ಮಧುಗಿರಿ ಆಡಳಿತ ಸ್ಥಳೀಯರಿಗೆ ಸಿಗಬೇಕು : ಬಿಜೆಪಿ ಟಿಕೆಟ್‌ ಆಕಾಂಕ್ಷಿ

By Kannadaprabha News  |  First Published Apr 3, 2023, 6:11 AM IST

ಜನತಂತ್ರ ವ್ಯವಸ್ಥೆಯಲ್ಲಿ ಜನರದ್ದೇ ಅಂತಿಮ ತೀರ್ಮಾನ. ನನ್ನದು ಪ್ರೀತಿ, ವಿಶ್ವಾಸದ ರಾಜಕಾರಣ ಎಂದು ಜನಮುಖಿ ಸಂಸ್ಥೆ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಲ್‌.ಸಿ. ನಾಗರಾಜು ತಿಳಿಸಿದರು.


 ಮಧುಗಿರಿ: ಜನತಂತ್ರ ವ್ಯವಸ್ಥೆಯಲ್ಲಿ ಜನರದ್ದೇ ಅಂತಿಮ ತೀರ್ಮಾನ. ನನ್ನದು ಪ್ರೀತಿ, ವಿಶ್ವಾಸದ ರಾಜಕಾರಣ ಎಂದು ಜನಮುಖಿ ಸಂಸ್ಥೆ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಲ್‌.ಸಿ. ನಾಗರಾಜು ತಿಳಿಸಿದರು.

ಇಲ್ಲಿನ ಮಂಡಲ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳಿಂದ ಭಾಜಪ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Tap to resize

Latest Videos

ತಾಲೂಕಿನ ಆಡಳಿತ ಸ್ಥಳೀಯರಿಗೆ ಸಿಗಬೇಕೇ ಹೊರತು ವಲಸಿಗರಿಗೆ ಸಿಗಬಾರದು ಎಂಬುದೇ ನನ್ನ ಗುರಿ. 2023ರ ಕುರುಕ್ಷೇತ್ರದಲ್ಲಿ ಸ್ಥಳೀಯರು ಗೆಲ್ಲಬೇಕಾ ಅಥವಾ ಬೇರೆಯವರು ಗೆಲ್ಲಬೇಕಾ ಎಂಬುದನ್ನು ಮತದಾರರು ತೀರ್ಮಾನಿಸಬೇಕು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ದೃಢ ಹುಮ್ಮಸ್ಸಿನೊಂದಿಗೆ ವ್ಯವಸ್ಥಿತವಾಗಿ ಚುನಾವಣೆ ಮಾಡುತ್ತೇವೆ ಎಂದರು.

ಮಧುಗಿರಿ ವಿಧಾನಸಭಾ ಕ್ಷೇತ್ರದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕಾವಣದಾಲ ಪಂಚಾಯತಿಯ ಅಧ್ಯಕ್ಷರು, ಸದಸ್ಯರು ಹಾಗೂ ವಿಎಸ್‌ಎಸ್‌ಎನ್‌ ನಿರ್ದೇಶಕರು ಇಂದು ಭಾಜಪ ಪಕ್ಷಕ್ಕೆ ಸೇರಿದ್ದಾರೆ.

ಭಾರತೀಯ ಜನತಾ ಪಕ್ಷ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಆಯ್ಕೆ ಆಗಬೇಕಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿಯ ಭೂಮಿ ಹಕ್ಕು ಮಧುಗಿರಿಯವರಿಗೆ ಮಾತ್ರ ಸೇರಬೇಕು ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಪಿ.ಎಲ್‌.ನರಸಿಂಹಮೂರ್ತಿ ಮಾತನಾಡಿ, ಈ ಬಾರಿ ಯುವ ಪಡೆಯು ಬಿಜೆಪಿಗೆ ಬೆಂಬಲವಾಗಿ ನಿಂತಿದ್ದು, ಇತರ ಪಕ್ಷಗಳ ಮತ ಪೆಟ್ಟಿಗೆಯು ಖಾಲಿ ಡಬ್ಬಗಳಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಈ ಬಾರಿ ಬಿಜೆಪಿಯು ಈ ಕ್ಷೇತ್ರದಲ್ಲಿ ಜಯಭೇರಿ ಬಾರಿಸಲಿದೆ ಎಂದರು.

ದೊಡ್ಡೇರಿಯ ಮುಖಂಡರಾದ ರಂಗನಾಥ, ಪದ್ಮಣ್ಣ, ಲಕ್ಷ್ಮೀಕಾಂತ, ಲಕ್ಷ್ಮೀನಾರಾಯಣ, ಕಾವಣದಾಲ ಗ್ರಾಪಂ ಅಧ್ಯಕ್ಷ ರಂಗನಾಥ್‌ ಇನ್ನಿತರರು ಬಿಜೆಪಿ ಸೇರ್ಪಡೆಯಾದರು. ಮುಖಂಡರಾದ ನಾಗೇಂದ್ರ, ಶಿವಕುಮಾರ್‌, ನವೀನ್‌, ರಂಗನಾಥ್‌ ಇನ್ನಿತರರು ಹಾಜರಿದ್ದರು.

ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ

ಚಿಕ್ಕಬಳ್ಳಾಪುರ (ಏ.03): ರಾಜ್ಯಾದ್ಯಂತ ಬಿಜೆಪಿ ಪರವಾದ ಅಲೆ ಎದ್ದಿದ್ದು ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಸಹಿತ ಇಡೀ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಿಣಕನಗುರ್ಕಿ ಗ್ರಾಪಂ ವ್ಯಾಪ್ತಿಯ ಮುಖಂಡರಾದ ಲಕ್ಷ್ಮಣರೆಡ್ಡಿ, ಭಾಸ್ಕರರೆಡ್ಡಿ, ಶ್ರೀನಿವಾಸ, ಗಣೇಶರೆಡ್ಡಿ ಸಹಿತ ಹಲವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ನಂತರ ಮಾತನಾಡಿ, ಸಮೃದ್ದ ಕರ್ನಾಟಕ ನಿರ್ಮಿಸುವ ನಮ್ಮ ಸಂಕಲ್ಪದ ಸಾಧನೆಗೆ ಚುನಾವಣಾ ಫಲಿತಾಂಶವು ಮುನ್ನುಡಿ ಬರೆಯಲಿದೆ ಎಂದರು.

ಎಚ್ಚರಿಕೆಯಿಂದ ಚುನಾವಣೆ ಎದುರಿಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಹಿಂದಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳನ್ನು ಜನರಿಗೆ ಮನವರಿಕೆ ಮಾಡಿಕೊಂಡುವ ಮೂಲಕ ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವಂತಹ ವಾತಾವರಣ ನಿರ್ಮಾಣವಾಗಿದೆ. ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದ ಬದಲಿಗೆ ಎಚ್ಚರಿಕೆಯಿಂದ ಚುನಾವಣೆ ಎದುರಿಸಬೇಕೆಂದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ಎಂ.ಬಿ.ಪಾಟೀಲ್‌ ವಿಶ್ವಾಸ

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಶ್ರಮಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ. ಇಡೀ ದೇಶದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡುವ ಮೂಲಕ ಈ ಭಾಗದ ರೈತರು ಮತ್ತು ಬಡವರ ಮಕ್ಕಳು ಸಹ ವೈದ್ಯರಾಗುವ ಅವಕಾಶವನ್ನು ಕಲ್ಪಿಸಲಾಗಿದೆ ಜಿಲ್ಲೆಯು ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆಂದರು.

click me!