ಈ ಹಿಂದೆ ತಮ್ಮ ಇಲಾಖೆಗಳ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದ ಅಬಕಾರಿ ಸಚಿವ ಎಚ್. ನಾಗೇಶ್ ಈಗ ತಮ್ಮ ಇಲಾಖೆ ಬಗ್ಗೆ ಏನ್ ಕೇಳಿದ್ರೂ ಪ್ರತಿಕ್ರಿಯೆ ಕೊಡೋಕೆ ಹಿಂದೇಟು ಹಾಕ್ತಿದ್ದಾರೆ. ಕೋಲಾರದಲ್ಲಿ ಅಬಕಾರಿ ಇಲಾಖೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಚಿವರು ಫುಲ್ ಗರಂ ಆಗಿದ್ದಾರೆ.
ಕೋಲಾರ(ಜ.03): ಅಬಕಾರಿ ಇಲಾಖೆ ವಿಚಾರವಾಗಿ ಪ್ರಶ್ನಿಸಿದಾಗ ಸಚಿವ ಎಚ್.ನಾಗೇಶ್ ಗರಂ ಆದ ಘಟನೆ ಕೋಲಾರದಲ್ಲಿ ನಡೆದಿದೆ. ತಮ್ಮ ಇಲಾಖೆಯ ಪ್ರಶ್ನೆ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಎಚ್. ನಾಗೇಶ್ ಸಿಟ್ಟಾಗಿದ್ದಾರೆ.
ಅಬಕಾರಿ ಇಲಾಖೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಬಕಾರಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕೋಪಗೊಂಡಿದ್ದಾರೆ. ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಯಾವುದಾದರೂ ಹೊಸ ಯೋಜನೆಗಳಿವೆಯೇ ಎಂದು ಪ್ರಶ್ನಿಸಿದ್ದಕ್ಕೇ ಗರಂ ಆದ ಸಚಿವರು ಈಗ ಮತ್ತೊಮ್ಮೆ ಸಿಟ್ಟಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹಾಲಿನ ರೀತಿ ಮನೆ ಮನೆಗೆ ಮದ್ಯ ಪೂರೈಕೆ; ಸಚಿವ ನಾಗೇಶ್ ಐಡಿಯಾ!
ಇಲಾಖೆ ಬಗ್ಗೆ ಮಾತನಾಡಿ ಸಚಿವ ನಾಗೇಶ್ ಎರಡು ಬಾರಿ ಪೇಚಾಟಕ್ಕೆ ಸಿಲುಕಿಕೊಂಡಿದ್ದಾರೆ. ಮನೆ ಮನೆಗೆ ಎಣ್ಣೆ ಹಾಗೂ ಇಲಾಖೆಯಿಂದ ಎಣ್ಣೆಗೆ ಸಬ್ಸಿಡಿ ಕೊಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದ ನಾಗೇಶ್ ಟೀಕೆಗೆ ಗುರಿಯಾಗಿದ್ದರು. ಸಿಎಂ BSY ವಾರ್ನಿಂಗ್ ಕೊಟ್ಟ ಬಳಿಕ ಸ್ವಂತ ಇಲಾಖೆಯ ಬಗ್ಗೆ ಪ್ರತಿಕ್ರಿಯೆ ಕೊಡಲು ಎಚ್. ನಾಗೇಶ್ ನಕಾರ ತೋರಿಸಿದ್ದಾರೆ.
ಹೊಸ ಯೋಜನೆ ಬಗ್ಗೆ ಕೇಳಿದ್ರೆ ಸಿಟ್ಟಾಗ್ತಾರೆ ಸಚಿವರು