Omicron Threat: ಮತ್ತೆ ನಂದಿ ಬೆಟ್ಟ ಬಂದ್‌: ಹೊಸ ವರ್ಷಾಚರಣೆಗೆ ಬ್ರೇಕ್‌..!

By Kannadaprabha News  |  First Published Dec 24, 2021, 6:21 AM IST

*   ಡಿ. 30ರ ಸಂಜೆ 6 ರಿಂದ ಜ.2ರ ಬೆ.6 ಗಂಟೆ ವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ
*   ಪ್ರವಾಸಕ್ಕೆ ಬುಕ್ಕಿಂಗ್‌ ಮಾಡಿದವರು ತಮ್ಮ ಯೋಜನೆ ಬದಲಿಸಿಕೊಳ್ಳುವುದು ಅನಿರ್ವಾಯ 
*   ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ನಂದಿ ಬೆಟ್ಟ


ಚಿಕ್ಕಬಳ್ಳಾಪುರ(ಡಿ.24):  ಹೊಸ ವರ್ಷದ(New Year) ಮೊದಲ ದಿನದಂದು ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ(Nandi Hills) ಬಂದು ಮೋಜು, ಮಸ್ತಿಯಲ್ಲಿ ತೊಡಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳಗಿ ತೇಲುತ್ತಿದ್ದ ಪ್ರವಾಸಿಗರಿಗೆ, ಯುವ ಪ್ರೇಮಿಗಳಿಗೆ ಜಿಲ್ಲಾಡಳಿತ ಬಿಗ್‌ ಶಾಕ್‌ ಕೊಟ್ಟಿದೆ.

ಸಾಮಾನ್ಯವಾಗಿ ಜಿಲ್ಲಾಡಳಿತ ವರ್ಷದ ಕೊನೆಯ ದಿನ ಅಂದರೆ 30 ಅಥವಾ 31ರ ಸಂಜೆ 3 ರಿಂದ ಹೊಸ ವರ್ಷದ ಮೊದಲ ಜನ ಅಂದರೆ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೂ ಮಾತ್ರ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿದ್ದ ಜಿಲ್ಲಾಡಳಿತ ಇದೀಗ ಕೊರೋನಾ(Coronavirus) ಮೂರನೇ ಅಲೆಯ ಒಮಿಕ್ರೋನ್‌(Omicron) ಆತಂಕದ ಹಿನ್ನಲೆಯಲ್ಲಿ ಜನವರಿ 1ರಂದು ಕೂಡ ಸಂಪೂರ್ಣ ಗಿರಿಧಾಮವನ್ನು ಬಂದ್‌ಗೊಳಿಸಲು ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಆಗಾಗಿ ನಂದಿಗಿರಿಧಾಮದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಯೋಜನೆ ರೂಪಿಸಿಕೊಂಡಿದ್ದವರು, ಪ್ರವಾಸಕ್ಕೆ(Tour) ಬುಕ್ಕಿಂಗ್‌ ಮಾಡಿದವರು ತಮ್ಮ ಯೋಜನೆ ಬದಲಿಸಿಕೊಳ್ಳುವುದು ಅನಿರ್ವಾಯವಾಗಿದೆ.

Tap to resize

Latest Videos

undefined

ಕೊಚ್ಚಿ ಹೋಗಿದ್ದ ನಂದಿ ಬೆಟ್ಟ ರಸ್ತೆ ಪುನರ್ ನಿರ್ಮಾಣ ಚುರುಕು

ಡೀಸಿ ಆದೇಶದಲ್ಲಿ ಏನಿದೆ?

2022ರ ಜನವರಿ 1 ರ ಹೊಸ ವರ್ಷದ ದಿನಾಚರಣೆಯ ಸಂಬಂಧವಾಗಿ, ಚಿಕ್ಕಬಳ್ಳಾಪುರ(Chikkaballapura) ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ನಂದಿ ಬೆಟ್ಟಕ್ಕೆ ಬೆಂಗಳೂರು(Bengaluru), ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಹಾಗೂ ಕೋವಿಡ್-19(Covid-19) ರೂಪಾಂತರಿ ಓಮಿಕ್ರಾನ್‌ ಸಾಂಕ್ರಾಮಿಕ ರೋಗ(Infectious Disease) ಹರಡುವ ಸಾಧ್ಯತೆಗಳು ಇರುವುದರಿಂದ, ಪರಿಸರವನ್ನು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಡುವ ಹಿತದೃಷ್ಟಿಯಿಂದ ಡಿ.31 ರ ಮಧ್ಯರಾತ್ರಿ ಹಾಗೂ 2022ರ ಜನವರಿ 1 ರಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. 

