* ಅಂಕೋಲಾ ತಾಲೂಕಿನಲ್ಲಿ 2 ತಿಂಗಳಲ್ಲಿ 32 ಕಡೆ ಹೆಜ್ಜೇನು ದಾಳಿ
* ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ ದಾಳಿ
* ಹೆಜ್ಜೇನು ದಾಳಿಗೆ ಪರಿಸರ ವೈಪರೀತ್ಯವೇ?
ರಾಘು ಕಾಕರಮಠ
ಅಂಕೋಲಾ(ಡಿ.24): ತಾಲೂಕಿನ ವಿವಿಧೆಡೆ ಜೇನುಹುಳುಗಳು(Honey Bees) ರಾದ್ಧಾಂತವನ್ನೇ ಎಬ್ಬಿಸಿವೆ. ಕಳೆದ 2 ತಿಂಗಳಲ್ಲಿ ವಿವಿಧ ಭಾಗದ 32 ಕಡೆಗಳಲ್ಲಿ ಹೆಜ್ಜೇನುಗಳು ದಾಳಿ(Attack) ನಡೆಸಿದೆ. ಇದರ ಬೆನ್ನಲ್ಲೇ ಅಬಕಾರಿ(Excise Department) ನಿರೀಕ್ಷಕರ ಕಚೇರಿಯ ಮುಖ್ಯ ಪೇದೆ ಹಸನ್ ಖಾನ್ ಕರೀಂ ಖಾನ್ ಜೇನುದಾಳಿಗೆ ಪ್ರಾಣ ತೆತ್ತಿದ್ದಾರೆ.
undefined
ಮಂಗಳವಾರ ಸಂಜೆ ಅಜ್ಜಿಕಟ್ಟಾನೀಲಂಪುರದಲ್ಲಿ ಹೆಜ್ಜೇನು ದಾಳಿಯಿಂದ ಹಲವರು ಅಸ್ವಸ್ಥರಾಗಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಹಸನ್ ಖಾನ್ ಕರೀಂ ಖಾನ್ ತೀವ್ರವಾಗಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ(Treatment) ಕಾರವಾರದ(Karwar) ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ(ICU) ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ(Death). ಹಸನ್ ಖಾನ್ ಅವರ ಕರ್ತವ್ಯಪ್ರಜ್ಞೆ ಮಾದರಿಯಾಗಿತ್ತು. ಅವರನ್ನು ಕಳೆದುಕೊಂಡಿರುವುದು ಇಲಾಖೆಗೆ ನಷ್ಟ ತಂದಿದೆ ಎಂದು ಅಬಕಾರಿ ನಿರೀಕ್ಷಕ ರಾಹುಲ ಎಸ್. ನಾಯಕ ತಿಳಿಸಿದ್ದಾರೆ.
Omicron Threat: ಧರ್ಮಾನುಷ್ಠಾನಕ್ಕೆ ರೋಗ ತಡೆಯುವ ಶಕ್ತಿ: ಸ್ವರ್ಣವಲ್ಲೀ ಶ್ರೀ
ನಿತ್ಯ ಹೆಜ್ಜೇನು ದಾಳಿ:
ಅಂಕೋಲಾದ(Ankola) ಪ್ರಮುಖ ರಸ್ತೆಯಾದ ಕೆಎಲ್‌ಇ ರಸ್ತೆ, ಅಜ್ಜಿಕಟ್ಟಾ, ಪಳ್ಳಿಕೇರಿ, ಶೇಡಿಕುಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಳೆದ 2 ತಿಂಗಳಿಂದ ಹೆಜ್ಜೇನು ಹುಳುಗಳು ಪ್ರತಿನಿತ್ಯವು ದಾಳಿ ನಡೆಸುತ್ತಿವೆ. ಈಗಾಗಲೇ ಅಂಕೋಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ 80ಕ್ಕೂ ಜನರು ಜೇನು ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ.
ಪಟ್ಟಣದ ಕೆಎಲ್‌ಇ ರಸ್ತೆಯಲ್ಲಿ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ ಸಾವಿರಾರು ಹೆಜ್ಜೇನುಗಳು ದಾಳಿ ಮಾಡುತ್ತಿವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಪಾಲಕರಿಗೆ ಸವಾಲಿನ ಕೆಲಸವಾಗಿದೆ. ವಿದ್ಯಾರ್ಥಿಗಳ ಮೇಲೆ ಜೇನು ಹುಳು ದಾಳಿ ನಡೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಸಾರ್ವಜನಿಕರದ್ದು. ವಿದ್ಯಾರ್ಥಿಗಳನ್ನು(Students) ರಕ್ಷಿಸಲು ಬಂದ ಸಾರ್ವಜನಿಕರ ಮೇಲೂ ಜೇನು ದಾಳಿ ನಡೆಸಿ ಆಸ್ಪತ್ರೆಗೆ ಸೇರಿದ ನಿದರ್ಶನಗಳಿವೆ.
