ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಯಲ್ಲಿ ಒಂದು ಕಾಡಾನೆ ಹಿಡಿಯುವಲ್ಲಿ ಯಶಸ್ವಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.29): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ತಾಲೂಕಿನ ಕುಂದೂರು ಭಾಗದಲ್ಲಿ ಮೂರು ಕಾಡಾನೆ ಹಿಡಿಯಲು ಸರಕಾರ ಆದೇಶ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಯಲ್ಲಿ ಒಂದು ಕಾಡಾನೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಾಡಾನೆ ಹಿಡಿಯಲು ನೂರಕ್ಕೂ ಅಧಿಕ ಸಿಬ್ಬಂದಿ ಸೇರಿದಂತೆ ಮತ್ತಿಗೂಡು ಆನೆ ಶಿಬಿರ ದಿಂದ ಭೀಮ, ಅಭಿಮನ್ಯು ಮಹೇಂದ್ರ ಹಾಗೂ ದುಬಾರೆ ಆನೆ ಶಿಬಿರದಿಂದ ಕೃಷ್ಣ ಪ್ರಶಾಂತ್, ಹರ್ಷ ಸೇರಿದಂತೆ ಒಟ್ಟು 6 ಆನೆ ಗಳನ್ನು ಕರೆಸಿಕೊಳ್ಳಲಾಗಿದೆ. ಬೆಳಗ್ಗೆ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಬೈರಾಪುರದಲ್ಲಿ ಬೈರ ತಪ್ಪಿಸಿಕೊಂಡಂತೆ ಇಲ್ಲಿ ಯಾವ ಕಾಡಾನೆಯೂ ತಪ್ಪಿಸಿಕೊಳ್ಳದಂತೆ ಅರಣ್ಯ ಇಲಾಖೆ ಎಚ್ಚರ ವಹಿಸಿ, ಶೋಧ ಮುಂದುವರಿಸಿತ್ತು.
ಸಿದ್ರಾಮುಲ್ಲಾ ಖಾನ್ ಬೈಗುಳ ಅಲ್ಲ: ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ
ಕುಂದೂರು ಎಸ್ಟೇಟ್ ಅರಣ್ಯದಲ್ಲಿ ಒಂದು ಕಾಡಾನೆ ಇರುವ ಮಾಹಿತಿ ಪಡೆದು ಅಲ್ಲಿಗೆ ತೆರಳಿದ ತಂಡದವರು ಕಾರ್ಯಾಚರಣೆ ಚುರುಕುಗೊಳಿಸಿದರು. ಆರಣ್ಯದಲ್ಲಿ ತಂಡ ದವರು ಮತ್ತು ಸಾಕಾನೆಗಳನ್ನು ನೋಡುತ್ತಿದ್ದಂತೆ ಚಕಿತಗೊಂಡ ಕಾಡಾನ ತಪ್ಪಿಸಿಕೊಳ್ಳ ಲೆಕ್ಕಿಸಿತು. ತಂಡದವರು ತಕ್ಷಣವೇ ಸ್ಥಳದ ಅವಕಾಶ ನೋಡಿ ಅರಿವಳಿಕೆ ಚುಚ್ಚುಮದ್ದು ನೀಡಿದ್ದು, ಅಲ್ಲಿಂದ 2 ಕಿ.ಮೀ. ದೂರ. ಓಡಿದ ಕಾಡಾನೆ, ಕುಂಡ್ರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಸ್ವಸ್ಥವಾಯಿತು. ಬಳಿಕ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸೆರೆ ಹಿಡಿದಿದ್ದು,ಸಕ್ರೇಬೈಲು ಆನೆ ಬಿಡಾರಕ್ಕೆ ಲಾರಿಯಲ್ಲಿ ಕರೆದೊಯ್ಯಲಾಯಿತು.
