ವರದಿ : ಸುಭಾಶ್ಚಂದ್ರ ಎಸ್.ವಾಗ್ಳೆ
ಉಡುಪಿ (ಅ.01): ಸರ್ಕಾರ ಯಕ್ಷಗಾನವನ್ನು ಶಾಲಾ ಪಠ್ಯದಲ್ಲಿ (School syllabus) ಸೇರಿಸಿಲ್ಲ, ಆದರೂ ಉಡುಪಿ (Udupi) ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿವರ್ಷ 1200ಕ್ಕೂ ಅಧಿಕ ಮಕ್ಕಳು ಯಕ್ಷಗಾನವನ್ನು (Yakshagana) ಪಾಠದಷ್ಟೇ ಶಿಸ್ತಿನಿಂದ ಕಲಿಯುತ್ತಿದ್ದಾರೆ, ಸುಸಂಸ್ಕೃತರಾಗುತಿದ್ದಾರೆ. ಇದರ ಹಿಂದಿರುವುದು ಇಲ್ಲಿನ ಯಕ್ಷ ಶಿಕ್ಷಣ ಟ್ರಸ್ಟ್.
undefined
ಪ್ರೌಢಶಾಲಾ ಮಕ್ಕಳಿಗೆ (High School Students) ಯಕ್ಷಗಾನ ಕಲಿಸುವುದಕ್ಕಾಗಿಯೇ 2006ರಲ್ಲಿ ಈ ಟ್ರಸ್ಟನ್ನು ಆಗಿನ ಶಾಸಕ ಕೆ.ರಘುಪತಿ ಭಟ್ (Raghupathi Bhat) ಆರಂಭಿಸಿದರು. ಈ ಟ್ರಸ್ಟ್ ಮೂಲಕ ಯಕ್ಷಗಾನ ಗುರುಗಳನ್ನು ನೇಮಿಸಿ, ಉಡುಪಿ ವಿಧಾನಸಭಾ ಕ್ಷೇತ್ರದ ಸುಮಾರು 46 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ.
ಮತ್ತೆ ಜೋರಾದ ಯಕ್ಷಗಾನ ರಾಜ್ಯದ ಕಲೆಯಾಗಬೇಕೆನ್ನುವ ಕೂಗು
ಕಳೆದ 12 ವರ್ಷಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನ ಕಲಿತಿದ್ದಾರೆ, ರಾಜ್ಯದ ರಂಗಕಲೆ ಅಥವಾ ಪ್ರದರ್ಶನ ಕಲೆಗಳಲ್ಲಿ ಇದು ಒಂದು ದಾಖಲೆಯಾಗಿದೆ.
ಸಿಂಹಪಾಲು ಹೆಣ್ಣು ಮಕ್ಕಳದು: ಒಂದು ಕಾಲದಲ್ಲಿ ಯಕ್ಷಗಾನ ಕೇವಲ ಗಂಡು ಮಕ್ಕಳ ಕಲೆ ಎಂದಾಗಿತ್ತು, ಆದರೆ ಯಕ್ಷ ಶಿಕ್ಷಣ ಟ್ರಸ್ಟನಿಂದ (Yaksha shikshana Trust) ಯಕ್ಷಗಾನ ಕಲಿತ ವಿದ್ಯಾರ್ಥಿಗಳಲ್ಲಿ ಶೇ. 60ಕ್ಕೂ ಹೆಚ್ಚು ಹೆಣ್ಣುಮಕ್ಕಳೇ ಆಗಿದ್ದಾರೆ. ಇದು ಇನ್ನೊಂದು ದಾಖಲೆ.
ನೂರಾರು ಮಂದಿ ಕ್ರೈಸ್ತ ಮಾತ್ರವಲ್ಲ ಮುಸ್ಲಿಂ ವಿದ್ಯಾರ್ಥಿಗಳೂ ಯಕ್ಷಗಾನ ಕಲಿತಿದ್ದಾರೆ, ಪೌರಾಣಿಕ ವೇಷಗಳನ್ನು ಧರಿಸಿ ರಂಗದಲ್ಲಿ ಮಿಂಚಿದ್ದಾರೆ. ತಮ್ಮ ಧರ್ಮದಲ್ಲಿ ಸಿಗಲಾರದಂತಹ ಪ್ರತಿಭಾ ಪ್ರದರ್ಶನದ ಅಪೂರ್ವ ಅವಕಾಶವನ್ನು ಇಲ್ಲಿ ಪಡೆದಿದ್ದಾರೆ. ಇದು ಯಕ್ಷಗಾನ ಕಲೆಯ ಇನ್ನೊಂದು ಸಾಧನೆಯಾಗಿದೆ.
