Chikkaballapur Utsav: ಬೆಂಗಳೂರಿಗೆ ಸಮಾನವಾಗಿ ಚಿಕ್ಕಬಳ್ಳಾಪುರ ಅಭಿವೃದ್ದಿ: ಸಚಿವ ಸುಧಾಕರ್‌

By Govindaraj S  |  First Published Jan 15, 2023, 2:20 AM IST

ಜಿಲ್ಲೆ 15 ವರ್ಷ ಪೂರೈಸುವ ಮೂಲಕ ಹದಿ ಹರೆಯದ ಪ್ರಾಯ ತಲುಪಿದ್ದು, ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿಗೆ ಸಮಾನವಾಗಿ ಜಿಲ್ಲಾ ಕೇಂದ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು. 


ಚಿಕ್ಕಬಳ್ಳಾಪುರ (ಜ.15): ಜಿಲ್ಲೆ 15 ವರ್ಷ ಪೂರೈಸುವ ಮೂಲಕ ಹದಿ ಹರೆಯದ ಪ್ರಾಯ ತಲುಪಿದ್ದು, ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿಗೆ ಸಮಾನವಾಗಿ ಜಿಲ್ಲಾ ಕೇಂದ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಉತ್ಸವದ ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಕಲಾವಿದರ ಮೆರವಣಿಗೆ ವೇಳೆ ಮಾತನಾಡಿದ ಅವರು, ಉತ್ಸವ ಯಶಸ್ಸು ಕಂಡಿರುವುದು ಜನರ ಮೇಲೆ ತಮಗೆ ಧನ್ಯತಾಭಾವ ಮೂಡಿಸಿದೆ. ದಸರಾ ರೀತಿಯಲ್ಲಿ ಉತ್ಸವ ಮಾಡಬೇಕು ಎಂಬ ಉದ್ಧೇಶದಿಂದ ಆಯೋಜಿಸಿದ್ದ ಉತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿರುವುದು ಸಂಸತ ತಂದಿದೆ ಎಂದರು.

ಹಿಂದುಳಿದ ಹಣೆಪಟ್ಟಿ ಅಳಿಸಲಾಗಿದೆ: ಚಿಕ್ಕಬಳ್ಳಾಪುರ ರಾಜಧಾನಿ ಸಮೀಪದಲ್ಲಿದ್ದರೂ ಹಿಂದುಳಿದ ಜಿಲ್ಲೆ ಎಂಬ ಭಾವನೆ ಹಲವರಲ್ಲಿ ಈವರೆಗೂ ಇತ್ತು. ರೈತರ ದುಡಿಮೆಯಿಂದ, ಯುವಕರ ಜಾಣ್ಮೆಯಿಂದ ಜಿಲ್ಲೆ ಈಗ ಎಲ್ಲ ರೀತಿಯಲ್ಲೂ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬತ್ತಿದ್ದ ಕೆರೆಗಳು ತುಂಬಿವೆ, ಇಂತಹ ಸಂತಸ ಮನೆಮಾಡಿರುವುದರಿಂದ ಉತ್ಸವ ಅಗತ್ಯವಿತ್ತು, ಹಾಗಾಗಿಯೇ ಉತ್ಸವ ನಡೆಸಲಾಯಿತು ಎಂದು ಸಮರ್ಥಿಸಿಕೊಂಡರು.

Tap to resize

Latest Videos

ದಸರಾ ಮಾದರಿ ದೀಪಾಲಂಕಾರ: ದಸರಾ ಸ್ಮರಿಸುವ ರೀತಿಯಲ್ಲಿ ನಗರದಾದ್ಯಂತ ದೀಪಾಲಂಕಾರ ವಿಶೇಷವಾಗಿತ್ತು. ಪ್ರತಿ ರಸ್ತೆಯನ್ನು ವೈಶಿಷ್ಯೃಪೂರ್ಣವಾಗಿ ಅಲಂಕರಿಸಲಾಗಿತ್ತು. ಹೊಸ ಚಿಕ್ಕಬಳ್ಳಾಪುರವನ್ನು ಕಾಣುವಂತಾಯಿತು, ಇತಿಹಾಸ ನಿರ್ಮಿಸುವ ಕೆಲಸವಾಗಿದೆ, ಇನ್ನೇನಿದ್ದರೂ ಭವಿಷ್ಯವನ್ನು ಕಟ್ಟುವ ಕೆಲಸವಾಗಲಿದೆ, ಜನರೇ ಹುಮ್ಮಸ್ಸು ನೀಡುವವರು, ಅವರನ್ನು ಕಂಡರೆ ಆಸಕ್ತಿ ಹೆಚ್ಚಾಗಲಿದೆ, ಇತರೆ ಉತ್ಸವಗಳಿಗಿಂತ ಕಳಪೆ ಇರಬಾರದು, ಗಣಮಟ್ಟಕಾಯ್ದುಕೊಳ್ಳಬೇಕು ಎಂಬ ಅನಿಸಿಕೆ ಇತ್ತು ಅದು ಈಡೇರಿದೆ ಎಂದು ಹೇಳಿದರು.

