ಬಂಡೀಪುರ: ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಸಾವು, ಪರಿಸರವಾದಿಗಳ ಆಕ್ರೋಶ

By Govindaraj S  |  First Published Dec 14, 2022, 3:01 PM IST

ಗುಂಡ್ಲುಪೇಟೆ ತಾಲೂಕಿನ‌ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಲಾರಿ‌ ಡಿಕ್ಕಿಯಾಗಿ ಆನೆಯೊಂದು ಮಂಗಳವಾರ ರಾತ್ರಿ ಮೃತಪಟ್ಟಿದೆ. ಕೇರಳ ರಸ್ತೆಯಲ್ಲಿ ನಿಂತಿದ್ದ ಆನೆಗೆ ವೇಗದಿಂದ ಬಂದ ಲಾರಿ ಡಿಕ್ಕಿಯಾಗಿದ್ದು ಹೆಣ್ಣಾನೆ ಸ್ಥಳದಲ್ಲೇ ಅಸುನೀಗಿದೆ‌.  


ಚಾಮರಾಜನಗರ (ಡಿ.14): ಗುಂಡ್ಲುಪೇಟೆ ತಾಲೂಕಿನ‌ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಲಾರಿ‌ ಡಿಕ್ಕಿಯಾಗಿ ಆನೆಯೊಂದು ಮಂಗಳವಾರ ರಾತ್ರಿ ಮೃತಪಟ್ಟಿದೆ. ಕೇರಳ ರಸ್ತೆಯಲ್ಲಿ ನಿಂತಿದ್ದ ಆನೆಗೆ ವೇಗದಿಂದ ಬಂದ ಲಾರಿ ಡಿಕ್ಕಿಯಾಗಿದ್ದು ಹೆಣ್ಣಾನೆ ಸ್ಥಳದಲ್ಲೇ ಅಸುನೀಗಿದೆ‌.  

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಲಾರಿ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿಗಳ ರಕ್ಷಣೆಗಾಗಿಯೇ ರಾತ್ರಿ ಸಂಚಾರಕ್ಕೆ ನಿರ್ಬಂಧ ಹೇರಿದ್ದರೂ ಆನೆ ಮೃತಪಟ್ಟಿರುವ ಘಟನೆಗೆ ವಾಹನ ಸವಾರರ ವಿರುದ್ಧ  ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.

Tap to resize

Latest Videos

undefined

ಆನೆ ದಾಳಿಯಿಂದ ಹಾನಿ, ಪರಿಹಾರ ಮೊತ್ತ ಡಬಲ್‌: ಸಿಎಂ ಸಭೆ ತೀರ್ಮಾನ

ಆನೆದಂತ ಅಕ್ರಮ ಮಾರಾಟ: ಆನೆದಂತ ಅಕ್ರಮವಾಗಿ ಮಾರಾಟ ಸಂಬಂಧ ಬಂಧಿತರಾಗಿರುವ ಐವರು ಆರೋಪಿಗಳೊಂದಿಗೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಲಾಗಿದೆ. ಎರಡು ಆನೆದಂತೆಗಳನ್ನು ಬಂಡೀಪುರ ಅರಣ್ಯ ಇಲಾಖೆ ವಶ ಪಡಿಸಿಕೊಂಡ ಘಟನೆ ತಾಲೂಕಿನ ಬಸವನಪುರ ಬಳಿ ನಡೆದಿದೆ. ತಮಿಳುನಾಡು ಮೂಲದ ರಂಗಸ್ವಾಮಿ(35), ಸಂಜೀವಕುಮರ್‌, ಎನ್‌.ವಿನೋತ್‌, ಕತಿರೇಸನ್‌, ಸೆಲ್ವ ನಾಯಗಂರನ್ನು ಮೂರು ದಿನದ ಹಿಂದೆ ಬಂಧಿಸಲಾಗಿತ್ತು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ ಕುಮಾರ್‌ ಸೂಚನೆಯಂತೆ ಎಸಿಎಫ್‌ ಜಿ.ರವೀಂದ್ರ, ಪ್ರಭಾರ ಆರ್‌ಎಫ್‌ಒ ಎನ್‌.ಪಿ.ನವೀನ್‌ ಕುಮಾರ್‌ ಆನೆದಂತ ಪ್ರಕರಣದ ಪ್ರಮುಖ ಆರೋಪಿ ತಮಿಳುನಾಡಿನ ಸೊಕ್ಕನಹಳ್ಳಿ ಗ್ರಾಮದ ಅಶೋಕ್‌ ಬಂಧಿಸಿದರು. ಅಶೋಕ್‌ ವಿಚಾರಣೆಗೊಳಪಡಿಸಿದಾಗ ಮತ್ತಿಬ್ಬರು ಆರೋಪಿಗಳಾದ ಬಾಲನ್‌, ಅರ್ಜುನ್‌ ಬಂಧಿಸಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

Elephant Taskforce: ಮೂಡಿಗೆರೆಯಲ್ಲಿ ಆನೆ ಟಾಸ್ಕ್ ಫೋರ್ಸ್ ರಚನೆ: ಸಹಾಯವಾಣಿ ಆರಂಭ

ಬಂಡೀಪುರ ಬಫರ್‌ ಜೋನ್‌ ವಲಯ ವ್ಯಾಪ್ತಿಯ ಬಸವನಪುರ ಗ್ರಾಮದ ಬಳಿಯ ಒಂಟೆ ಫಾರಂ ಬಳಿ ಎರಡು ಆನೆದಂತ ಅಕ್ರಮ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.  ಉಪ ವಲಯ ಅರಣ್ಯಾಧಿಕಾರಿಗಳಾದ ಮುದ್ದುರಾಜು, ಕಿರಣ್‌ಕುಮಾರ್‌ ಬಿ.ಎಸ್‌., ರಮೇಶ ಮಠಪತಿ, ಚಾಲಕ ಸೋಮ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

click me!