ಹೃದಯ ಸರ್ಜರಿ ಬಳಿಕವೂ 70ನೇ ವಯಸ್ಸಲ್ಲಿ ಎವರೆಸ್ಟ್‌ ಹತ್ತಿದ ವೈದ್ಯ!

Published : Apr 03, 2023, 06:22 AM IST
ಹೃದಯ ಸರ್ಜರಿ ಬಳಿಕವೂ 70ನೇ ವಯಸ್ಸಲ್ಲಿ ಎವರೆಸ್ಟ್‌ ಹತ್ತಿದ ವೈದ್ಯ!

ಸಾರಾಂಶ

ಹೃದಯ ಸಂಬಂಧಿ ಕಾಯಿಲೆ ಅಥವಾ ಆ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ನಂತರ ಜೀವನ ಹೆಚ್ಚು ಕಡಿಮೆ ಮುಗಿದಂತೆ ಎನ್ನುವ ಮನಸ್ಥಿತಿ ಇರುವಾಗ ಬೈಪಾಸ್‌ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ವೈದ್ಯರೊಬ್ಬರು ಪ್ರಖ್ಯಾತ ಪರ್ವತಗಳನ್ನು ಹತ್ತಿ ಹಲವರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ.

ಬೆಂಗಳೂರು (ಏ.3) : ಹೃದಯ ಸಂಬಂಧಿ ಕಾಯಿಲೆ ಅಥವಾ ಆ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ನಂತರ ಜೀವನ ಹೆಚ್ಚು ಕಡಿಮೆ ಮುಗಿದಂತೆ ಎನ್ನುವ ಮನಸ್ಥಿತಿ ಇರುವಾಗ ಬೈಪಾಸ್‌ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ವೈದ್ಯರೊಬ್ಬರು ಪ್ರಖ್ಯಾತ ಪರ್ವತಗಳನ್ನು ಹತ್ತಿ ಹಲವರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ.

ವೈದ್ಯರಾಗಿರುವ ಮಾಲೂರು ರಾಮಣ್ಣ ವಿಜಯ್‌(Dr Maluru Ramanna vijaya) ಅವರು ತಮ್ಮ 55ನೇ ವಯಸ್ಸಿನಲ್ಲಿ ಬೈಪಾಸ್‌ ಹೃದಯ ಶಸ್ತ್ರ ಚಿಕಿತ್ಸೆ(Bypass heart surgery)ಯಾದ ಬಳಿಕ 70ನೇ ವಯಸ್ಸಿನಲ್ಲಿ ಮೌಂಟ್‌ ಎವರೆಸ್ಟ್‌ (Mount Everest)ಹತ್ತಿ (5,364 ಮೀ.) ಸಾಧನೆ ಮಾಡಿದ್ದಾರೆ. ಇದೀಗ 80ನೇ ವರ್ಷದಲ್ಲಿರುವ ಅವರು ಜಪಾನ್‌ನ ಎತ್ತರದ ಪರ್ವತ ಮೌಂಟ್‌ ಫುಜಿ(Mount fuji) ಏರಲು (3,776.24 ಮೀ) ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಗಂಗಾವತಿ: 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯವಕ..!

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಬೈಪಾಸ್‌ ಸರ್ಜರಿಗೆ ಒಳಗಾದವರಿಗೆ ಸ್ಫೂರ್ತಿ ನೀಡಲು ಶಿಖರಗಳನ್ನು ಹತ್ತಲು ಪ್ರಾರಂಭಿಸಿದೆ. 1988ರಲ್ಲಿ ಅಪಘಾತದಿಂದ ತಲೆಗೆ ಗಂಭೀರ ಪೆಟ್ಟುಬಿದ್ದು ಭಾಗಶಃ ದೃಷ್ಠಿ ಕಳೆದುಕೊಂಡಿದ್ದೆ. ಬೌದ್ಧಿಕ ಸ್ಮರಣೆಯ ಮೇಲೂ ಪರಿಣಾಮ ಬೀರಿತ್ತು. ನಂತರದ ಮೂರು ತಿಂಗಳೊಳಗೆ ಹೃದಯದ ನಾಲ್ಕೂ ರಕ್ತನಾಳಗಳು ಬ್ಲಾಕ್‌ ಆಗಿದ್ದರಿಂದ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆಗ ನನಗೆ 55 ವರ್ಷವಾಗಿತ್ತು. ಆರೋಗ್ಯ ಸುಧಾರಣೆಗೊಂಡ ನಂತರ 70ನೇ ಹುಟ್ಟುಹಬ್ಬದ ಸಮಯದಲ್ಲಿ ಮೌಂಟ್‌ ಎವರೆಸ್ಟ್‌ ಏರಿದೆ. ಇತಿಹಾಸ ನೋಡಿದಾಗ ಹೃದಯ ಶಸ್ತ್ರಚಿಕಿತ್ಸೆಯಾದರೂ ಈ ಶಿಖರ ಏರಿದ ಮೊದಲ ವ್ಯಕ್ತಿ ನಾನು ಎಂದರು.

75ನೇ ವಯಸ್ಸಿನಲ್ಲೇ ಮೌಂಟ್‌ ಫä್ಯಜಿ ಏರಲು ನಿರ್ಧರಿಸಿದ್ದೆ. ಆದರೆ ಕೋವಿಡ್‌ ಕಾರಣಗಳಿಂದ ಆಗಲಿಲ್ಲ. ಈಗ ಕೋವಿಡ್‌ ಸಮಸ್ಯೆ ಬಗೆಹರಿದಿದೆ. ಹಾಗಾಗಿ ಶೀಘ್ರ ಮೌಂಟ್‌ ಫä್ಯಜಿಗೆ ತೆರಳಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಸ್ಟಂಟ್ ಮಾಡೋಕೆ ಹೋಗಿ ಮುರಿತಾ ಸೊಂಟ... ವಿಡಿಯೋ ವೈರಲ್

ಡಾವಿಜಯ ಅವರ ತಂದೆಯ ಅಜ್ಜ ಡಾಎಂ.ಎಲ್‌.ರಾಮಣ್ಣ ಅವರು ವಿಕ್ಟೋರಿಯಾ ಆಸ್ಪತ್ರೆ(Victoria Hospital)ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೊದಲ ಭಾರತೀಯ ವೈದ್ಯರಾಗಿದ್ದರು. ತಂದೆ ರಾಮಣ್ಣ ಮೈಸೂರು ವಿವಿಯಲ್ಲಿ ದೈಹಿಕ ಶಿಕ್ಷಕರಾಗಿದ್ದರು, ತಾಯಿ ಲಕ್ಷ್ಮೇದೇವಿ ರಾಮಣ್ಣ ಚಾಮರಾಜಪೇಟೆ, ಹೊಸಕೋಟೆ ಮತ್ತು ಆನೇಕಲ್‌ನಿಂದ ಶಾಸಕರಾಗಿ 17 ವರ್ಷ ವಿಧಾನಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

PREV
Read more Articles on
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!