ಮಂತ್ರಿ ಸ್ಥಾನಕ್ಕಿಂತ ಎತ್ತರದ ಸ್ಥಾನ ಸುಧಾಕರ್‌ಗೆ ಸಿಗಲಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾರೈಕೆ

ಶೀಘ್ರವೇ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್‌: ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್‌ ಸಂಚಾರ ಆರಂಭಿಸುವ ಕುರಿತು ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಇಷ್ಟರಲ್ಲೇ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್‌ ಗಳು ಸಂಚರಿಸಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಶ್ರಮಿಸಿದ ಎಲ್ಲರಿಗೂ ಅಭಿನಂದನೆ: ಸ್ಥಳೀಯ ಮುಖಂಡರು ಉತ್ಸವಕ್ಕಾಗಿ ಹಗಲಿರುಳೂ ಶ್ರಮಿಸಿದ್ದಾರೆ, ಜಿಲ್ಲೆಯ ಪ್ರತಿ ಅಧಿಕಾರಿಯೂ ಉತ್ಸವ ತಯಾರಿ ಮತ್ತು ಎಂಟು ದಿನಗಳ ಉತ್ಸವದಲ್ಲಿ ಶ್ರಮಿಸಿದ್ದಾರೆ. ನಗರಸಭೆ ಅಧ್ಯಕ್ಷರು, ಸದಸ್ಯರು ನಗರದ ಶುಚಿತ್ವ ಕಾಪಾಡುವ ಜೊತೆಗೆ ಮೇಲ್ವಿಚಾರಣೆ ಮಾಡಿದ್ದಾರೆ. ಹೀಗೆ ಎಂಟು ದಿನಗಳು ಶ್ರಮಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು. ಸಂಕ್ರಾಂತಿಯ ಅಂಗವಾಗಿ ಶನಿವಾರದ ಉತ್ಸವದಲ್ಲಿ ಆಯೋಜಿಸಿದ್ದ ರಾಸು ಪ್ರದರ್ಶನ ಮತ್ತು ಎತ್ತಿನಗಾಡಿಗಳ ಪ್ರದರ್ಶನ ಬಾಲ್ಯ ನೆನಪಿಸುವಂತಿತ್ತು. ಈ ಪ್ರದರ್ಶನದಲ್ಲಿ ದೇಶೀಯ ರಾಸುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಎತ್ತಿ ತೋರುವಂತಿತ್ತು ಎಂದರು.

