ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌: ರೇಣು

By Kannadaprabha News  |  First Published Apr 21, 2020, 10:19 AM IST

‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು, ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌’ ಹೀದೆಂದು ಹೊನ್ನಾಳಿ ಕ್ಷೇತ್ರ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟ್ವಿಟರ್‌, ವಾಟ್ಸಪ್‌ ವಿಡಿಯೋದಲ್ಲಿ ಗುಡುಗಿದ್ದಾರೆ.


ದಾವಣಗೆರೆ(ಏ.21): ‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು, ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌’ ಹೀದೆಂದು ಹೊನ್ನಾಳಿ ಕ್ಷೇತ್ರ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟ್ವಿಟರ್‌, ವಾಟ್ಸಪ್‌ ವಿಡಿಯೋದಲ್ಲಿ ಗುಡುಗಿದ್ದಾರೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರು, ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಿರುವ ಘಟನೆ ಹಿನ್ನೆಲೆಯಲ್ಲಿ ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌ ಎಂಬುದಾಗಿ ರೇಣುಕಾಚಾರ್ಯ ಟ್ವೀಟ್‌ ಮಾಡಿದ್ದಾರೆ.

Tap to resize

Latest Videos

ಪಾದರಾಯನಪುರ ಗಲಾಟೆ ನಡೆಯುತ್ತಿದ್ಧಾಗ ಶಾಸಕ ಜಮೀರ್ ಖಾನ್ ಎಲ್ಲಿದ್ರು?

ಕಳೆದ ರಾತ್ರಿ ಕರ್ತವ್ಯ ನಿರತ ಪೊಲೀಸ್‌- ಆರೋಗ್ಯ ಇಲಾಖೆ ಅಧಿಕಾರಿ, ವೈದ್ಯರು, ಸಿಬ್ಬಂದಿ ಮೇಲೆ ಪಾದರಾಯನಪುರದಲ್ಲಿ ನೂರಾರು ದುಷ್ಕರ್ಮಿಗಳು ದಾಳಿ ಮಾಡಿದ್ದು ಖಂಡನೀಯ. ನನ್ನನ್ನು ಕೋಮುವಾದಿ ಎಂದರೂ ಪರವಾಗಿಲ್ಲ. ನಮ್ಮ ಜನರ ಭದ್ರತೆಗೆ ಅಪಾಯ ತಂದೊಡ್ಡುವ ಜಿಹಾದಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇನೆ. ಜನರ ಆರೋಗ್ಯವೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.

20 ದಿನಗಳ ಹಿಂದೆ ಆಶಾ ಕಾರ್ಯಕರ್ತೆ, ವೈದ್ಯಕೀಯ ಸಿಬ್ಬಂದಿ ಮೇಲೆ ಬೆಂಗಳೂರಿನಲ್ಲಿ ದಾಳಿ, ಹಲ್ಲೆ, ದೌರ್ಜನ್ಯ ಆದಾಗ ಕಾಂಗ್ರೆಸ್ಸಿನ ಶಾಸಕ ಜಮೀರ್‌ ಅಹಮ್ಮದ್‌ ಖಂಡಿಸಿದ್ದರೆ ಇಂತಹ ಘಟನೆ ಪುನರಾವರ್ತನೆ ಆಗುತ್ತಿರಲಿಲ್ಲ. ಆದರೆ, ಜಮೀರ್‌ ಪ್ರಚೋದಿಸಿದ್ದರಿಂದಲೇ ಪಾದರಾಯನಪುರ ಘಟನೆ ನಡೆದಿದೆ. ಜಮೀರ್‌ ಅಹಮ್ಮದ್‌ ಪ್ರಚೋದನೆಯಿಂದಲೇ ಪಾದರಾಯನಪುರದಲ್ಲಿ ಘಟನೆ ನಡೆದಿದ್ದು, ಇಂತಹ ವ್ಯಕ್ತಿ ದಾವಣಗೆರೆ ಮುಸ್ಲಿಂ ಮುಖಂಡ ಎಂಎಲ್‌ಸಿ ಕೆ.ಅಬ್ದುಲ್‌ ಜಬ್ಬಾರ್‌, ಇತರರನ್ನು ನೋಡಿ, ಸಾಮರಸ್ಯ ಕಾಪಾಡುವುದು ಹೇಗೆಂಬುದನ್ನು ಕಲಿಯಲಿ ಎಂದು ಸಲಹೆ ನೀಡಿದ್ದಾರೆ.

Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?

ಅಬ್ದುಲ್‌ ಜಬ್ಬಾರ್‌ ಸೇರಿದಂತೆ ಇಲ್ಲಿನ ಮುಸ್ಲಿಂ ಮುಖಂಡರು ಕೊರೋನಾ ವೈರಸ್‌ ವಿರುದ್ಧ ಜಾಗೃತಿ, ಸಾಮರಸ್ಯ ಕಾಪಾಡುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದೇ ಕೆಲಸವನ್ನು ಜಮೀರ್‌ ಅಹಮ್ಮದ್‌ ಬೆಂಗಳೂರಿನಲ್ಲಿ ಮಾಡಿದ್ದರೆ ಪಾದರಾಯನಪುರ ಘಟನೆ ನಡೆಯುತ್ತಿರಲಿಲ್ಲ. ಜನರನ್ನು ಪ್ರಚೋದಿಸುವ ಜಮೀರ್‌ ವಿರುದ್ಧ ಕೇಸ್‌ ದಾಖಲಿಸಲಿ. ಜಿಹಾದಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಿ. ಗಲ್ಲಿಗೇರಿಸಿದರೂ ತಪ್ಪಲ್ಲ ಎಂದು ತಿಳಿಸಿದ್ದಾರೆ.

ಹೋಂ ಕ್ವಾರಂಟೈನ್‌, ಹಾಸ್ಪಿಟಲ್‌ ಕ್ವಾರಂಟೈನ್‌ ಆಗಬೇಕು. ಇಂತಹ ವಿಚಾರವನ್ನು ಜಮೀರ್‌ ಜನರಲ್ಲಿ ಬಿತ್ತಬೇಕೇ ಹೊರತು, ಸಾಮರಸ್ಯ ಕದಡುವ ವಿಚಾರವನ್ನಾಗಲೀ, ವೈದ್ಯರು, ಪೊಲೀಸರ ಮೇಲೆ ಹಲ್ಲೆ ಮಾಡುವಂತೆ ಪ್ರಚೋದಿಸುವುದನ್ನಲ್ಲ ಎಂದು ಜಮೀರ್‌ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ.

ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!

ಹೊನ್ನಾಳಿ ಕ್ಷೇತ್ರದಲ್ಲಿ ಶವ ಸಂಸ್ಕಾರಕ್ಕೆ ನಾನು ಹೋಗುವುದು ಜನರಿಗಾಗಿಯೇ ಹೊರತು, ಪ್ರಚಾರಕ್ಕಲ್ಲ. ಶವ ಸಂಸ್ಕಾರಕ್ಕೆ ಹೋಗುವುದು, ಜನರ ನೋವು-ನಲಿವಿಗೆ ಸ್ಪಂದಿಸಬೇಕಾದ್ದು ನನ್ನ ಕರ್ತವ್ಯ ಎಂದು ಅವರು ಹೇಳಿದ್ದಾರೆ.

click me!