Kolar: ಹೃದಯ ಫೌಂಡೇಶನ್ ಸಂಸ್ಥೆಯಿಂದ ವಿದ್ಯಾರ್ಥಿನಿಯರಿಗಾಗಿ ಪಿಂಕ್ ರೂಂ ಸ್ಥಾಪನೆ

By Govindaraj S  |  First Published Nov 27, 2022, 8:34 PM IST

ತಾಲ್ಲೂಕಿನ ಮದನಹಳ್ಳಿ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಬೆಂಗಳೂರು ಮೂಲದ ಹೃದಯ ಫೌಂಡೇಶನ್ ಎಂಬ ಸಂಸ್ಥೆಯಿಂದ ಪಿಂಕ್ ರೂಂ ನಿರ್ಮಾಣ ಮಾಡಲಾಗಿದ್ದು, ಬಹಳಷ್ಟು ವಿಶೇಷಗಳಿಂದ ಕೂಡಿದೆ. 


ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ನ.27): ತಾಲ್ಲೂಕಿನ ಮದನಹಳ್ಳಿ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಬೆಂಗಳೂರು ಮೂಲದ ಹೃದಯ ಫೌಂಡೇಶನ್ ಎಂಬ ಸಂಸ್ಥೆಯಿಂದ ಪಿಂಕ್ ರೂಂ ನಿರ್ಮಾಣ ಮಾಡಲಾಗಿದ್ದು, ಬಹಳಷ್ಟು ವಿಶೇಷಗಳಿಂದ ಕೂಡಿದೆ. 

Latest Videos

undefined

ಗ್ರಾಮೀಣ ಶಾಲೆಗಳಿಗೆ ದೂರದಿಂದ ಬರುವ ಬಾಲಕಿಯರು ತಿಂಗಳ ಋತು ಸಮಯದಲ್ಲಿ ಪರದಾಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿದ್ಯಾರ್ಥಿನಿಯರು ಮನೆಗಳಿಗೆ ಹೋಗುವ ಬದಲು ಶಾಲೆಯಲ್ಲಿ ನಿರ್ಮಾಣ ಮಾಡಿರುವ ಪಿಂಕ್ ರೂಮ್‌ನಲ್ಲಿರುವ ಬಳಸಿಕೊಳ್ಳಬಹುದು. ಸ್ವಚ್ಛತೆ ಜೊತೆಗೆ ವಿಶ್ರಾಂತಿ ಪಡೆದು ಓದಿನ ಕಡೆ ಸಹ ಗಮನ ಹರಿಸಲು ಸಹಕರಿಯಾಗಿದ್ದು,ಇದು ರಾಜ್ಯದಲ್ಲಿ ಪ್ರಥಮ ಪಿಂಕ್ ರೂಂ ಅನ್ನೋದು ವಿಶೇಷ. 

ರಾಜ್ಯದಲ್ಲಿ ಅಶಾಂತಿಗೆ ಸಿದ್ದರಾಮಯ್ಯ ಕಾರಣ: ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ

ಇನ್ನು ನವೀಕೃತ ಪಿಂಕ್ ರೂಂ ನಲ್ಲಿ ತಲಾ ಒಂದು ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ,ಸ್ನಾನದ ಕೊಠಡಿ, ವಿಶ್ರಾಂತಿ ಗೃಹ, ಉಡುಪು ಬದಲಾಯಿಸುವ ಕೊಠಡಿ,ಕೈ ಹೊಳೆಯುವ ಬೇಷಿನ್, ಸ್ಯಾನಿಟರಿ ಪ್ಯಾಡ್ ಯಂತ್ರ, ಪ್ಯಾಡ್ ಸುಡುವ ಯಂತ್ರ ಎರಡು ಮಂಚ ಹಾಗೂ ಎರಡು ಹಾಸಿಗೆ ವ್ಯವಸ್ಥೆ ಇದೆ. ಓದಲು ಪುಸ್ತಕಗಳಿವೆ.ಸುಮಾರು 2.5 ಲಕ್ಷ ವೆಚ್ಚದಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದ್ದು,ಇಂಥ ಸೌಲಭ್ಯ ನಮಗೆ ಅಗತ್ಯವಿತ್ತು ಎಂದು ವಿದ್ಯಾರ್ಥಿನಿಯರು ತಿಳಿಸಿದರು.

click me!