ಶೈಕ್ಷಣಿಕ ಕೇಂದ್ರವಾಗಿ ಚಿಕ್ಕಬಳ್ಳಾಪುರ: ಧರ್ಮದ ಆಚಾರ ವಿಚಾರಗಳನ್ನು ಸಂರಕ್ಷಿಸುವ ಕೆಲಸ ಅವರಿಂದ ಆಗಲಿದೆ, ಕಲೆಗಳಿಗೆ ಸಂಬಂಧಿಸಿದ ಶಾಲೆಗಳು ಜಿಲ್ಲೆಯಲ್ಲಿ ಸ್ಥಾಪಿಸುತ್ತಾರೆ. ಇಶಾ ಫೌಂಡೇಷನ್‌,, ಮುದ್ದೇನಹಳ್ಳಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು, ನಗರದ ಎಸ್‌ ಜೆಸಿಐಟಿ ಸಂಸ್ಥೆಗಳು ಮತ್ತು ಸಿವಿವಿ ಶಿಕ್ಷಣ ಸಂಸ್ಥೆಗಳಿಂದ ಜಿಲ್ಲೆ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು. ಕಲೆ, ಸಂಸ್ಕೃತಿ, ಶಿಕ್ಷಣದಲ್ಲಿ ಬೆಂಗಳೂರಿಗೆ ಸಮನಾಗಿ ಬೆಳೆಯುವ ಶಕ್ತಿ ಚಿಕ್ಕಬಳ್ಳಾಪುರ ಪಡೆದಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಮತ್ತಷ್ಟುಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುವುದು, ಹದಿಹರಿಯದ ವಯಸ್ಸಿನಿಂದ ಪ್ರಾಯದ ವಯಸ್ಸಿಗೆ ತಲುಪುತ್ತಿರುವ ಜಿಲ್ಲೆಯನ್ನು ಸುಸೂತ್ರವಾಗಿ ಕೊಂಡೊಯ್ಯುವ ಕೆಲಸ ಆಗಬೇಕಿದೆ ಎಂದರು.

ವಿರೋಧಿಸುವುದೇ ಜೆಡಿಎಸ್‌ ಕೆಲಸ: ಜೆಡಿಎಸ್‌ ನ ಕೆಲ ಮುಖಂಡರು ಈ ಹಿಂದೆ ಎಚ್‌ಎನ್‌ ವ್ಯಾಲಿ ಯೋಜನೆಗೂ ವಿರೋಧ ಮಾಡಿದರು, ಈಗ ಕೆರೆಗಳು ತುಂಬಿವೆ, ಇವರ ಮಾತು ಕೇಳಿ ಯೋಜನೆ ತರದಿದ್ದರೆ ಇಂದಿನ ಪಪರಿಸ್ಥಿತಿ ಏನಾಗುತ್ತಿತ್ತು ಎಂದು ಸಚಿವರು ಪ್ರಶ್ನಿಸಿದರು. ಜನರ ಬವಣೆ ಅರ್ಥ ಮಾಡಿಕೊಂಡವರಿಗೆ ಮಾತ್ರ ಕಷ್ಟಅರ್ಥವಾಗಲಿದೆ, ಎಲ್ಲೋ ಕುಳಿತು ಮಾತುನಾಡುವವರಿಗೆ ಅರ್ಥವಾಗಲು ಹೇಗೆ ಸಾಧ್ಯ ಎಂದು ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದರು.

ಚಿಕ್ಕಬಳ್ಳಾಪುರ ಉತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಲಿ: ಸಚಿವ ಆರ್‌.ಅಶೋಕ್‌

ಪ್ರಾಮಾಣಿಕ, ದಕ್ಷತೆ ಮತ್ತು ಬದ್ಧತೆಯಿಂದ ಯೋಜನೆ ತರಲಾಗಿದೆ, ಎಲ್ಲ ಅಭಿವೃದ್ಧಿಗೆ ವಿರೋಧ ಮಾಡುವುದು ಇವರ ಹುಟ್ಟುಗುಣ. ಯಾವುದೇ ದೇಶಕ್ಕೆ ಜಗ್ಗಿ ವಾಸುದೇವ್‌ ಗುರೂಜಿ ಹೋದರೂ ಆ ದೇಶದ ಪ್ರಧಾನಿ ಬಂದು ಜಗ್ಗಿಯವರನ್ನು ಸ್ವಾಗತಿಸುತ್ತಾರೆ. ಅಂತಹ ಮೇರು ವ್ಯಕ್ತಿಗಳಿಗೆ ಸಹಕಾರ ನೀಡದಿದ್ದರೂ ತೊಂದರೆಯಿಲ್ಲ, ಕಲ್ಲು ಹಾಕುವುದು ಬೇಡ ಎಂದು ಅವರು ಸಲಹೆ ನೀಡಿದರು. ಯಾರೇ ಕಲ್ಲು ಹಾಕಿದರೂ ಗಮನ ಕೊಡದೆ ಇಶಾ ಸಂಸ್ಥೆಗೆ ನಾನು ಬೆಂಬಲ ಮತ್ತು ಸಹಕಾರ ನೀಡುವುದಾಗಿ ಸಚಿವರು ಘೋಷಿಸಿದರು.

click me!