ಸಕ್ರೆಬೈಲಿನ ಹಿರಿಯಜ್ಜಿ ಗಂಗೆ ಇನ್ನಿಲ್ಲ.. ಮಡುಗಟ್ಟಿದ ಶೋಕ

Published : Sep 27, 2021, 12:02 AM ISTUpdated : Sep 27, 2021, 08:34 PM IST
ಸಕ್ರೆಬೈಲಿನ ಹಿರಿಯಜ್ಜಿ ಗಂಗೆ ಇನ್ನಿಲ್ಲ.. ಮಡುಗಟ್ಟಿದ ಶೋಕ

ಸಾರಾಂಶ

* ಶಿವಮೊಗ್ಗ ಸಕ್ರೆಬೈಲಿನ ಹಿರಿಯಜ್ಜಿ ಎಂದೇ ಕರೆಸಿಕೊಳ್ಳುತ್ತಿದ್ದ ಗಂಗೆ ಸಾವು * ರಾಜ್ಯದ ಎಂಟು ಆನೆ ಬಿಡಾರಗಳಲ್ಲಿನ ಹಿರಿಯ ಆನೆ ಎಂದೇ ಗುರುತಿಸಿ ಕೊಂಡಿದ್ದ ಗಂಗೆ * ಸುಮಾರು 80 ರಿಂದ 85 ವರುಷ ವಯಸ್ಸಾದ ಹಿನ್ನಲೆಯಲ್ಲಿ ಗಂಗೆ ಗೆ ಸಹಜವಾದ ಸಾವು * ಕಳೆದ ಎರಡು ವರ್ಷಗಳಿಂದ ಇಲಾಖೆಯ ವೈದ್ಯ ಡಾ . ವಿನಯ್ ನೇತೃತ್ವದಲ್ಲಿ ಮಾವುತರು ಚಿಕಿತ್ಸೆ ನೀಡುತ್ತಿದ್ದರು

ಶಿವಮೊಗ್ಗ(ಸೆ. 26)  ಶಿವಮೊಗ್ಗ ಸಕ್ರೆಬೈಲಿನ ಹಿರಿಯಜ್ಜಿ ಎಂದೇ ಗಂಗೆ ಇನ್ನಿಲ್ಲ. ರಾಜ್ಯದ ಎಂಟು ಆನೆ ಬಿಡಾರಗಳಲ್ಲಿನ ಹಿರಿಯ ಆನೆ ಎಂದೇ ಗುರುತಿಸಿ ಕೊಂಡಿದ್ದ ಗಂಗೆ ನಿಧನಳಾಗಿದ್ದಾಳೆ. ಖೆಡ್ಡಾ ಕಾರ್ಯಾಚರಣೆಯಲ್ಲಿ ಗಂಗೆ ನೈಪುಣ್ಯ ಸಾಧಿಸಿದ್ದಳು.

"

ಸುಮಾರು 80 ರಿಂದ 85 ವರುಷ ವಯಸ್ಸಾದ ಹಿನ್ನಲೆಯಲ್ಲಿ ಗಂಗೆಗೆ ಸಹಜವಾಗಿ ಸಾವು ಕಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಇಲಾಖೆಯ ವೈದ್ಯ ಡಾ . ವಿನಯ್ ನೇತೃತ್ವದಲ್ಲಿ ಮಾವುತರು ಚಿಕಿತ್ಸೆ ನೀಡುತ್ತಿದ್ದರು .

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ

ಕಳೆದ 15 ದಿನಗಳಿಂದ ಆಹಾರ ಸೇವನೆಯನ್ನ ಕಡಿಮೆ ಮಾಡಿತ್ತು . ಕಾಲಿನಲ್ಲಿ ಬಾವು ಕಾಣಿಸಿಕೊಂಡಿತ್ತು . ಆದರೆ ಇಂದು ಬೆಳಿಗ್ಗೆ ನಿಧನಳಾಗಿದ್ದಾಳೆ .  ಬಿಡಾರದ ಕ್ರಾಲ್ ಬಳಿ ಗಂಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಸಕ್ರೆಬೈಲಿನ ಬಿಡಾರಕ್ಕೆ 1971 ರಲ್ಲಿ ಕಾಕನಕೋಟೆಯಿಂದ ಆನೆಯನ್ನು ತರಲಾಗಿತ್ತು.  ಸಹಜವಾಗಿಯೇ ಮಾವುತರಲ್ಲಿ ಶೋಕ ಮನೆಮಾಡಿತ್ತು.

ಶಿವಮೊಗ್ಗ ಮತ್ತು ತೀರ್ಥಹಳ್ಳಿ ರಸ್ತೆ ಮಧ್ಯೆ ಸಿಗುವ  ಸಕ್ರೆಬೈಲಿನಲ್ಲಿ ಆನೆ ಬಿಡಾರವಿದೆ. ಇಲ್ಲಿನ ಸಾಕಾನೆಗಳನ್ನು ಆನೆ ಹಾವಳಿ ಸಂದರ್ಭ ಕಾಡಾನೆಗಳ ತಡೆಗೂ ಬಳಸಿಕೊಳ್ಳಲಾಗುತ್ತದೆ. 

ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ ಹಾಗೂ ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ದಿನ ಬೆಳಿಗ್ಗೆ 8 ರಿಂದ 10 ರವರೆಗೆ ಪ್ರವಾಸಿಗಳಿಗೆ ಈ ಶಿಬಿರ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನುಕಾಡಿನಲ್ಲಿ ಬಿಡಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲಿಯೇ ಇರುವ ಆನೆಗಳನ್ನು ಮತ್ತೆ ಮುಂಜಾನೆ ಶಿಬಿರಕ್ಕೆಕರೆತರಲಾಗುತ್ತದೆ.

ಸ್ವಚ್ಛಂದ ಜೀವನಕ್ಕೆ ಹೆಸರಾದ ಆನೆಗಳು, ಸಕ್ರೆಬೈಲಿನಲ್ಲಿ ಸ್ನೇಹಜೀವಿಗಳಾಗಿ ವಿಹರಿಸುವುದನ್ನು ನೋಡಲೆಂದೇ ನಿತ್ಯವೂ ನೂರಾರು. ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆನೆಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. 

 

 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!