ಕೊಡಗು; 24 ಗಂಟೆಯಲ್ಲಿ ಇಬ್ಬರ ಕೊಂದ ಹುಲಿ ಸೆರೆಗೆ ಆನೆಗಳ ತಂಡ

By Suvarna News  |  First Published Feb 21, 2021, 5:44 PM IST

ಕೊಡಗಿನಲ್ಲಿ ವ್ಯಾಘ್ರ ದಾಳಿಗೆ ಇಬ್ಬರು ಬಲಿ /  ಸಾಕಾನೆಗಳ ಮೂಲಕ ಹುಲಿ ಸೆರೆಗೆ ಮುಂದಾದ ಅರಣ್ಯ ಇಲಾಖೆ/ ಟಿಶೆಟ್ಟಿಗೇರಿಯಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ ನಿರ್ಧಾರ
 ಹುಲಿಗೆ ಗುಂಡಿಕ್ಕಲು ಆಗ್ರಹ/ ಗ್ರಾಮಸ್ಥರಿಗೆ ಜಿಲ್ಲಾ ರೈತ ಸಂಘದ ಬೆಂಬಲ


ಕೊಡಗು(ಫೆ. 21) ಕೊಡಗಿನಲ್ಲಿ  ಹುಲಿಯೊಂದು ಮಾನವರ ಮೇಲೆ ದಾಳಿ ಮಾಡುತ್ತಿದೆ. ಹುಲಿ ಬಾಯಿಗೆ ಇಬ್ಬರು ತುತ್ತಾಗಿದ್ದು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನೊಂದು ಕಡೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭ ಮಾಡಿದೆ.

ಸಾಕಾನೆಗಳ ಮೂಲಕ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ. ಟಿಶೆಟ್ಟಿಗೇರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಿರ್ಧಾರ ಮಾಡಿದ್ದಾರೆ.  ಹುಲಿಗೆ ಗುಂಡಿಕ್ಕಲು ಆಗ್ರಹ ಮಾಡಿದ್ದು ಗ್ರಾಮಸ್ಥರಿಗೆ ಜಿಲ್ಲಾ ರೈತ ಸಂಘದ ಬೆಂಬಲ ಸಿಕ್ಕಿದೆ.

Latest Videos

undefined

ಶನಿವಾರ ಸಂಜೆ ಬಾಲಕನನ್ನ ಕೊಂದಿದ್ದ ಹುಲಿ ಭಾನುವಾರ  ಬೆಳಗ್ಗೆ ಮಹಿಳೆಯನ್ನು ಬಲಿ ಪಡೆದಿತ್ತು. ಎರಡು ಆನೆ ಬಳಸಿ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ್ತಿಗೋಡು ಶಿಬಿರದಿಂದ ಆನೆಗಳ ಆಗಮನವಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. 

ಕೊಡಗಿನಲ್ಲಿ ಹುಲಿ ದಾಳಿ; ನರಭಕ್ಷಕನ ಸೆರೆಗೆ ಪ್ಲಾನ್
 
ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರು ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಹುಲಿಯ ಸೆರೆಗೆ ಅರಣ್ಯ ಇಲಾಖೆ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಆರಂಭಿಸಿದೆ.

ಶನಿವಾರ ಸಂಜೆ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ಓದುತ್ತಿರುವ ಅಯ್ಯಪ್ಪ, ಕಾಫಿ ತೋಟದಲ್ಲಿ ಸೌದೆಗಾಗಿ ತೆರಳಿದ ಸಂದರ್ಭದಲ್ಲಿ ಎದುರಾದ ಹುಲಿಯು ಬಾಲಕನ ಮೇಲೆರಗಿ ದಾಳಿ ನಡೆಸಿತ್ತು, ಸ್ಥಳದಲ್ಲೇ ಆತನನ್ನು ಕೊಂದು ಹಾಕಿತ್ತು. ಭಾನುವಾರ ಬೆಳಗ್ಗೆ ಅದೇ ಹುಲಿ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಚಿಣ್ಣಿ (60) ಎಂಬುವವರನ್ನು ಕೊಂದು ಹಾಕಿತ್ತು. 

 

click me!