Mangaluru: ಹರೇಕಳ-ಅಡ್ಯಾರ್‌ ಕಿಂಡಿ ಅಣೆಕಟ್ಟು ಕಾಮಗಾರಿಗೆ ಹೈಕೋರ್ಟ್‌ ತಡೆ

By Govindaraj S  |  First Published Dec 14, 2022, 1:43 PM IST

ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಹಾಗೂ ಭೂಮಾಲೀಕರಿಗೆ ಪರಿಹಾರ ಧನವನ್ನು ನೀಡದೆ ನಡೆಸುತ್ತಿರುವ ಹರೇಕಳ- ಅಡ್ಯಾರ್‌ ಸಂಪರ್ಕ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.


ಉಳ್ಳಾಲ (ಡಿ.14): ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಹಾಗೂ ಭೂಮಾಲೀಕರಿಗೆ ಪರಿಹಾರ ಧನವನ್ನು ನೀಡದೆ ನಡೆಸುತ್ತಿರುವ ಹರೇಕಳ- ಅಡ್ಯಾರ್‌ ಸಂಪರ್ಕ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಅಡ್ಯಾರ್‌ -ಹರೇಕಳ ಸಂಪರ್ಕಿಸುವಲ್ಲಿ ನೇತ್ರಾವತಿ ನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 215.62 ಕೋಟಿ ರು. ಅನುದಾನದಲ್ಲಿ 2021ಕ್ಕೆ ಟೆಂಡರ್‌ ಆಗಿ 2020ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ, ಎರಡು ಕಡೆಗಳಲ್ಲಿ ಸಂಪರ್ಕಿಸುವ ರಸ್ತೆಗೆ ಜಾಗದ ತಕರಾರು ಇರುವುದರಿಂದ ಉದ್ಘಾಟನೆಯಾಗಿರಲಿಲ್ಲ.

Tap to resize

Latest Videos

ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಲವ್ ಸ್ಟೋರಿ: ಕಾಲೇಜಿನಿಂದ 18 ಮಂದಿ ಡಿಬಾರ್

ಈ ನಡುವೆ ಸೇತುವೆ ಬದಿಯ ಭೂಮಾಲಕರಾಗಿರುವ ಕಡೆಂಜ ಮೋಹನದಾಸ್‌ ರೈ ಸೇರಿದಂತೆ ಐದು ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. 2020ರಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಅಭಿಯಂತರರು ಪತ್ರಿಕೆಯೊಂದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿರುವ ಪ್ರದೇಶದ ಸುತ್ತಲಿನ 110 ಎಕರೆ ಭೂಮಿ ನೀರಿನಿಂದ ಮುಳುಗುವ ಸಂಭವ ಇದೆ. ಈ ಭಾಗದ ಭೂಒತ್ತುವರಿ ಪ್ರಕ್ರಿಯೆ ತಕ್ಷಣದಿಂದ ಆರಂಭವಾಗಲಿದೆ. ಸ್ಥಳೀಯರು ಸಹಕರಿಸುವಂತೆ ಕೋರಿ ಪ್ರಕಟಣೆ ನೀಡಲಾಗಿತ್ತು.

ಆದರೆ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಮುಳುಗಡೆಯಾಗಲಿರುವ ಪ್ರದೇಶದ ಭೂಒತ್ತುವರಿಯಾಗಲಿ, ಭೂಮಾಲಕರಿಗೆ ನೋಟಿಸ್‌ ನೀಡುವುದಾಗಲಿ, ಮಾಹಿತಿಯನ್ನು ನೀಡದೆ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ಹರೀಶ್‌ ಶೆಟ್ಟಿಎಂಬವರು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿಯನ್ನು ಕೇಳಿದ್ದರೂ ಈವರೆಗೆ ಮಾಹಿತಿಗಳನ್ನು ನೀಡಲಾಗಿಲ್ಲ. ಮೂರು ತಿಂಗಳ ಹಿಂದೆ ಕಡೆಂಜ ಮೋಹನದಾಸ್‌ ರೈ ಅವರು ಮಾಹಿತಿಯನ್ನು ಕೇಳಿದ್ದರೂ ಈವರೆಗೂ ಮಾಹಿತಿಗಳು ದೊರಕಿಲ್ಲ. ಇವೆಲ್ಲದರ ನಡುವೆ ಏಕಾಏಕಿ ಸರ್ವೆ ಕಲ್ಲುಗಳನ್ನು ಹಾಕುವ ಕೆಲಸವಾಗಿದೆ ಎಂದು ಆರೋಪಿಸಲಾಗಿದೆ.

ಮಂಗಳೂರಿನ ಲಾಡ್ಜ್ ಒಂದರಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ, ಅನುಮಾನಕ್ಕೆ ಕಾರಣವಾದ ಟ್ಯಾಬ್ಲೆಟ್!

ಈ ಕುರಿತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಈ ದಾವೆಗೆ ಆದೇಶ ಹೊರಡಿಸಿರುವ ಹೈಕೋರ್ಟ್‌ ನ್ಯಾಯಾಧೀಶರು, ಡಿ.16ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಕಾಮಗಾರಿಗಳನ್ನು ನಡೆಸದೆ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶ ಹೊರಡಿಸಿದ್ದಾರೆ.

click me!