಡಾ ಮುಂದುವರಿಯಲಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯ ಬಳಿಕ ಕುಳ, ಆಲ್ಕಬೆ, ಕಲ್ಲೇರಿ ಎಣ್ಣೆಮಜಲು ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಶೋಧ ಕಾರ್ಯ ನಡೆಸಲಾಯಿತಾದರೂ, ಚಿರತೆ ಪತ್ತೆಯಾಗಲಿಲ್ಲ.
ತಂಡ ಆಗಮನ:
ಕುಳ ಪ್ರದೇಶಕ್ಕೆ ನಾಗರಹೊಳೆಯ ಪರಿಣಿತ ವನ್ಯಜೀವಿಗಳ ಜಾಡು ಹಿಡಿಯುವ ತಂಡ ಪಶುವೈದ್ಯಾಧಿಕಾರಿ ಮುಜೀಬ್ ನೇತೃತ್ವದಲ್ಲಿ ಎಂಟು ಜನರ ತಂಡ ಶುಕ್ರವಾರ ಮಧ್ಯಾಹ್ನ ಆಗಮಿಸಿತು. ನಂತರ ತೀವ್ರ ಶೋಧ ಕಾರ್ಯ ನಡೆಸಲಾಯಿತಾದರೂ ಚಿರತೆಯ ಜಾಡು ತಿಳಿದುಬಂದಿಲ್ಲ. ಗುರುವಾರ ಕೋಪದಿಂದ ದಾಳಿ ಮಾಡಿದ ಬಳಿಕ ತಡರಾತ್ರಿ ತನಕವೂ ಸುತ್ತಮುತ್ತಲ ಪರಿಸರದಲ್ಲಿದ್ದು, ಮುಂಜಾನೆ ವೇಳೆಗೆ ಅರಣ್ಯ ಸೇರಿರಬಹುದೆಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಪ್ರಚೋದನಾಕಾರಿ ಮೆಸೇಜ್: 60 ಮಂದಿಗೆ ನೋಟಿಸ್..!
ಗುರುವಾರ ರಾತ್ರಿ ಸುಮಾರು 12 ಗಂಟೆಯ ತನಕ ಅರಣ್ಯ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸಿದ್ದರು. ಅಲ್ಲದೆ ಆ ಪರಿಸರದಲ್ಲಿ ಜನರ ಓಡಾಟವು ಅಧಿಕವಾಗಿತ್ತು. ಹಾಗಾಗಿ ಚಿರತೆಯು ಭಯಗೊಂಡು ಪೊದೆಗಳಲ್ಲಿ ಅವಿತುಕೊಂಡಿದ್ದು, ಬಳಿಕ ಜನರ ಓಡಾಟ ಕಡಿಮೆಯಾದಾಗ ಕಾಡಿನತ್ತ ತೆರಳಿರಬಹುದು ಎಂದು ಪರಿಣಿತರು ಶಂಕಿಸಿದ್ದಾರೆ. ಆದರೂ ಶನಿವಾರವೂ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
3 ಬೋನುಗಳನ್ನು ಇರಿಸಿ ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗಿತ್ತು. ಚಿರತೆಯ ದಾಳಿಯಿಂದ ಗಾಯಗೊಂಂಡಿರುವ ಕೃಷಿಕ ಬಾಲಕೃಷ್ಣ ಕಾಯರ ಅವರಿಗೆ ಮುಖದ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಎಸಿಎಫ್ ಹಾಗೂ ಸಿಬ್ಬಂದಿ ಕೂಡ ಚಿಕಿತ್ಸೆ ಪಡೆದು ಚೇತರಿಕೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಪಿಲಾ ನದಿಯಲ್ಲಿ ತೇಲುತ್ತಿತ್ತು ನವಜಾತ ಶಿಶುವಿನ ಮೃತದೇಹ..!
ಶುಕ್ರವಾರ ಕಾರ್ಯಾಚರಣೆಯಲ್ಲಿ ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ್ ಎನ್., ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್, ಪಂಜ ವಲಯಾರಣ್ಯಾಧಿಕಾರಿ ಗಿರೀಶ್ ಹಾಗೂ ಮೂರು ವಲಯದ ಇಲಾಖಾ ಸಿಬ್ಬಂದಿ ಭಾಗವಹಿಸಿದ್ದರು.
ಉರುಳಿಗೆ ಸಿಕ್ಕಿತ್ತಾ ಚಿರತೆ
ಯಾವುದೋ ಪ್ರಾಣಿಗಿಟ್ಟಉರುಳಿಗೆ ಚಿರತೆ ಗುರುವಾರ ಬೆಳಗ್ಗೆ ಸಿಕ್ಕಿಹಾಕಿಕೊಂಡಿತ್ತು. ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡ ಕಾರಣ ಉರುಳಾಡಿ ಉರುಳನ್ನು ಅರ್ಧದಿಂದಲೇ ತುಂಡರಿಸಿ ತಪ್ಪಿಸಿಕೊಂಡಿದೆ. ಚಿರತೆಯ ಶೋಧ ಕಾರ್ಯ ಸಂದರ್ಭ ಸ್ಥಳೀಯ ಜನತೆ ಹಾಗೂ ಅರಣ್ಯ ಇಲಾಖೆಯವರಿಗೆ ತುಂಡರಿಸಲ್ಪಟ್ಟಉರುಳು ಕಂಡು ಬಂದಿದೆ. ಇದರಿಂದ ಕೋಪಗೊಂಡ ಚಿರತೆ ತೋಟದಲ್ಲಿದ್ದ ಬಾಲಕೃಷ್ಣರ ಮೇಲೆ ದಾಳಿ ಮಾಡಿತ್ತು.