Kolara; ಕೈವಾರ ಕ್ಷೇತ್ರದ ಶ್ರೀ ಯೋಗಿ ನಾರೇಯಣ ಯತೀಂದ್ರರ ಅಧ್ಯಯನ ಪೀಠ ಸ್ಥಾಪಿಸಲು ಮನವಿ

By Suvarna NewsFirst Published Dec 2, 2022, 9:08 PM IST
Highlights

ಕರ್ನಾಟಕ ರಾಜ್ಯ ಸರ್ಕಾರ ಕಾಲಜ್ಞಾನ ಕರ್ತೃಗಳಾದ ಕೈವಾರ ಕ್ಷೇತ್ರದ ಶ್ರೀ ಯೋಗಿ ನಾರೇಯಣ ಯತೀಂದ್ರರ ಅಧ್ಯಯನ ಪೀಠ ಸ್ಥಾಪಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಈ ಅಧ್ಯಯನ ಪೀಠ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಬೇಕೆಂದು ನಗರದ ಶ್ರೀ ಯೋಗಿನಾರೇಣ ಚಾರಿಟಬಲ್ ಟ್ರಸ್ಟ್‌ನ ನಿಯೋಗವು  ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿಪತ್ರ ಸಲ್ಲಿಸಿದರು.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ 

ಕೋಲಾರ (ಡಿ.2): ಕರ್ನಾಟಕ ರಾಜ್ಯ ಸರ್ಕಾರ ಕಾಲಜ್ಞಾನ ಕರ್ತೃಗಳಾದ ಕೈವಾರ ಕ್ಷೇತ್ರದ ಶ್ರೀ ಯೋಗಿ ನಾರೇಯಣ ಯತೀಂದ್ರರ ಅಧ್ಯಯನ ಪೀಠ ಸ್ಥಾಪಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಈ ಅಧ್ಯಯನ ಪೀಠ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಬೇಕೆಂದು ನಗರದ ಶ್ರೀ ಯೋಗಿನಾರೇಣ ಚಾರಿಟಬಲ್ ಟ್ರಸ್ಟ್‌ನ ನಿಯೋಗವು  ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿಪತ್ರ ಸಲ್ಲಿಸಿದರು. ಉಪಕುಲಪತಿ ನಿರಂಜನ್ ವಾನ್ನಳ್ಳಿ ಮಾತನಾಡಿ, ಶ್ರೀ ಯೋಗಿ ನಾರೇಯಣ ಯತೀಂದ್ರರ ಅಧ್ಯಯನ ಪೀಠ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದರೆ ಅನುವುಂಟಾಗುವುದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೈವಾರ ತಾತಯ್ಯರ ಭಕ್ತಾಧಿಗಳು, ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಅಲ್ಲದೆ ಕೈವಾರ ಕ್ಷೇತ್ರವು ಚಿಂತಾಮಣಿ ತಾಲ್ಲೂಕಿನ ವ್ಯಾಪ್ತಿಗೆ ಸೇರಿದ್ದು, ಕೋಲಾರಕ್ಕೆ ಸಮೀಪ ಇರುವುದರಿಂದ ಅಧ್ಯಯನ ಪೀಠವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದರೆ ಎಲ್ಲರಿಗೂ ಅನುಕೋಲಕರವಾಗುವುದು ಎಂದು ಈಗಾಗಲೇ ಮುಖ್ಯ ಮಂತ್ರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೆ, ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನ.24ರಂದು  ಪತ್ರವನ್ನು ಬರೆಯಲಾಗಿದೆ ಎಂದು ತಿಳಿಸಿದರು.

ಶ್ರೀ ಯೋಗಿ ನಾರೇಯಣ ಯತೀಂದ್ರರ ಅಧ್ಯಯನ ಪೀಠ ಬೆಂಗಳೂರು ವಿಶ್ವವಿದ್ಯಾಯಲದಲ್ಲೇ ಸ್ಥಾಪಿಸ ಬೇಕೆಂದು ಕೇಳುವಂತ ಹಕ್ಕು ನಮಗಿದೆ. ಕೈವಾರ ಕ್ಷೇತ್ರವು ನಮ್ಮ ವ್ಯಾಪ್ತಿಯಲ್ಲಿ ಇರುವುದರಿಂದ ಅವರು ಇದೇ ವಿಶ್ವವಿದ್ಯಾಲಯದಲ್ಲೇ ಸ್ಥಾಪಿಸಲು ಅನುಮತಿ ನೀಡುವ ಜೊತೆಗೆ ಇದಕ್ಕೆ ಪೂರಕವಾದ ಸಂಪನ್ಮೂಲಗಳಿಗೆ ಅಗತ್ಯವಾದ ಅನುದಾನ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ ಎಂದು ಹೇಳಿದರು.

