ಎಲೆಕ್ಟ್ರಾನ್ ಸಿಟಿ ಪಿಎಚ್ 2 ವೇಲಂಕಿನಿ ಮತ್ತು ಎಲೆಕ್ಟ್ರಾನ್ ಸಿಟಿ ಕಿಯೋನಿಕ್ಸ್, ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 3ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು(ಸೆ.03): ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ಕಾಮಗಾರಿ ಹಿನ್ನಲೆ ಇಂದು(ಭಾನುವಾರ) ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಲೆಕ್ಟ್ರಾನ್ ಸಿಟಿ ಪಿಎಚ್ 2 ವೇಲಂಕಿನಿ ಮತ್ತು ಎಲೆಕ್ಟ್ರಾನ್ ಸಿಟಿ ಕಿಯೋನಿಕ್ಸ್, ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 3ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜನರಿಗೆ ಶಾಕ್ ಕೊಟ್ಟ ಗೃಹಜ್ಯೋತಿ ಯೋಜನೆ: ಸಿಕ್ಕಿಲ್ಲ ಉಚಿತ ಬಿಲ್.. ಹಣ ಕಟ್ಟಿ ಎಂದ ಬೆಸ್ಕಾಂ..!
ಬೊಮ್ಮನಹಳ್ಳಿ ಸುತ್ತಮುತ್ತ , ಕೋನಪ್ಪನ ಅಗ್ರಹಾರ, ಸಿಲ್ಕ್ ಬೋರ್ಡ್ ಜಂಕ್ಷನ್, ಸಲಾರ್ ಪುರಿ ಟಿಮ್ಕಿನ್, ಹೊಸೂರು ಮುಖ್ಯರಸ್ತೆ, ವಿನಾಯಕ್ ಲೇಔಟ್, ಎಲೆಕ್ಟ್ರಾನ್ ಸಿಟಿ ಫಸ್ಟ್ ಫೇಸ್, ಇನ್ಪೋಸಿಸ್ ಸುತ್ಯಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ. ಕಳೆದ ಹಲವು ದಿನಗಳಿಂದ ನಿತ್ಯ ವಿದ್ಯುತ್ ವ್ಯತ್ಯಯ ಆಗ್ತಿದೆ. ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.