ಗೌರವಯುತವಾಗಿಯೇ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ: ಬಿಜೆಪಿ ಸಂಸದ

By Suvarna NewsFirst Published Jan 4, 2020, 11:14 AM IST
Highlights

ವಿಜಯಪುರದ ವಿಮಾನ ನಿಲ್ದಾಣ ರೆಡಿಯಾದ ಮೇಲೆ ನಾನು ರಾಜಕೀಯ ನಿವೃತ್ತಿ ಹೊಂದುವುದು ಪಕ್ಕಾ| ನಾನು ರಾಮಕೃಷ್ಣ ಹೆಗಡೆ, ಜೆ. ಹೆಚ್. ಪಟೇಲರ ಶಿಷ್ಯ| ಅವರಂತೆ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ|

ವಿಜಯಪುರ(ಜ.04): ಗೌರವಯುತವಾಗಿ ರಾಜಕೀಯ ಮಾಡಿದ್ದೇನೆ. ಗೌರವಯುತವಾಗಿಯೇ ನಿವೃತ್ತಿ ಹೊಂದುತ್ತೇನೆ. ನನ್ನ ಯಾರು ಪಕ್ಷದಲ್ಲಿ ಜೀತಕ್ಕೆ ಇಟ್ಟುಕೊಂಡಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಘೋಷಿಸಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಜಯಪುರದ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ನಾನು ರಾಜಕೀಯ ನಿವೃತ್ತಿ ಹೊಂದುವುದು ಪಕ್ಕಾ ಆಗಿದೆ. ನಾನು ರಾಮಕೃಷ್ಣ ಹೆಗಡೆ, ಜೆ. ಹೆಚ್. ಪಟೇಲರ ಶಿಷ್ಯನಾಗಿದ್ದೇನೆ. ಅವರಂತೆ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಕ್ಷದ ತತ್ವಸಿದ್ಧಾಂತಗಳ ಆಧಾರದ ಮೇಲೆ ರಾಜಕೀಯ ಮಾಡಿದ್ದೇನೆ, ಯಾರಿಗು ಹೆದರಿ ನಾನು ರಾಜಕೀಯ ಬಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಭಿನ್ನಮತದ ಕುರಿತು ಪ್ರತಿಕ್ರಿಯೆ ನೀಡಿದ ಜಿಗಜಿಣಗಿ, ನನ್ನನ್ನ ಯಾರು ಖರೀದಿ ಮಾಡಿಲ್ಲ, 45 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ, ಸದ್ಯ ನಿವೃತ್ತಿ ಹೊಂದುವ ಸಮಯ ಎಂದು ತಿಳಿಸಿದ್ದಾರೆ. 
 

click me!