ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದ್ರೆ ಕರ್ನಾಟಕದ ಪ್ರೇಕ್ಷಣೀಯ ಧಾರ್ಮಿಕ ಸ್ಥಳವಾದ ಈ ಬೆಟ್ಟಕ್ಕೆ ಮಾತ್ರ ವಿದ್ಯುತ್ ಇಲ್ಲದೇ ಕತ್ತಲು ಕವಿದಿದೆ. ಈ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸ್ತೇನೆ ಅಂತಾ ಭಕ್ತರೊಬ್ಬರೂ ಹರಕೆ ಹೊತ್ತಿದ್ದು, ಅದಕ್ಕೆ ಬೇಕಾದ ವ್ಯವಸ್ಥೆ ಸಂಪೂರ್ಣ ನಾನೇ ಮಾಡ್ತೇನೆ.
ವರದಿ: ಪುಟ್ಟರಾಜು. ಆರ್.ಸಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಅ.24): ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದ್ರೆ ಕರ್ನಾಟಕದ ಪ್ರೇಕ್ಷಣೀಯ ಧಾರ್ಮಿಕ ಸ್ಥಳವಾದ ಈ ಬೆಟ್ಟಕ್ಕೆ ಮಾತ್ರ ವಿದ್ಯುತ್ ಇಲ್ಲದೇ ಕತ್ತಲು ಕವಿದಿದೆ. ಈ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸ್ತೇನೆ ಅಂತಾ ಭಕ್ತರೊಬ್ಬರೂ ಹರಕೆ ಹೊತ್ತಿದ್ದು, ಅದಕ್ಕೆ ಬೇಕಾದ ವ್ಯವಸ್ಥೆ ಸಂಪೂರ್ಣ ನಾನೇ ಮಾಡ್ತೇನೆ, ವಿದ್ಯುತ್ ಸಂಪರ್ಕಕ್ಕೆ ಅವಕಾಶ ಕೊಡಿಯೆಂದು ಮುಜರಾಯಿ ಸಚಿವರು, ಅಧಿಕಾರಿಗಳ ಗಮನಕ್ಕೆ ತಂದ್ರೂ ಕೂಡ ಯಾವ್ದೇ ಪ್ರಯೋಜನವಾಗ್ತಿಲ್ಲ ಅಂತಾ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ.
undefined
ಹೌದು! ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಇದು ಕರ್ನಾಟಕದ ಪ್ರಸಿದ್ದ ಪ್ರೇಕ್ಷಣೀಯ ಧಾರ್ಮಿಕ ಸ್ಥಳ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ. ಅಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಕ್ಕೆ ನಿತ್ಯ ರಾಜ್ಯ ಹಾಗು ನೆರೆಯ ತಮಿಳುನಾಡು, ಕೇರಳ ರಾಜ್ಯದ ನೂರಾರು ಪ್ವಾಸಿಗರು ಆಗಮಿಸಿ ಪ್ರಕೃತಿ ರಮ್ಯ ರಮಣೀಯತೆಯನ್ನು ಸವಿದು ಹೋಗುತ್ತಾರೆ. ಇನ್ನೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವರ್ಷ ಪೂರ್ತಿ ಹಿಮದಿಂದ ಕೂಡಿರುತ್ತದೆ. ಆ ಸೊಬಗನ್ನು ಕಣ್ತುಂಬಿಕೊಳ್ಳಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ್ತಾರೆ.