ಯಕ್ಷಗಾನ ಮಾಡುವಾಗ ಕಲಾವಿದರಿಗೆ ದೈವ ಆವಾಹನೆ, ವಿಡಿಯೋ ವೈರಲ್..!
ಕರಾವಳಿಗೆ ಸೀಮಿತವಲ್ಲ; ಯಕ್ಷಗಾನ ಎಂದರೆ ಕರಾವಳಿಯ ಕಲೆ ಎನ್ನುತ್ತಾರೆ. ಆದರೆ ಉಡುಪಿಯಲ್ಲಿ ಯಕ್ಷಗಾನ ಕಲಿತ ಮಕ್ಕಳಲ್ಲಿ ಶೇ. 50ಕ್ಕೂ ಹೆಚ್ಚು, ಯಕ್ಷಗಾನದ ಗಂಧಗಾಳಿ ಇಲ್ಲದ ಹೊರಜಿಲ್ಲೆಯ ಮಕ್ಕಳೇ ಆಗಿದ್ದಾರೆ ಎನ್ನುವುದು ಇನ್ನೊಂದು ಹೆಚ್ಚುಗಾರಿಕೆಯಾಗಿದೆ
ಬಹುಶಃ ನಮ್ಮ ರಾಜ್ಯದಲ್ಲಿ ಬೇರೆ ಯಾವುದೇ ಕಲೆಯನ್ನು ಇಷ್ಟುವ್ಯವಸ್ಥಿತವಾಗಿ ಪಠ್ಯ ಕ್ರಮದಷ್ಟೇ ಶಿಸ್ತಿನಿಂದ ಕಲಿಸುವ ವ್ಯವಸ್ಥೆ ಇಲ್ಲ. ಇದೊಂದು ಪಠ್ಯೇತರ ಚಟುವಟಿಕೆಯಾಗಿದ್ದರೂ, ಇದರಿಂದ ಮಕ್ಕಳ ವ್ಯಾಸಂಗಕ್ಕೆ ಯಾವುದೇ ತೊಂದರೆಯಾಗಿಲ್ಲ. ಬದಲಿಗೆ ಲಾಭವೇ ಆಗಿದೆ. ಇದನ್ನು ಸ್ವತಃ ಯಕ್ಷಗಾನ ಕಲಿತ ಮಕ್ಕಳ ಹೆತ್ತವರೇ ಒಪ್ಪಿಕೊಳ್ಳುತ್ತಾರೆ.
ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವುದನ್ನು ಕಳೆದ ಹತ್ತಾರು ವರ್ಷಗಳಿಂದ ಯಕ್ಷಶಿಕ್ಷಣ ಟ್ರಸ್ಟ್ ಗಮನಿಸಿದೆ. ಜೊತೆಗೆ ಈ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ಪೌರಾಣಿಕ ಜ್ಞಾನ ಹೆಚ್ಚಿರುವುದು, ಅವರಲ್ಲಿ ನಮ್ಮ ಸಂಸ್ಕೃತಿಯ ಬೇರು ಇನ್ನೂ ಗಟ್ಟಿಯಾಗಿರುವುದು ಯಕ್ಷಗಾನ ಕಲೆಯ ಶಕ್ತಿಯಾಗಿದೆ.
ಸ್ವಚ್ಛ ಕನ್ನಡ, ಸ್ಪಷ್ಟಉಚ್ಛಾರದೊಂದಿಗೆ ಮಾತನಾಡುವ ಈ ವಿದ್ಯಾರ್ಥಿಗಳು ಸಭಾ ಕಂಪನ - ವೇದಿಕೆಯ ಹೆದರಿಕೆ ಇಲ್ಲದೆ ಪ್ರದರ್ಶನ ನೀಡುತ್ತಿರುವುದು ಅವರ ವ್ಯಕ್ತಿತ್ವದಲ್ಲಾದ ಬದಲಾವಣೆಯ ದ್ಯೋತಕವಾಗಿದೆ.
ಯಕ್ಷಶಿಕ್ಷಣ ಟ್ರಸ್ಟ್‌ನಿಂದ ಯಕ್ಷಗಾನ ಕಲಿತ ಮಕ್ಕಳಲ್ಲಿ ಹತ್ತಾರು ಮಂದಿ ಮಕ್ಕಳು ಯಕ್ಷಗಾನ ಮೇಳ ಸೇರಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ, ಇನ್ನು ಕೆಲವು ಮಕ್ಕಳು ತಾವೇ ಸ್ವತಃ ಯಕ್ಷಗಾನ ಕಲಿಸುತ್ತಿದ್ದಾರೆ, ಅನೇಕ ಮಕ್ಕಳು ಯಕ್ಷಗಾನ ಕಲಿತಿದ್ದಾಕ್ಕಾಗಿಯೇ ಮೂಡುಬಿದಿರೆ ಆಳ್ವಾಸ್‌ನಂತಹ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.
