ಪಟ್ಟಣದ ಬಹುತೇಕ ಎಲ್ಲ ಶಾಲೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶ್ರಮಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅಭಿಪ್ರಾಯಪಟ್ಟರು.
ಮಧುಗಿರಿ (ಜ. 15): ಪಟ್ಟಣದ ಬಹುತೇಕ ಎಲ್ಲ ಶಾಲೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶ್ರಮಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಮೌಂಟ್ ವ್ಯೂ ಪಬ್ಲಿಕ್ ಶಾಲೆಯ ವತಿಯಿಂದ ಶುಕ್ರವಾರ ಸಂಜೆ ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ 2022-23ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಮೌಂಟ್ ವ್ಯೂ ವಿರಾಸತ್ ಹಾಗೂ ಪೂರ್ವ ಪ್ರಾಥಮಿಕಗಳ ನೂತನ ಕ್ರೀಡೋ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
undefined
ಅತ್ಯಂತ ಹಿಂದುಳಿದ, ಬರಪೀಡಿತ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿಶೇಷ ಶಿಕ್ಷಣ ಪದ್ಧತಿಗಳನ್ನು ಅನುಷ್ಠಾನಗೊಳಿಸಿ ಸಂಸ್ಥಾಪಕರು, ಶಿಕ್ಷಕರು ಮತ್ತು ಪೋಷಕರು ಮಕ್ಕಳ ಗುಣಾತ್ಮಕ ಶಿಕ್ಷಣ ಕಲಿಕೆಗೆ ಪ್ರೇರಣೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಜತನವಾಗಿ ಕಾಪಾಡುವಲ್ಲಿ ಪಟ್ಟಣದ ಮೌಂಟ್ ವ್ಯೂ ಪಬ್ಲಿಕ್ ಶಾಲೆ ಮುಂಚೂಣಿಯಲ್ಲಿದೆ. ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲ ರಂಗಗಳಲ್ಲೂ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಇಂತಹ ನಗರ ಪ್ರದೇಶದಲ್ಲಿ ವಿನೂತನವಾದ ಕ್ರೀಡಾ ತರಗತಿಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕ್ರೀಡೋ ಶಾಲೆಯ ವಲಯ ವ್ಯವಸ್ಥಾಪಕ ಮಹೇಶ್ ಮಾತನಾಡಿ, ಬೆಂಗಳೂರಿನ ಆಯ್ದ ಪ್ರತಿಷ್ಠಿತ ಶಾಲೆಗಳಲ್ಲಿ ಮಾತ್ರ ಕ್ರೀಡೋ ತರಗತಿಗಳನ್ನು ನಡೆಸುತ್ತಿದ್ದು, ಅಲ್ಲಿನ
ವಿದ್ಯಾರ್ಥಿಗಳಿಂದ ಉತ್ತಮ ಪರೀಕ್ಷೆ ಫಲಿತಾಂಶ ಬಂದಿದೆ. ಇದೇ ಮೊದಲ ಸಲ ಪ್ರಥಮವಾಗಿ ಮಧುಗಿರಿ ಮೌಂಟ್ ವ್ಯೂ ಶಾಲೆಯಲ್ಲಿ ಆರಂಭಿಸಲಾಗಿದೆ. ಇದರಿಂದ
ಪೂರ್ವ ಪ್ರಾಥಮಿಕ ತರಗತಿಗಳಿಂದ ಆರಂಭವಾಗುತ್ತಿದೆ. ಕ್ರೀಡಾದಲ್ಲಿ ತೊಡಗಿಸಿಕೊಂಡ ಮಕ್ಕಳಿಗೆ ಮುಂಬರುವ ತರಗತಿಗಳು ಹಾಗೂ ಸ್ಪಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಕ್ರೀಡೋ ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಮೌಂಟ್ ವ್ಯೂ ಶೈಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿರುವ ಕೆ.ಬಿ.ಚೈತ್ರ, ಭ್ರಮರಾಂಭಿಕಾ, ಎಸ್.ಜಿ.ಗೌರವ್, ರಾಘವೇಂದ್ರ, ನಿತಿನ್, ಚರಣ್, ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ನಡೆದ ಆಕರ್ಷಕ ನೃತ್ಯ ಪ್ರದರ್ಶನಗಳು ನೋಡುಗರ ಕಣ್ಮನ ಸಳೆದವು.
ಕಾರ್ಯಕ್ರಮದಲ್ಲಿ ಮಂಜುನಾಥ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ಸಿದ್ದಗಂಗಪ್ಪ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ್, ಕಸಾಪ ಅಧ್ಯಕ್ಷ
ಸಹನ ನಾಗೇಶ್, ಉಪನ್ಯಾಸಕ ಎನ್.ಮಹಾಲಿಂಗೇಶ್, ವಕೀಲ ಪಿ.ದತ್ತಾತ್ರೇಯ, ಪುರಸಭಾ ಸದಸ್ಯ ಕೆ.ನಾರಾಯಣ್, ಮುಖಂಡ ಎಂ.ಜಿ.ಮಂಜುನಾಥ್,ಸಂಸ್ಥಾಪಕ ಕಾರ್ಯದರ್ಶಿ ಜಿ.ಎಸ್.ಜಗದೀಶ್ ಕುಮಾರ್, ಚಿರೆಕ್ ಶಾಲೆಯ ಭಾಸ್ಕರರೆಡ್ಡಿ, ಎಸ್.ಎಂ.ಆಂಗ್ಲ ಶಾಲೆಯ ವಾಸೀಮ್ ಅಹಮದ್, ಶಿಕ್ಷಣ ಇಲಾಖೆಯ ಪ್ರಾಣೇಶ್, ತಿಮ್ಮರಾಜು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.
ಸಮಾಜದಲ್ಲಿ ಯಾವುದೇ ವ್ಯಕ್ತಿ ಮುಂದೆ ಬರಬೇಕಾದರೆ ಜ್ಞಾನ ಸಂಪಾದನೆ ಅತಿ ಮುಖ್ಯ. ಶಿಕ್ಷಕರು ಹಾಗೂ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಜಿ.ಸಿದ್ದಗಂಗಪ್ಪ ಮಧುಗಿರಿಯಲ್ಲಿ ಮೌಂಟ್ ವ್ಯೂ ಪಬ್ಲಿಕ್‌ಶಾಲೆ ಸ್ಥಾಪಿಸಿ ಅತ್ಯಂತ ಅಚ್ಚುಕಟ್ಟಾಗಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಇದಲ್ಲದೆ ಈ ಶಾಲೆ ಹತ್ತಾರು ಸಾಧನೆಗಳನ್ನು ನೀಡಿ ಪೋಷಕರ ಗಮನ ಸಳೆದಿದೆ.
ಕೆ.ಜಿ.ರಂಗಯ್ಯ ಡಿಡಿಪಿಐ