ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವ ವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ (ಮಾ.01): ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವ ವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು. ಅವರು ತಾಲೂಕು ಆಡಳಿತ ವತಿಯಿಂದ ಅಜೆಕಾರು ರಾಮ ಮಂದಿರದಲ್ಲಿ ನಡೆದ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು . ಸರ್ಕಾರ ಗುರುತಿಸಿರುವ ಅರ್ಹ ವ್ಯಕ್ತಿಗಳಿಗೆ ಯೋಜನೆ ಗಳು ದೊರಕಬೇಕು. ಸವಲತ್ತುಗಳು ದೊರೆತಾಗ ಜೀವನಮಟ್ಟವು ಉತ್ತಮವಾಗುತ್ತ ಸಾಗುತ್ತದೆ. ಸ್ವಾವಲಂಬಿ ಜೀವನಕ್ಕೆ ಪುಷ್ಟಿ ನೀಡಲು ಸಹಕಾರಿಯಾಗುತ್ತದೆ.
ಕೇಂದ್ರ ಸರ್ಕಾರವು ಬ್ಯಾಂಕುಗಳಲ್ಲಿ ಜನಧನ್ ಖಾತೆಗಳನ್ನು ತೆರೆದು ನೇರವಾಗಿ ಹಣವನ್ನು ವರ್ಗಾಯಿಸುವ ಮೂಲಕ ಯೋಜನೆಗಳ ಹಣವನ್ನು ಖಾತೆಗಳಿಗೆ ವರ್ಗಾಯಿಸಲು ಸಾಧ್ಯವಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗಿದೆ. ಬಜೆಟ್ ನಲ್ಲಿ ರಾಜ್ಯ ಸರ್ಕಾರವು ವಾರ್ಷಿಕ ವಾಗಿ 60, 000 ಕೋಟಿ ಹಣವನ್ನು ತೆಗೆದಿಟ್ಟಿದ್ದು ಉಳಿದ ಮೂಲಸೌಕರ್ಯ ಗಳ ಅಭಿವೃದ್ಧಿಗಳಿಗೆ ಹಣ ನೀಡುತಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
undefined
ತಹಸೀಲ್ದಾರ್ ನರಸಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು ಮಹಿಳಾ ಸಬಲೀಕರಣ ಸೇರಿದಂತೆ ಸ್ವಾವಲಂಬಿ ಜೀವನಕ್ಕೆ ಒತ್ತು ನೀಡುತ್ತಿದೆ. ಎಲ್ಲ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು. ಕಾರ್ಕಳ ತಾಲೂಕಿನಲ್ಲಿ ಗೃಹ ಲಕ್ಷ್ಮಿ, ಗೃಹಜ್ಯೋತಿ , ಯುವನಿಧಿ, ಅನ್ನ ಭಾಗ್ಯದಲ್ಲಿ ಪಡಿತರ ಚೀಟಿ ಯಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಗ್ಯಾರಂಟಿ ಯೋಜನೆಯಲ್ಲಿ ಪರಿಹರಿಸಬಹುದಾಗಿದೆ ಎಂದರು.
ರಾಜಕೀಯ ಅಸ್ಥಿತ್ವಕ್ಕೆ ಶೋಷಿತ ಸಮುದಾಯಗಳು ಒಗ್ಗಟ್ಟಾಗಲಿ: ಮಾಜಿ ಸಚಿವ ಎಚ್.ಆಂಜನೇಯ
ತಾ.ಪಂ. ಸಿಇಒ ಗುರು ಶಾಂತಪ್ಪ ವಂದಿಸಿದರು. ಅಜೆಕಾರು ನಾಡಕಚೇರಿ ಉಪತಹಸೀಲ್ದಾರ್ ನಮಿತ, ಕಂದಾಯ ನಿರೀಕ್ಷಕ ರಿಯಾಜ್ , ಮಾಳ ಗ್ರಾ.ಪಂ ಅಧ್ಯಕ್ಷ ಉಮೇಶ್ ಪೂಜಾರಿ ಮಾಳ, ಶಿಕ್ಷಣಾಧಿಕಾರಿ ಲೋಕೇಶ್ , ಅಜೆಕಾರು ಗ್ರಾ.ಪಂ. ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷ ಮೇರಿ ಮಾಸ್ಕಾರೆನ್ಸಸ್ , ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ವಿಜಯ ನಾರಾಯಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ ಶೆಟ್ಟಿ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಅಜೆಕಾರು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.