ಈ ಶಾಲೆಗಳಲ್ಲಿ ಯಕ್ಷಗಾನ ಕಲಿತ ಮಕ್ಕಳೆಲ್ಲರೂ ಯಕ್ಷಗಾನ ಕಲಾವಿದರೇ ಆಗಿಲ್ಲ ನಿಜ. ಆದರೆ ಅವರೆಲ್ಲರೂ ಅತ್ಯುತ್ತಮ ಕಲಾಭಿಮಾನಿಗಳು, ಕಲಾಪ್ರೇಕ್ಷಕರಂತೂ ಆಗಿದ್ದಾರೆ.
ಐದು ಜಿಲ್ಲೆಗಳಲ್ಲಿ ವ್ಯಾಪಕತೆ ಇರುವ ಏಕೈಕ ಕಲೆ
ರಾಜ್ಯದಲ್ಲಿ ಇತರ ಕಲೆಗಳು ಒಂದು ಅಥವಾ 2 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಯಕ್ಷಗಾನ ಹಾಗಲ್ಲ, ಐದು ಜಿಲ್ಲೆಗಳ ವ್ಯಾಪಕ ವಿಸ್ತಾರ ಪಡೆದಿರುವ ಏಕೈಕ ಕಲೆ ಯಕ್ಷಗಾನ. ಉತ್ತರ ಕನ್ನಡ (Uttara Kannada), ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಶಿವಮೊಗ್ಗ (Shivamogga), ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಅಷ್ಟೇಅಲ್ಲ, ಅದರ ಕಂಪು ಹೊರರಾಜ್ಯಗಳಿಗೆ, ಹೊರದೇಶಗಳಿಗೂ ಹರಡಿದೆ. ವಿದೇಶಗಳಲ್ಲೂ ಯಕ್ಷಗಾನಕ್ಕೆ ಸಾಕಷ್ಟುಅಭಿಮಾನಿಗಳಿದ್ದಾರೆ.
ರಾಜ್ಯದಲ್ಲಿ ಇಂತಹ ಸಾಧನೆ ಮಾಡಿರುವ ಏಕೈಕ ಕಲೆ ಯಕ್ಷಗಾನಕ್ಕೆ ರಾಜ್ಯಕಲೆಯ ಮಾನ್ಯತೆ ಸಿಗಬೇಕಾಗಿರುವುದು ಅಗತ್ಯವೂ ಹೌದು, ಅರ್ಹವೂ ಹೌದು.
ಯಕ್ಷಗಾನಕ್ಕೆ ಅರ್ಹತೆ ಇದೆ, ಜನಪ್ರತಿನಿಧಿಗಳಿಗೆ ಬದ್ಧತೆ ಇದೆಯೇ?
ಯಕ್ಷಗಾನ ರಾಜ್ಯ ಕಲೆಯಾಗುವುದಕ್ಕೆ ಎಲ್ಲಾ ರೀತಿಯಲ್ಲಿಯೂ ಅರ್ಹವಾಗಿದೆ. ಇತರ ಕಲೆಗಳು ಒಂದು ಅಥವಾ 2 ಜಿಲ್ಲೆಗಳಿಗೆ ಸೀಮಿತವಾಗಿದ್ದರೆ, ಯಕ್ಷಗಾನ ಕಲೆ ಮಾತ್ರ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಅದರ ಕಂಪು ಹೊರರಾಜ್ಯಗಳಿಗೆ ಮಾತ್ರವಲ್ಲದೆ ಹೊರದೇಶಗಳಿಗೂ ಹರಡಿದೆ. ಆದರೆ ರಾಜ್ಯದಲ್ಲಿ ಇಷ್ಟುವ್ಯಾಪಕವಾಗಿರುವ ಕಲೆಯನ್ನು ರಾಜ್ಯ ಕಲೆಯನ್ನಾಗಿ ಮಾಡುವಲ್ಲಿ ನಮ್ಮ ಜನಪ್ರತಿನಿಧಿಗಳಲ್ಲಿ ಬದ್ಧತೆಯನ್ನು ತೋರಿಸುತ್ತಾರೆಯೇ ಎಂಬುದೇ ಪ್ರಶ್ನೆಯಾಗಿದೆ.
-ಮುರಳಿ ಕಡೆಕಾರ್, ಪ್ರ.ಕಾರ್ಯದರ್ಶಿ, ಯಕ್ಷಗಾನ ಕಲಾರಂಗ ಉಡುಪಿ.