Religious Conversion: ಹುಬ್ಬಳ್ಳಿಯಲ್ಲಿ ಸಾಮೂಹಿಕ ಮತಾಂತರ?

By Kannadaprabha NewsFirst Published Dec 24, 2021, 6:41 AM IST
Highlights

*  ಮತಾಂತರ ಆರೋಪ; ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ ಪೊಲೀಸರು
*  ದೂರು ನೀಡಿದ ಆರ್‌ಎಸ್‌ಎಸ್‌ ಕಾರ್ಯಕರ್ತರು
*  ಮತಾಂತರ ನಿಷೇಧಕ್ಕೆ ಪೂರಕವಾಗಿ ಶ್ರೀರಾಮಸೇನೆಯಿಂದ ಟಾಸ್ಕ್‌ಫೋರ್ಸ್‌

ಹುಬ್ಬಳ್ಳಿ(ಡಿ.24):  ಇಲ್ಲಿನ ಕೋಳಿವಾಡ ಗ್ರಾಮದಲ್ಲಿ ನಾಮಕರಣ ಕಾರ್ಯಕ್ರಮ ನೆಪದಲ್ಲಿ ಮತಾಂತರ(Conversion) ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್‌(RSS) ಕಾರ್ಯಕರ್ತರು ದೂರಿದ ಹಿನ್ನೆಲೆಯಲ್ಲಿ ಗ್ರಾಮೀಣ ಪೊಲೀಸರು ಕ್ರಿಶ್ಚಿಯನ್‌ ಧರ್ಮಗುರು(Christian Cleric) ಹಾಗೂ ಸ್ಥಳೀಯ ನಿವಾಸಿಯನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಬುಧವಾರ ರಾತ್ರಿ ಗ್ರಾಮದ ನೀಲವ್ವ ಭಜಂತ್ರಿ ಎಂಬುವವರ ಮನೆಯಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ(Christianity) ಸೇರ್ಪಡೆ ಆಗುವಂತೆ ಬೋಧನೆ ನಡೆಯುತ್ತಿದೆ. ಹುಬ್ಬಳ್ಳಿಯ(Hubballi) ಆರ್‌ಜಿಎಸ್‌ ಡೇನಿಯಲ್‌ ಜಯರಾಜ, ಶಿರಹಟ್ಟಿಯ ಫಾ. ಅಭಿನವ ಪಾಲ್‌ ಹಾಗೂ ಇನ್ನೊಬ್ಬರು ಪಾಲ್ಗೊಂಡು ಜನತೆಯನ್ನು ಸೇರಿಸಿ ಕ್ರಿಶ್ಚಿಯನ್‌ ಧರ್ಮಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಗ್ರಾಮಕ್ಕೆ ತೆರಳಿದ ಪೊಲೀಸರು ಬಂಡಿವಾಡ ಹೊರಠಾಣೆಗೆ ಕರೆಸಿ ಎಚ್ಚರಿಕೆ ನೀಡಿದರು. ಕಳೆದ ಹತ್ತು ವರ್ಷದ ಹಿಂದೆಯೆ ಕೆಲವರು ಮತಾಂತರ ಆಗಿದ್ದಾರೆ. ಈಗ ಇನ್ನೂ ಕೆಲವರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ನಾಮಕರಣದ ಕಾರ್ಯಕ್ರಮಕ್ಕೆ ಬಂದವರಿಗೆ ಬೈಬಲ್‌(Bible) ನೀಡಿ ಬೋಧನೆ ಮಾಡುವಂತದ್ದು ಏನಿರುತ್ತದೆ? ಅದಕ್ಕಾಗಿ ಪೊಲೀಸರಿಗೆ(Police) ಮಾಹಿತಿ ನೀಡಿದೆವು ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತ ನಾಗರಾಜ ಗುಂಜಾಳ ತಿಳಿಸಿದರು.

Latest Videos

Anti-Conversion Bill : ಮ್ಯಾರಥಾನ್‌ ಚರ್ಚೆ, ಮತಾಂತರ ಬಿಲ್ ವಿಧಾನಸಭೆಯಲ್ಲಿ ಅಂಗೀಕಾರ

ಗ್ರಾಮೀಣ ಪೊಲೀಸ್‌ ಇನ್‌ಸ್ಪೆಕ್ಟರ್‌ ರಮೇಶ ಗೋಕಾಕ್‌, ‘ಗುರುವಾರ ಬೆಳಗ್ಗೆ ಪುನಃ ಎರಡೂ ಕಡೆಯವರನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದೇವೆ. ಮುಂದೆ ಮತಾಂತರ ಮಾಡುವಂತ ಆಮಿಷ ಒಡ್ಡುವುದು, ಸೆಳೆಯುವಂತ ಕಾರ್ಯಕ್ರಮ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಜತೆಗೆ ಯಾವುದೇ ರೀತಿ ಗಲಾಟೆ ಮಾಡದಂತೆ ತಿಳಿಸಿದ್ದೇವೆ’ ಎಂದರು. ಆರ್‌ಎಸ್‌ಎಸ್‌ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಿ ಟೆಂಗಿನಕಾಯಿ, ನಾಗರಾಜ ಗುಂಜಾಳ, ಸುಧಾಕರ ಶೆಟ್ಟಿಸೇರಿ ಇತರರು ಠಾಣೆಗೆ ಇತರರಿದ್ದರು.