ಕಳೆದ ಮೂರು ತಿಂಗಳಲ್ಲಿ ಮೂವರ ಬಲಿ ಪಡೆದ ಕಾಡಾನೆ
ಕಾಫಿನಾಡಿಗರಿಗೂ.. ಕಾಡಾನೆಗಳಿಗೂ ಕಳೆದ ಕೆಲ ತಿಂಗಳಿನಿಂದ ಸಂಘರ್ಷ ನಡೀತಲೇ ಇದೆ.. ಕಳೆದ ಮೂರು ತಿಂಗಳಲ್ಲಿ ಮೂವರ ಬಲಿಯಾಗಿದೆ. ಕಳೆದ ನವೆಂಬರ್ 20ರಂದು ಇದೇ ಕುಂಡ್ರ ಗ್ರಾಮದ ಪಕ್ಕದ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ಮಹಿಳೆ ಕೂಡ ಬಲಿಯಾಗಿದ್ರು. ಈ ಎಲ್ಲಾ ಬೆಳವಣಿಗೆಗಳು ನಡೆದ್ಮೇಲೆ ಸರ್ಕಾರ, ಮೂರು ಕಾಡಾನೆಗಳನ್ನ ಹಿಡಿಯಲು ಆದೇಶ ಮಾಡ್ತು. ಹೀಗಾಗಿ ನಿನ್ನೆ(ಸೋಮವಾರ) ಮೂಡಿಗೆರೆಗೆ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದಿಂದ ಆರು ಸಾಕಾನೆಗಳು ಬಂದಿದ್ವು. ಅಭಿಮನ್ಯು ನೇತೃತ್ವದಲ್ಲಿ ಬಂದಿದ್ದ ಸಾಕಾನೆಗಳು ಕೂಡಲೇ ಕಾರ್ಯಾಚರಣೆಗೆ ಇಳಿದೇ ಬಿಟ್ವಿದ್ದು. ಕಾಡಿನಲ್ಲಿ ತಲಾಶ್ ನಡೆಸುತ್ತಿದ್ದಾಗ ಆಗಾಗ ಪುಂಡಾಟ ಮೆರೆಯುತ್ತಿದ್ದ ಸುಮಾರು 20ವರ್ಷದ ಈ ಪೋರ ಈ ಟೀಂಗೆ ಸಿಕ್ಕೆಬಿಟ್ಟಿದ್ದ. ಅಷ್ಟಕ್ಕೂ ಈ ಕಾರ್ಯಾಚರಣೆ ಹಿಂದೆ ಕಳೆದ ಒಂದು ವಾರದಲ್ಲಿ ಸಾಕಾಷ್ಟು ಬೆಳವಣಿಗೆಗಳು ನಡೆದಿದ್ವು. ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಮೃತ ಮಹಿಳೆ ಶೋಭಾ ಎಂಬುವರ ಶವವನ್ನ ಇಟ್ಕೊಂಡು ಜನರು ಪ್ರತಿಭಟನೆ ಮಾಡಿದ್ರು.. ಅರಣ್ಯ ಇಲಾಖೆಯ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ರು. ಕೊನೆಗೆ ಅತಿರೇಕಕ್ಕೆ ಹೋದಾಗ ಶಾಸಕರನ್ನ ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡಿದ್ರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ರು. ಇದಾದ ಬಳಿಕ ಶಾಸಕ ಕುಮಾರಸ್ವಾಮಿ, ಹರಿದ ಬಟ್ಟೆಯಲ್ಲಿ ವಿಡಿಯೋ ಮಾಡಿ ಜನರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಆರೋಪಿಸಿದ್ರು.. ಕೊನೆಗೆ ಹುಲ್ಲೆಮನೆ ಕುಂದೂರು ಗ್ರಾಮದ 8ಜನರನ್ನ ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಲಾಯ್ತು.. ಮತ್ತಷ್ಟು ಮಂದಿಗೆ ಈ ಕ್ಷಣದವರೆಗೂ ಪೊಲೀಸರು ತಲಾಶ್ ನಡೆಸುತ್ತಲೇ ಇದ್ದಾರೆ.
ಬಿಜೆಪಿ ಜನಸಂಕಲ್ಪ ಯಾತ್ರೆ ನನ್ನನ್ನು ಟಾರ್ಗೆಟ್ ಮಾಡಿದ ಯಾತ್ರೆಯಾಗಿತ್ತು: ಶಾಸಕ ರಾಜೇಗೌಡ ಆರೋಪ
ಈ ಮಧ್ಯೆ ಒಂದು ಕಾಡಾನೆ ಸೆರೆಯಾಗಿರೋದು ಜನರಿಗೆ ನಿಟ್ಟುಸಿರು ಬಿಡುವಂತಾಗಿದೆ. ಇನ್ನೂ ಕಾಫಿನಾಡಿನಲ್ಲಿ ಕಾಡಾನೆ-ಜನರ ಸಂಘರ್ಷ ಮುಂದುವರಿದ ಹಿನ್ನೆಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳನ್ನ ಒಳಗೊಂಡಂತೆ ಟಾಸ್ಕ್ ಫೋರ್ಸ್ ಕೂಡ ರಚೆನೆಯಾಗಿದೆ.
ಈ ಮಧ್ಯೆ ಮೂಡಿಗೆರೆಯಲ್ಲಿ ಮೂರು ಕಾಡಾನೆಗಳನ್ನ ಹಿಡಿಯಲು ಸರ್ಕಾರ, ಹಸಿರು ನಿಶಾನೆ ತೋರಿಸಿದ ಬೆನ್ನಲ್ಲೇ ಒಬ್ಬ ಪುಂಡ ಲಾಕ್ ಆಗಿದ್ದಾನೆ. ಆತನನ್ನ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನೂ ಇಬ್ಬರ ಬೇಟೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಟೀಂ, ಮತ್ತೆ ಕಾರ್ಯಾಚರಣೆ ನಡೆಸಲಿದ್ದು, ಬಲೆಗೆ ಬೀಳೋವುದು ಯಾರೂ ಅನ್ನೋದನ್ನ ಕಾದು ನೋಡಬೇಕು.