ರೇಣುಕಾಸ್ವಾಮಿ ಕೊಲೆ ಕೇಸ್‌: ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ತಿಪ್ಪಾರೆಡ್ಡಿಗೆ ದರ್ಶನ್‌ ಅಭಿಮಾನಿಯಿಂದ ಆಕ್ಷೇಪ ಕರೆ?

Published : Jun 13, 2024, 01:30 PM IST
ರೇಣುಕಾಸ್ವಾಮಿ ಕೊಲೆ ಕೇಸ್‌: ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ತಿಪ್ಪಾರೆಡ್ಡಿಗೆ ದರ್ಶನ್‌ ಅಭಿಮಾನಿಯಿಂದ ಆಕ್ಷೇಪ ಕರೆ?

ಸಾರಾಂಶ

ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದನು. ಇಡೀ ದೇಶಕ್ಕೆ ಗೊತ್ತಿದೆಯಲ್ಲ ಎಂದು ನಾನು ಹೇಳಿದೆನು. ಏನೂ ಪ್ರೂಫ್ ಇದೆ ಎಂದು ಪ್ರಶ್ನೆ ಮಾಡಿದನು. ನಾನು ಫೋನ್ ಕಾಲ್ ಕಟ್ ಮಾಡಿ ನಮ್ಮ ಗನ್ ಮ್ಯಾನ್ ಗೆ ಕೊಟ್ಟೆನು. ಇಷ್ಟೆ ಮಾತಾಡಿದ್ದು ಮತ್ತೊಂದು ಮಾತೂ ಆಡಿಲ್ಲ. ನಂಬರ್ ಬ್ಲಾಕ್ ಮಾಡುವಂತೆ ನಾನು ಹೇಳಿದೆನು. ಈ ಬಗ್ಗೆ ದೂರು ನೀಡಿಲ್ಲ ಎಂದ ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ 

ಚಿತ್ರದುರ್ಗ(ಜೂ.13):  ನಟ ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನ ಖಂಡಿಸಿ ನಿನ್ನೆ (ಬುಧವಾರ) ನಗರದಲ್ಲಿ ನಡೆದಿದ್ದ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ನಾನೂ ಸಹ ಭಾಗಿ ಆಗಿದ್ದೆನು. ಪ್ರತಿಭಟನೆ ಮುಗಿಸಿ ಮನೆಗೆ ತೆರಳುವ ವೇಳೆ ಕರೆ ಬಂತು. ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿ ಕರೆ ಮಾಡಿದ್ದರು ಎಂದು ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದ್ದಾರೆ. 

ಇಂದು(ಗುರುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಹೆಚ್. ತಿಪ್ಪಾರೆಡ್ಡಿ ಅವರು, ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದನು. ಇಡೀ ದೇಶಕ್ಕೆ ಗೊತ್ತಿದೆಯಲ್ಲ ಎಂದು ನಾನು ಹೇಳಿದೆನು. ಏನೂ ಪ್ರೂಫ್ ಇದೆ ಎಂದು ಪ್ರಶ್ನೆ ಮಾಡಿದನು. ನಾನು ಫೋನ್ ಕಾಲ್ ಕಟ್ ಮಾಡಿ ನಮ್ಮ ಗನ್ ಮ್ಯಾನ್ ಗೆ ಕೊಟ್ಟೆನು ಎಂದು ತಿಳಿಸಿದ್ದಾರೆ. 

ದರ್ಶನ್‌ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು, ಕಾನೂನು ಪ್ರಕಾರ ಶಿಕ್ಷೆಯಾಗಲಿ: ಆರ್‌. ಅಶೋಕ್

ಇಷ್ಟೆ ಮಾತಾಡಿದ್ದು ಮತ್ತೊಂದು ಮಾತೂ ಆಡಿಲ್ಲ. ನಂಬರ್ ಬ್ಲಾಕ್ ಮಾಡುವಂತೆ ನಾನು ಹೇಳಿದೆನು. ಈ ಬಗ್ಗೆ ದೂರು ನೀಡಿಲ್ಲ ಎಂದು ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದ್ದಾರೆ. ದರ್ಶನ್ ಅಭಿಮಾನಿ ತಿಪ್ಪಾರೆಡ್ಡಿ ಅವರಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ರಾ? ಎಂಬ ಅನುಮಾನ ಮೂಡಿದೆ. 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