ಬೆಳ್ಳಂಬೆಳಗ್ಗೆಯೇ ಗಜರಾಜ ದಾದಾಗಿರಿಗೆ ಜನರು ಅವಾಕ್ಕಾಗಿದ್ದು ಎದುರಿಗೆ ಬಂದ ಕೆಎಸ್ಆರ್‌ಟಿ ಬಸ್, ಟಾಟಾ ಏಸ್ ವಾಹನವನ್ನು ಹಿಮ್ಮೆಟ್ಟಿಸಿ ಓಡಿಸಿದೆ. ಕಳೆದ ಎರಡು ತಿಂಗಳಿನಿಂದಲೂ ಪೋಡುಗಳತ್ತ ಈ ಆನೆ ಧಾವಿಸುತ್ತಿದೆ ಎಂದು ತಿಳಿದುಬಂದಿದೆ.
ಚಾಮರಾಜನಗರ(ಜೂ.13): ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಆನೆ ಓಡಾಡಿ ಜನರನ್ನು ಆತಂಕಕ್ಕೆ ಈಡು ಮಾಡಿರುವ ಘಟನೆ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡಿನ ನಡುವೆ ನೀಳದಂತದ ಕಾಡಾನೆಯೊಂದು ಓಡಾಡಿದೆ. ಹೀಗಾಗಿ ಅಲ್ಲಿನ ಜನರನ್ನು, ಭಕ್ತರನ್ನು ಪರದಾಡುವಂತೆ ಮಾಡಿದೆ.
undefined
ಚಾಮರಾಜನಗರ: ಇನ್ನೋವಾ ಕಾರು ಡಿಕ್ಕಿ, ಕಾಡು ನಾಯಿ, ಜಿಂಕೆ ಸಾವು
ಬೆಳ್ಳಂಬೆಳಗ್ಗೆಯೇ ಗಜರಾಜ ದಾದಾಗಿರಿಗೆ ಜನರು ಅವಾಕ್ಕಾಗಿದ್ದು ಎದುರಿಗೆ ಬಂದ ಕೆಎಸ್ಆರ್‌ಟಿ ಬಸ್, ಟಾಟಾ ಏಸ್ ವಾಹನವನ್ನು ಹಿಮ್ಮೆಟ್ಟಿಸಿ ಓಡಿಸಿದೆ. ಕಳೆದ ಎರಡು ತಿಂಗಳಿನಿಂದಲೂ ಪೋಡುಗಳತ್ತ ಈ ಆನೆ ಧಾವಿಸುತ್ತಿದೆ ಎಂದು ತಿಳಿದುಬಂದಿದೆ. ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣಿಗಾಗಿ ಪೋಡುಗಳತ್ತ ಆನೆ ಬರುತ್ತಿದೆ ಎನ್ನಲಾಗಿದೆ.