ಮತಾಂತರ ನಿಷೇಧಕ್ಕೆ ಪೂರಕವಾಗಿ ಶ್ರೀರಾಮಸೇನೆಯಿಂದ ಟಾಸ್ಕ್‌ಫೋರ್ಸ್‌

ಹುಬ್ಬಳ್ಳಿ:  ಮತಾಂತರ ನಿಷೇಧ ಕಾನೂನು(Anti Conversion Bill) ಹಿಂದೂಗಳಿಗೆ(Hindu) ಕಣ್ಣೊರೆಸುವ ತಂತ್ರವಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶ್ರೀರಾಮ ಸೇನಾ ವತಿಯಿಂದ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಟಾಸ್ಕ್‌ಫೋರ್ಸ್‌  ಕಾನೂನಿಗೆ ಪೂರಕವಾಗಿ ಕೆಲಸ ಮಾಡಲಿದೆ. ಇದರಲ್ಲಿ ವಕೀಲರು, ಮಹಿಳೆಯರು, ಯುವಕರು ಇರಲಿದ್ದಾರೆ. ಮತಾಂತರ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನೆರವು ನೀಡಲಿದ್ದಾರೆ. ಮತಾಂತರ ನಡೆವ ಸ್ಥಳದ ಕುರಿತು, ಯಾರು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಲಿದ್ದೇವೆ ಎಂದರು.

Anti Conversion Bill: ಮತಾಂತರ ನಿಷೇಧ ಕಾಯ್ದೆಗೆ ಕೂಡಲ ಶ್ರೀ ಬೆಂಬಲ?

ಕ್ರಿಶ್ಚಿಯನ್‌(Christian) ಸಮುದಾಯ ವ್ಯವಸ್ಥಿತವಾಗಿ ಮತಾಂತರ ಪ್ರಕ್ರಿಯೆ ನಡೆಸುತ್ತದೆ. ಬಲವಂತ ಮತಾಂತರದ ಮೂಲಕ ಹಿಂದೂ ಸಂಸ್ಕೃತಿಯನ್ನು(Hindu Culture) ನಾಶ ಮಾಡುವ ಹುನ್ನಾರ ಮಾಡಿದ್ದಾರೆ. ಸರ್ಕಾರದ ದಾಖಲೆಗಳಲ್ಲಿ ದಲಿತನಾಗಿದ್ದರೆ, ಕ್ರಿಶ್ಚಿಯನ್ನರ ಪ್ರಕಾರ ಆತ ಇಸಾಯಿ ಧರ್ಮದ ಅನುಯಾಯಿ ಆಗಿರುತ್ತಾರೆ. ಇಂತಹ ನುಸುಳುಕೋರತನ ತಡೆಗೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಅದಕ್ಕಾಗಿ ಶ್ರೀರಾಮ ಸೇನೆ ಟಾಸ್ಕ್‌ಫೋರ್ಸ್‌ ಮೂಲಕ ಈ ಕಾನೂನಿಗೆ ಬಲ ತುಂಬಲಿದೆ ಎಂದರು.

ಇನ್ನು ಧರ್ಮಸ್ಥಳ, ಇಸ್ಕಾನ್‌, ರವಿಶಂಕರ ಗುರೂಜಿ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಸೇರಿ ಇತರೆಡೆ ಹೊಸ ವರ್ಷವನ್ನು ಕೇಕ್‌ ಕತ್ತರಿಸಿ ಆಚರಣೆ ಮಾಡಲಾಗುತ್ತದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ. ಈ ವರ್ಷ ಏನಾದರೂ ಇದೇ ರೀತಿ ಆಚರಣೆಗೆ ಮುಂದಾದರೆ ಆಕ್ಷೇಪಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪರಮಾತ್ಮಜೀ ಮಹಾರಾಜ ಸ್ವಾಮೀಜಿ, ಅಪ್ಪಣ್ಣ ದಿವಟಗಿ ಸೇರಿ ಇತರರಿದ್ದರು.
 

click me!