ಈಗ ನಿಮ್ಮ ಟ್ರಸ್ಟ್‌ವತಿಯಿಂದ ನೀಡಿರುವ ಮನವಿ ಪತ್ರವನ್ನು ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುವುದು. ಕೈವಾರದಲ್ಲಿ ಅಧ್ಯಯನ ಪೀಠ ಮಾಡಲು ವಿಧಾನ ಪರಿಷತ್ ಸದಸ್ಯ ಎಂ.ಆರ್.ಜಯರಾಮ್ ಸಹ ಮನವಿ ಮಾಡಿದ್ದಾರೆ ಹಾಗೂ ಮುಂದಿನ ಮಾರ್ಚ ಒಳಗೆ ಮಂಜೂರಾತಿ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಈ ಹಿಂದೆ ಕೆಲವು ಅಧ್ಯಯನ ಪೀಠಗಳು ಸ್ಥಾಪನೆಯಾಗಿದ್ದು, ಅವುಗಳಿಗೆ ಸರ್ಕಾರವು ಅಗತ್ಯವಾದ ಅನುದಾನಗಳನ್ನು ಬಿಡುಗಡೆ ಮಾಡುವುದು ವಿಳಂಬವಾಗಿದ್ದ ಸಂದರ್ಭದಲ್ಲಿ ಕನಿಷ್ಟ ಪೀಠದ ಸಿಬ್ಬಂದಿಗಳ ವೇತನ ಬಿಡುಗಡೆ ಆರ್ಥಿಕ ಕೊರತೆ ಉಂಟಾಗಿ ಕೊನೆಗೆ ನಮ್ಮ ವಿಶ್ವವಿದ್ಯಾಲಯದಿಂದಲೇ ೮೪ ಲಕ್ಷ ರೂ ಹೊಂದಿಸಿ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ನೆನಪಿಸಿಕೊಂಡರು.

Kolar: ಜಿಲ್ಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಮಿಂಚಿನ ಸಂಚಾರ

ಟ್ರಸ್ಟ್‌ನ ಕಾರ್ಯದರ್ಶಿ ಕೆ.ವಿ.ಸುರೇಶ್ ಕುಮಾರ್ ಮಾತನಾಡಿ, ಕೈವಾರ ಕ್ಷೇತ್ರಕ್ಕೆ ಏಕಚಕ್ರಪುರ ಎಂದು ಮತ್ತೊಂದು ಹೆಸರಿದೆ. ಕೈವಾರದ ತಳಗವಾರ ಕೊತ್ತಪಲ್ಲಿ ಗ್ರಾಮದಲ್ಲಿ 1729ರಲ್ಲಿ ಜನಿಸಿ ಸಾಂಸರಿಕ ಜೀವನ ನಡೆಸಿದ ನಂತರ ಶ್ರೀ ಅಮರನಾರಾಯಣರ ಕೃಪೆಯಿಂದ ವೈರಾಗ್ಯ ಹೊಂದಿದರು.ಗುರುಗಳ ಮಾರ್ಗದರ್ಶನದಲ್ಲಿ ಘೋರವಾದ ತಪಸ್ಸು ಮಾಡಿ ಭಗವಂತನ ಸಾಕ್ಷತ್ಕಾರ ಪಡೆದು ಭವಿಷ್ಯದ ಘಟನೆಗಳ ಬಗ್ಗೆ ಬೆಳಕು ಚೆಲ್ಲುವಂತ ಕಾಲಜ್ಞಾನದ ಕೃತಿಯನ್ನು ರಚಿಸಿದರು ಎಂದು ತಿಳಿಸಿದರು.

KOLAR : 'ಜಿಲ್ಲೆ ಹಾಗೂ ರಾಜ್ಯದ ಒಳಿತಿಗಾಗಿ ಸಿದ್ಧರಾಮಯ್ಯಗೆಲುವು ಅಗತ್ಯ'

ಟ್ಟಸ್ಟ್‌ನ ಪದಾಧಿಕಾರಿಗಳಾದ ಕೆ.ಎನ್.ರವೀಂದ್ರಕುಮಾರ್, ಎಸ್.ಶ್ರೀಧರ್, ವಿ.ರಘು, ಕೆ.ಎಸ್.ಆರ್.ಟಿ.ಸಿ. ಪ್ರಸಾದ್, ತಲಗುಂದ ನರಸಿಂಹರಾಜು, ವಿ.ವಿಜಯಕುಮಾರ್, ಕೆ.ವರದರಾಜ. ಸಾ.ಮಾ.ಪ್ರಸನ್ನ, ರಂಗನಾಥ್, ಬೆಮೆಲ್ ರವಿಕುಮಾರ್, ಪುಷ್ಠಿನಾರಾಯಣಸ್ವಾಮಿ, ಅನಿಲ್ ಕುಮಾರ್, ಮಹೇಶ್ ಬಾಬು, ಸುನೀಲ್ ಕುಮಾರ್ ಕೃಷ್ಣಪ್ಪ, ಮುರಳಿ, ನವೀನ್ ಇದ್ದರು.

click me!