ಲಿಂಗಸುಗೂರು: ಕೃಷ್ಣಾ ನದಿಯಲ್ಲಿ ಪ್ರವಾಹ ಪರಸ್ಥಿತಿ, ದ್ವೀಪದಿಂದ ಐವರ ಸ್ಥಳಾಂತರ

By Kannadaprabha News  |  First Published Aug 19, 2020, 3:11 PM IST

ನದಿ ನಡುಗಡ್ಡೆಯ ದ್ವೀಪದಲ್ಲಿ ವಾಸ ಮಾಡುವ ಐವರನ್ನು ಪೊಲೀಸ್‌, ಅಗ್ನಿಶಾಮಕ ದಳ ಸಿಬ್ಬಂದಿಗಳು ಯಾಂತ್ರಿಕ ದೋಣಿ ಮೂಲಕ ಸ್ಥಳಾಂತರ|  ದ್ವೀಪದಲ್ಲಿದ್ದ ಹೊರ ಬರಲು ಒಪ್ಪದ ಜನರು| ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೃಷ್ಣಾನದಿ ನಡುಗಡ್ಡೆಯ ಮ್ಯಾದರಗಡ್ಡಿ ದ್ವೀಪ| 
 


ಲಿಂಗಸುಗೂರು(ಆ.19): ಕೃಷ್ಣಾ ನದಿಯಲ್ಲಿ ಪ್ರವಾಹ ಪರಸ್ಥಿತಿ ನಿರ್ಮಾಣಗೊಂಡಿದ್ದು ನದಿ ನಡುಗಡ್ಡೆಯ ದ್ವೀಪದಲ್ಲಿ ವಾಸ ಮಾಡುವ ಐವರನ್ನು ಪೊಲೀಸ್‌, ಅಗ್ನಿಶಾಮಕ ದಳ ಸಿಬ್ಬಂದಿಗಳು ಯಾಂತ್ರಿಕ ದೋಣಿ ಮೂಲಕ ಮಂಗಳವಾರ ಸ್ಥಳಾಂತರಿಸಿದೆ. ಉಳಿದವರ ಕರೆತರುವ ಕಾರ್ಯಾಚರಣೆ ಮುಂದುವರೆದಿದ್ದು ಆದರೆ ದ್ವೀಪದಲ್ಲಿದ್ದ ಜನರು ಹೊರ ಬರಲು ಒಪ್ಪುತ್ತಿಲ್ಲ.

"

Latest Videos

undefined

ತಾಲೂಕಿನ ಗುಂತಗೋಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೃಷ್ಣಾನದಿ ನಡುಗಡ್ಡೆಯ ಮ್ಯಾದರಗಡ್ಡಿ ದ್ವೀಪದಲ್ಲಿ ವಾಸ ಮಾಡುವ ಜನರ ಬಳಿಗೆ ಪ್ರವಾಹ ದಾಟಿ ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು ತೆರಳಿದಾಗ ದ್ವೀಪದಲ್ಲಿದ್ದ ಜನರು ಹೊರ ಬರಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರವಾಹ ಬಂದಾಗ ಬಂದು ನಮ್ಮನ್ನ ಕರೆದುಕೊಂಡು ಹೋಗಿ ಶಾಲೆಯಲ್ಲಿ ಕೂಡಿ ಹಾಕ್ತೀರಿ ನಂತರ ನಮ್ಮ ಗೋಳು ಕೇಳುವುದಿಲ್ಲ ಪ್ರತಿ ವರ್ಷ ಹಿಗೇಯೆ ಮಾಡುತ್ತೀರಿ. ನಾವು ನೀರಿನಲ್ಲಿ ಕೊಚ್ಚಿ ಹೋದರು ಪರವಾಗಿಲ್ಲ ಇಲ್ಲಿಯೇ ಇರುತ್ತೇವೆ. ಪ್ರವಾಹ ಬಂದು ವಿಷಜಂತುಗಳ ನಡುವೆ ಪ್ರಾಣ ಭಯದಲ್ಲಿ ದ್ವೀಪದಲ್ಲಿ ವಾಸ ಮಾಡುವ ನಮಗೆ ವಸತಿ, ಭೂಮಿ ನೀಡಿ ಅಂದಾಗ ಮಾತ್ರ ಹೊರ ಬರುತ್ತೇವೆ. ಸೌಲಭ್ಯ ಒದಗಿಸುವವರೆಗೂ ನಾವು ಹೊರ ಬರಲ್ಲ ಎಂದು ಬಿಗಿಪಟ್ಟು ಹಿಡಿದರು.

ರಾಜ್ಯದಲ್ಲಿ ಮತ್ತೊಂದು ದೋಣಿ ದುರಂತ

ಜನರ ಮನವೊಲಿಸುವಲ್ಲಿ ಕೊನೆಗೂ ಯಶಸ್ವಿಯಾದ ಡಿವೈಎಸ್‌ಪಿ ಹುಲ್ಲೂರು. ಮ್ಯಾದರಗಡ್ಡಿ ದ್ವೀಪದಲ್ಲಿ 5 ಜನರನ್ನು ತಾಂತ್ರಿಕ ದೋಣಿ ಸಹಾಯದಿಂದ ಕರೆತಂದಿದ್ದು ಅವರಿಗೆ ಯರಗೋಡಿ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಒಟ್ಟು 16 ಜನರು ದ್ವೀಪದಲ್ಲಿದ್ದು ಇದರಲ್ಲಿ 5 ಜನರನ್ನು ಕರೆತರಲಾಗಿದ್ದು ಉಳಿದ 11 ಜನರನ್ನು ಮನವೊಲಿಸಿ ಕರೆತರುವ ಕಾರ್ಯಾಚರಣೆ ಸಂಜೆಯ ವರೆಗೂ ಮುಂದುವರೆದಿದೆ.

ಕೃಷ್ಣಾ ನದಿಗೆ ಬಸವಸಾಗರ ಜಲಾಶಯದಿಂದ 2,5,0000 ಕ್ಯೂಸೆಕ್‌ ನೀರು ಹರಿಬಿಡಲಾಗಿದೆ. ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಾಗದಂತೆ ನೀರು ಜಲಾಶಯದ ನಿರ್ವಹಣೆಗೆ ಮುಂದಾಗಿದ್ದು ಅಧಿಕಾರಿಗಳು ಪರಸ್ಪರ ಸಮಾಲೋಚನೆ ನಡೆಸಿ ನೀರು ಹರಿಸಲು ಸೂಕ್ತ ಎಚ್ಚರಿಕೆ ಕ್ರಮಗಳ ವಹಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಮ್ಯಾದರಗಡ್ಡಿ ದ್ವೀಪದಲ್ಲಿರುವ ಜನರು ಹೊರ ಬರಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಜನರ ಮನವೊಲಿಸಿ ಐವರನ್ನು ಕರೆತರಲಾಗಿದೆ. ಉಳಿದವರ ಮನವೊಲಿಸಿ ಹೊರಗೆ ಕರೆದುಕೊಂಡು ಬರುವ ಯತ್ನಗಳ ನಿರಂತರವಾಗಿ ನಡೆಸಲಾಗುತ್ತದೆ ಎಂದು ಲಿಂಗಸುಗೂರಿನ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರು ತಿಳಿಸಿದ್ದಾರೆ.
 

click me!