Davangere: ಡಿಸೆಂಬರ್ 30ರಂದು ತುಂಗಾಭದ್ರಾ ನದಿ ತಟದಲ್ಲಿ ತುಂಗಾ ಆರತಿ, ಮೋದಿಗೆ ಆಹ್ವಾನ

By Gowthami K  |  First Published Dec 2, 2022, 8:06 PM IST

ಡಿಸೆಂಬರ್ 30ರಂದು ದಾವಣಗೆರೆ ತುಂಗಾಭದ್ರಾ ನದಿ ತಟದಲ್ಲಿ ತುಂಗಾ ಆರತಿಗೆ ಭರದ ಸಿದ್ಧತೆಗಳು ನಡೆದಿವೆ. ಈ ಬಾರಿಯ ಮಕರ ಸಂಕ್ರಮದ  ದಿನದಂದು  ಹರಿಹರದ ತುಂಗಾಭದ್ರಾ ನದಿ ತಟದಲ್ಲಿ ತುಂಗಾ ಆರತಿ ನಡೆಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ.


ವರದಿ ; ವರದರಾಜ್ ಏಷ್ಯಾನೆಟ್  ಸುವರ್ಣನ್ಯೂಸ್

ದಾವಣಗೆರೆ (ಡಿ.2): ಡಿಸೆಂಬರ್ 30 ದಾವಣಗೆರೆ ತುಂಗಾಭದ್ರಾ ನದಿ ತಟದಲ್ಲಿ ತುಂಗಾ ಆರತಿಗೆ ಭರದ ಸಿದ್ಧತೆಗಳು ನಡೆದಿವೆ. ಈ ಬಾರಿಯ ಮಕರ ಸಂಕ್ರಮದ  ದಿನದಂದು  ಹರಿಹರದ ತುಂಗಾಭದ್ರಾ ನದಿ ತಟದಲ್ಲಿ ತುಂಗಾ ಆರತಿ ನಡೆಸಲು ಉದ್ದೇಶಿಸಲಾಗಿದೆ. ಹರಿಹರದ ತುಂಗಾಭದ್ರಾ ನದಿ ತಟದ ರಾಘವೇಂದ್ರ ಮಠದ ಹಿಂಭಾಗದಲ್ಲಿ ತುಂಗಾ ಆರತಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು 30 ಕೋಟಿ  ವೆಚ್ಚದಲ್ಲಿ ಕಾಮಗಾರಿ ಭರದಿಂದ  ನಡೆಯುತ್ತಿದೆ.    ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಜಗದ್ಗುರು ವಚನಾನಂದ ಶ್ರೀಗಳು  ತುಂಗಾ ಆರತಿ ಮಂಟಪದ ಕಾಮಗಾರಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಕಾಮಗಾರಿ ನಡೆಯಲು ರಾಜ್ಯ ಸರ್ಕಾರದಿಂದ 10 ಕೋಟಿ ಹಣ ಬಿಡುಗಡೆಯಾಗಿದ್ದು ತುಂಗಾಭದ್ರಾ ನದಿ ತಟದಲ್ಲಿ ಜೆಸಿಬಿಗಳು ಘರ್ಜಿಸುತ್ತಿವೆ. 

Latest Videos

undefined

ದೇಶದ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿರುವ ಸರ್ಕಾರ
ತುಂಗಾ ಆರತಿ ತುಂಗಾಭದ್ರಾ ನದಿ ತಟದ ತುಂಗಾ ಆರತಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ.  ಉತ್ತರ ಪ್ರದೇಶದ ಗಂಗಾ ಆರತಿ ಮಾದರಿಯಲ್ಲೇ ಹರಿಹರದ ತುಂಗಾಭದ್ರಾ ನದಿ ತಟದಲ್ಲಿ ತುಂಗಾ ಆರತಿ ನಡೆಯಲಿದ್ದು ಮೋದಿಯವರ ಕೈಯಿಂದ ಉದ್ಘಾಟನೆ ಮಾಡಿಸಬೇಕೆಂಬುದು ಸರ್ಕಾರದ ಹಾಗು ಸ್ವಾಮೀಜಿಯವರ ಆಶಯವಾಗಿದೆ.. ಉತ್ತರ ಭಾರತದ ಗಂಗಾ ಆರತಿ ಹೊರತುಪಡಿಸಿದ್ರೆ  ರಾಜ್ಯದ ತುಂಗಾಭದ್ರಾ ತಟದಲ್ಲಿ ಇದು ವಿನೂತನ ಕಾರ್ಯಕ್ರಮ. ರಾಜ್ಯದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ  ತುಂಗಾ ಆರತಿ ಕಾರ್ಯಕ್ರಮಕ್ಕೆ ಮೋದಿಯವರಿಂದ ಚಾಲನೆ ನೀಡಿದ್ರೆ ಇದರ ಘನತೆ ಹೆಚ್ಚುತ್ತದೆ ಎಂಬುದು ಸರ್ಕಾರದ ಆಶಯ. 