ಪರಿಸರ ವೈಪರೀತ್ಯವೇ?:
ಯಾವಾಹಲಾದರೊಮ್ಮೆ ಹೆಜ್ಜೇನು ದಾಳಿ ಮಾಡುವುದು ಸಾಮಾನ್ಯ ಸಂಗತಿ. ಆದರೆ ಕಳೆದ 2 ತಿಂಗಳಿಂದ ಹೆಜ್ಜೇನುಗಳು ಮದವೇರಿದಂತೆ ವರ್ತಿಸಿ ಪ್ರತಿನಿತ್ಯವು ದಾಳಿ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಜಿಜ್ಞಾಸೆ ಮೂಡಿದೆ. ಕೆಲವು ಜೇನು ಕೃಷಿಕರ ಪ್ರಕಾರ ಪರಿಸರ ವೈಪರೀತ್ಯದಿಂದ ಹೆಜ್ಜೇನುಗಳಿಗೆ ಸರಿಯಾಗಿ ಆಹಾರವು ಸಿಗುತ್ತಿಲ್ಲ. ಇದರಿಂದ ಜೇನು ಹುಳುಗಳ ಜೀವನಕ್ರಮ ಬದಲಾಗಿದೆ ಎನ್ನುತ್ತಾರೆ. ಇದು ಕಿಡಿಗೇಡಿಗಳ ಕುಕೃತ್ಯ ಎಂದು ಹೇಳುವವರೂ ಇದ್ದಾರೆ. ಅದೇನೇ ಇದ್ದರೂ ಹೆಜ್ಜೇನುಗಳ ನಿರಂತರ ದಾಳಿಗೆ ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಯಬೇಕಿದೆ.
Belagavi Chalo: ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಚಿವ ಹೆಬ್ಬಾರ್
ಹೆಜ್ಜೇನು ದಾಳಿ ತಡೆಯುವ ಕ್ರಮವು ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಆದರೂ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಹೆಜ್ಜೇನು ಓಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಅಂತ ಅಂಕೋಲಾ ಎಸಿಎಫ್ ಮಂಜುನಾಥ ನಾವಿ ತಿಳಿಸಿದ್ದಾರೆ.
ಪ್ರತಿನಿತ್ಯವೂ ಹೆಜ್ಜೇನು ದಾಳಿ ಮಾಡುತ್ತಿರುವುದು ನಮ್ಮಲ್ಲಿ ಆತಂಕ ತಂದೊಡ್ಡಿದೆ. ಅರಣ್ಯ ಇಲಾಖೆ, ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ಈ ಬಗ್ಗೆ ತಿಳಿಸಿದರೂ ಯಾವುದೇ ಕ್ರಮವಾಗಿಲ್ಲ. ಈಗಲಾದರೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆನ ಅಂತ ಬೊಬ್ರವಾಡ ನವೀನ ನಾಯ್ಕ ಹೇಳಿದ್ದಾರೆ.
ಕುವೆಂಪು ವಿವಿ ಆವರಣದಲ್ಲಿ ಹೆಜ್ಜೇನು ದಾಳಿ: ಮೂವರು ಅಸ್ವಸ್ಥ, ವಿದ್ಯಾರ್ಥಿ ಸ್ಥಿತಿ ಗಂಭೀರ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ ಆವರಣದಲ್ಲಿ ಹೆಜ್ಜೇನು ದಾಳಿಗೆ ಸಿಲುಕಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ವಿದ್ಯಾರ್ಥಿಯೋರ್ವರ ಸ್ಥಿತಿ ಗಂಭೀರವಾಗಿದೆ. ಡಿ.12 ರಂದು ಘಟನೆ ನಡೆದಿದೆ. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಪೂರ್ಣಾನಂದ, ಅಟೆಂಡರ್ ನಾಗರಾಜ್ ಮತ್ತು ರಾಜ್ಯಶಾಸ್ತ್ರ ವಿದ್ಯಾರ್ಥಿ ಪ್ರವೀಣ್ ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದರು.