ಉಡುಪಿ ಶಿಕ್ಷಕರಿಗೆ ಈಗ ಗಡಿ ಕಾಯೋ ಕೆಲಸ!

By Kannadaprabha News  |  First Published Apr 21, 2020, 9:38 AM IST

ಲಾಕ್‌ಡೌನ್‌ ಪಾಲನೆಗೆ ಪೊಲೀಸರ ಜೊತೆ ಶಿಕ್ಷಕರ ನಿಯೋಜನೆ | ಶಿಕ್ಷಕರೂ ಚೆಕ್‌ಪೋಸ್ಟ್‌ಗಳಲ್ಲಿ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ | 45 ಕ್ಕೂ ಹೆಚ್ಚು ಆಯಕಟ್ಟಿನ ಜಾಗದಲ್ಲಿ ನೇಮಕ 


ಕಾರ್ಕಳ (ಏ.21):  ಪೊಲೀಸರು ಮಾತ್ರವಲ್ಲ ಲಾಕ್‌ಡೌನ್‌ ಪಾಲನೆಗಾಗಿ ಉಡುಪಿ ಜಿಲ್ಲಾಧಿಕಾರಿಗಳು ಶಿಕ್ಷಕರನ್ನೂ ನಿಯೋಜಿಸಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ವೀಕ್ಷಕರನ್ನಾಗಿ ನೇಮಿಸಿ ಗಡಿ ಕಾಯುವ ಜವಾಬ್ದಾರಿ ವಹಿಸಿದ್ದಾರೆ.

ಉಡುಪಿ ಜಿಲ್ಲೆಯ 45ಕ್ಕೂ ಹೆಚ್ಚು ಆಯಕಟ್ಟಿನ ಗಡಿಗಳಲ್ಲಿ ಶಿಕ್ಷಕರನ್ನು ವೀಕ್ಷಕರನ್ನಾಗಿ ನೇಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆದೇಶ ಹೊರ ಬಿದ್ದಿದೆ. ಅದರಂತೆ ಈವರೆಗೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕರು ಇನ್ಮುಂದೆ ಸಾರ್ವಜನಿಕರಿಗೆ ಲಾಕ್‌ಡೌನ್‌ ಪಾಠ ಕಲಿಸಲಿದ್ದಾರೆ.

Latest Videos

undefined

ಜಿಲ್ಲಾಧಿಕಾರಿಗಳ ಈ ಆದೇಶ ಶಿಕ್ಷಕರ ವಲಯದಲ್ಲಿ ಗೊಂದಲ ಹಾಗೂ ಕೊಂಚ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ಮಾಡಬೇಕಾದ ಕರ್ತವ್ಯವನ್ನು ಶಿಕ್ಷಕರಿಗೆ ವರ್ಗಾಯಿಸಿದಲ್ಲಿ ಮುಂದೆ ಅಗುವ ಅನಾಹುತಕ್ಕೆ ಹೊಣೆ ಯಾರು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾದರಾಯನಪುರ ಗಲಭೆಯ ಗುಟ್ಟು ಬಿಚ್ಚಿಟ್ಟ ಕೊರೋನ ವಾರಿಯರ್ಸ್!

ಆದೇಶದಲ್ಲಿ ಏನಿದೆ:?

ಕೋವಿಡ್‌-19 ಹರಡುವಿಕೆಯನ್ನು ತಡೆಗಟ್ಟಲು ನಿರ್ಬಂಧಾಜ್ಞೆ ವಿಧಿಸಿರುವುದರಿಂದ ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ವ್‌ಗಳನ್ನು ನಿರ್ಮಿಸಿ ವಾಹನ ಹಾಗೂ ಅದರೊಂದಿಗೆ ಸಂಚರಿಸುವ ವ್ಯಕ್ತಿಗಳ ತಪಾಸಣೆ ನಡೆಸಲು ಮೇಲ್ವಿಚಾರಕರು ಹಾಗೂ ಶಿಕ್ಷಕ ವರ್ಗ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಅದರಂತೆ ಏ.20ರಂದು ಚೆಕ್‌ಪೋಸ್ವ್‌ಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದ್ದು, ಕಾರ್ಕಳ ತಾಲೂಕಿನ ನಾಲ್ಕು ಚೆಕ್‌ಪೋಸ್ವ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

click me!