ಇನ್ನು ಡಿಸಂಬರ್ ಸೇರಿ ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಟೆಂಡರ್ ದಾರರಿಗೆ ಸೂಚಿಸಲಾಗಿದೆ. ಜನವರಿ 14 ರ ವೇಳೆಗೆ ತುಂಗಾ ಮಂಟಪಗಳು   ಸಿದ್ಧವಾಗಲಿದ್ದು ಕಾರ್ಯಕ್ರಮದಲ್ಲಿ ನದಿ ತಟದಲ್ಲೇ  20 ಸಾವಿರಕ್ಕು ಹೆಚ್ಚು ಜನರನ್ನು ಆರತಿಗೆ ಸೇರಿಸುವ ಇರಾದೆ ಇದೆ.. ತುಂಗಾ ಮಂಟಪ ಕಾಮಗಾರಿಗೆ ಆಂದ್ರಾದಿಂದ  ವಿಶೇಷ ಮಾದರಿಯ ಕಲ್ಲು ಆಗಮಿಸಿದ್ದು ತುಂಗಾ ಮಂಟಪದ  ಕಾಮಗಾರಿ ದಿನಕ್ಕೊಂದು ರೂಪು ಪಡೆಯುತ್ತಿದೆ. 

Davanagere: ಗಂಗಾರತಿ ಮಾದರಿ ಹರಿಹರದಲ್ಲಿ ತುಂಗಾರತಿ , ಏನಿದರ ವಿಶೇಷತೆ..?

ಮಾರ್ಚ್ ಏಪ್ರೀಲ್ ನಲ್ಲಿ ವಿಧಾನಸಭೆ  ಎಲೆಕ್ಷನ್ ಇರುವುದರಿಂದ ಡಿಸಂಬರ್ ನಲ್ಲಿ ಗುಜರಾತ್ ಚುನಾವಣೆ ಮುಗಿದ ನಂತರ  ಬಿಜೆಪಿ ನಾಯಕರ ದಂಡು ರಾಜ್ಯಕ್ಕೆ  ಆಗಮಿಸಲಿದೆ. ಅದರಲ್ಲು ಮೋದಿಯವರು ರಾಜ್ಯದಲ್ಲಿ ಚುನಾವಣೆ  ಪ್ರವಾಸ ಕೈಗೊಳ್ಳುವುದರಿಂದ ಹರಿಹರದ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ. ಅದಕ್ಕಾಗಿ  ಕೆಲ ವಿಶೇಷ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಈಗಿನಿಂದಲೇ ಮಾಡಿಕೊಳ್ಳುತ್ತಿದೆ. 

ಮಂತ್ರಾಲಯದ ತುಂಗಾ ತೀರದಲ್ಲಿ ತುಂಗಾರತಿ ಸಂಭ್ರಮ

ತುಂಗಾ ಆರತಿ ನಂತರ ಹರಿಹರದ ಗತವೈಭವ  ಮರುಕಳಿಸಲಿದೆ: ಐತಿಹಾಸಿಕ ಹರಿಹರದ ನಗರ  ಒಂದು ಕಾಲದಲ್ಲಿ ಕೈಗಾರಿಕಾ ನಗರಿಯಾಗಿತ್ತು. ಕಿರ್ಲೋಸ್ಕರ್ ಮುಚ್ಚಿದ ನಂತರ ಉದ್ಯೋಗ ವ್ಯಾಪಾರ ವಹಿವಾಟು ಎಲ್ಲವು ಕುಸಿದಿದ್ದವು. ತುಂಗಾ ಆರತಿ ಆಗುವುದರಿಂದ ಒಂದು ದೈತ್ಯ ಆಧ್ಯಾತ್ಮಿಕ ಕೇಂದ್ರವಾಗಿ ಹರಿಹರ ರೂಪುಗೊಳ್ಳಲಿದೆ. ಇಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಯಾಗಿ ಯುವಕರಿಗೆ ಉದ್ಯೋಗ ವ್ಯಾಪಾರ ಯಥೇಚ್ಚವಾಗಿ ಸಿಗಲಿದೆ. ತುಂಗಾ ಆರತಿ ನಂತರ  ಹರಿಹರದ ಗತವೈಭವ ಮರಳಿಲಿದೆ ಎಂದು ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

click me!