ಲೀಟರ್ ಹಾಲಿಗೆ 2 ರು. ಹೆಚ್ಚಳ: ಇಂದಿನಿಂದಲೇ ದರ ಏರಿಕೆ
ಆದ್ರಲ್ಲೂ ವೀಕೆಂಡ್‌ನಲ್ಲಂತೂ ಪ್ರವಾಸಿಗರ ಸಂಖ್ಯೆ ಹೇಳತೀರದು. ಆದ್ರೆ ಈ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ ಹಿಮವದ್ ಗೋಪಾಲಸ್ವಾಮಿಯ ಭಕ್ತರಾದ ಮೈಸೂರಿನ ಶ್ರೀಪಾಲ್ ಅವರು ಹರಕೆ ಒತ್ತುಕೊಂಡಿದ್ರು. ನನಗೆ ಆರ್ಥಿಕ ಪರಿಸ್ಥಿತಿ ಉತ್ತಮವಾದ್ರೆ ನಾನೇ ವಿದ್ಯುತ್ ಕಾಮಗಾರಿ ಕೆಲಸವನ್ನು ಉಚಿತವಾಗಿ ಮಾಡಿಸುತ್ತೇನೆ ಎಂದು ಹರಕೆ ಒತ್ತಿದ್ರು. ಸದ್ಯ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ನೀಡಲು ಸಾಮಾಗ್ರಿಗೆ ಸರ್ಕಾರ ಹಣ ಬಿಡುಗಡೆ ಮಾಡಲಿ ನಾನು ಉಚಿತವಾಗಿ ಕಾಮಗಾರಿ ಕೆಲಸ ಮಾಡಿಸುತ್ತೇನೆ ಎಂದು ತಿಳಿಸುತ್ತಾರೆ.
ಆದ್ರೆ ಸದ್ಯ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ವಿದ್ಯುತ್‌ಗೆ ಜನರೇಟರ್ ಅವಲಂಬಿಸಿದ್ದಾರೆ. ಇದರ ಬಳಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ನಷ್ಟವಾಗ್ತಿದೆ ಅಂತಾರೆ ಭಕ್ತರು. ಇನ್ನೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ವಿದ್ಯುತ್ ಸಂಪರ್ಕ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಈಗಾಗ್ಲೇ ಅರಣ್ಯ ಇಲಾಖೆಯ ಅನುಮತಿ ವಿಚಾರದಲ್ಲಿ ಅರ್ಧದಷ್ಟು ಕೆಲಸ ಮುಗಿದಿದೆ. ಇನ್ನು ಚೆಸ್ಕಾಂ ಸಹ ಸುಮಾರು 3 ಕೋಟಿ 20 ಲಕ್ಷ ಹಣ ನೀಡಲು ಒಪ್ಪಿಗೆ ನೀಡಿದೆ. ಆದ್ರೆ ಮುಜರಾಯಿ ಇಲಾಖೆಯಿಂದ ಕಾಮಗಾರಿಗೆ ಕೇವಲ 8 ಲಕ್ಷ ಹಣ ಬಿಡುಗಡೆ ಮಾಡಬೇಕು.
ಆರ್‌ಟಿಒ ಕಚೇರಿಗಿಲ್ಲ ಸಮರ್ಪಕ ರಸ್ತೆ ವ್ಯವಸ್ಥೆ: ಗುಂಡಿ ಬಿದ್ದ ರಸ್ತೆಯಿಂದ ನಡೆದಿದೆ ಅವಘಡ
ಆದ್ರೆ ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಲು ಮಿನಾಮೇಷ ಎಣಿಸುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆಯಿಂದ ಹಣ ನೀಡಲಾಗಲ್ಲ ಎಂದು ಪತ್ರ ಮೂಲಕ ತಿಳಿಸಿದ್ರೆ ಆ ಹಣವನ್ನು ನಾನೇ ಭರಿಸುತ್ತೇನೆ ಎಂದು ಹೇಳುತ್ತಾರೆ ಭಕ್ತರು. ಒಟ್ಟಾರೆ ಉಚಿತವಾಗಿ ಕಾಮಗಾರಿ ಕೆಲಸ ಮಾಡುತ್ತೇನೆ ಎಂದು ಭಕ್ತರು ಮುಂದೆ ಬಂದರೂ ಸಹಾ ಮುಜರಾಯಿ ಇಲಾಖೆ ಮೀನಾಮೇಷ ಎಣಿಸ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಡೆತಡೆ ನಿವಾರಿಸಿ ಅಧಿಕಾರಿಗಳು ಇದರತ್ತ ಗಮನಹರಿಸಿ ಕಾಮಗಾರಿ ಶೀಘ್ರ ಆರಂಭವಾಗುತ್ತಾ ಅನ್ನೋದನ್ನ ಕಾದುನೋಡಬೇಕಾಗಿದೆ.