ಮುನ್ನೆಚ್ಚರಿಕೆ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಡಿ. 30ರ ಸಂಜೆ 6 ಗಂಟೆಯಿಂದ 2022ರ ಜನವರಿ 2 ರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೊರಡಿಸಿರುವ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ನಂದಿಗಿರಿಗೆ ರೋಪ್‌ ವೇ ನಿರ್ಮಾಣಕ್ಕೆ ರೂಪು ರೇಷೆ

ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಗಿರಿಧಾಮಕ್ಕೆ (Nandi Hill) ಬಹುದಿನಗಳ ಕನಸಾಗಿರುವ ಮಹತ್ವಕಾಂಕ್ಷಿ ರೋಪ್‌ ವೇ (ಕೇಬಲ್‌ ಕಾರ್‌ Cable Car)) ನಿರ್ಮಾಣಕ್ಕೆ ಕಾಲ ಸನ್ನಿತವಾಗಿದ್ದು ಸೋಮವಾರ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ಬಿ. ರೂಪೇಶ್‌ ಅವರು ಡಿ. 21 ರಂದು   ಜಿಲ್ಲಾಡಳಿತದೊಂದಿಗೆ ಮಹತ್ವದ ಚರ್ಚೆ ನಡೆಸಿದ್ದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಂದಿ ಗಿರಿಧಾಮದಲ್ಲಿ (Nandi Hill)  ಪ್ರವಾಸಿಗರಿಗೆ ಕಲ್ಪಿಸಲು ಕೈಗೊಳ್ಳಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ್ದು ವಿಶೇಷವಾಗಿ ಸಭೆಯಲ್ಲಿ ಗಿರಿಧಾಮಕ್ಕೆ ರೋಪ್‌ ವೇ ನಿರ್ಮಾಣದ ಕಾಮಗಾರಿಯ ರೂಪರೇಷಗಳ ಬಗ್ಗೆ ತಾಂತ್ರಿಕ ಸಲಹಾ ಸಂಸ್ಥೆಯೊಂದಿಗೆ ವಿವರವಾಗಿ ಮಾಹಿತಿ ಪಡೆದು ಚರ್ಚೆ ನಡೆಸಿದ್ದರು. 

ವೀಕೆಂಡಲ್ಲಾದ್ರೂ ಔಟಿಂಗ್ ಹೋಗಿ! ಬೆಂಗಳೂರು ಹತ್ರದ ಬೆಸ್ಟ್ 5 ಜಾಗಗಳು!

ಇಲಾಖೆ ಮುಖ್ಯಸ್ಥರು ಭಾಗಿ:  

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆರ್‌.ಲತಾ, ಲತಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೋಪ್‌ ವೇ (Cable Car) ನಿರ್ಮಾಣ ಕಾಮಗಾರಿ ಯೋಜನೆಯ ಸಂಬಂಧ ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಅರಣ್ಯ, ಬೆಸ್ಕಾಂ ಸೇರಿದಂತೆ ಸಂಬಂದಪಟ್ಟಇತರೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದು ಅವರಿಗೆ ಸೂಕ್ತ ನಿರ್ದೇಶನ ನೀಡಲಾಯಿತು.

ಈ ವೇಳೆ ತಾಂತ್ರಿಕ ಸಲಹಾ ಸಂಸ್ಥೆಯಾದ ಮೂಲಭೂತ ಅಭಿವೃದ್ಧಿ ನಿಗಮ (ಕರ್ನಾಟಕ) ಲಿಮಿಟೆಡ್‌ ನ ಉಪ ಅಧ್ಯಕ್ಷರಾದ ನಿಶಿತ್‌, ನಂದಿ ಬೆಟ್ಟದಲ್ಲಿ ನಿರ್ಮಾಣವಾಗಲಿರುವ ರೋಪ್‌ ವೇ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರೂಪ್‌ ವೇ ನಿರ್ಮಾಣ ಜಾಗ, ವಾಹನಗಳ ಪಾರ್ಕಿಂಗ್‌ ಸ್ಥಳ, ಯೋಜನೆಯ ನೀಲನಕ್ಷೆ ಸೇರಿದಂತೆ ಯೋಜನೆಯ ಸಮಗ್ರ ಪಡೆದು ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಕೂಡ ಕೇಬಲ್ ಕಾರ್‌ ಯೋಜನೆ ಅನುಷ್ಟಾನ ಸಂಬಂಧ ತಮ್ಮ ತಮ್ನ ಇಲಾಖೆಗಳ ಸಾಧಕಭಾದಕಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದ್ದರು. 
 

click me!