ಸ್ಯಾಂಡಲ್‌ವುಡ್ ನಟ ಜೈ ಜಗದೀಶ್‌ಗೆ ವಿದ್ಯುತ್ ಬಿಲ್ ಶಾಕ್ ಆಗಿದೆ. ಇದೇನಿದು ಪ್ರಕರಣ
ಮಡಿಕೇರಿ (ನ.05): ಕನ್ನಡಚಿತ್ರ ರಂಗದ ಹಿರಿಯ ನಟ, ನಿರ್ದೇಶಕ ಜೈಜಗದೀಶ್ ಅವರಿಗೆ ಚೆಸ್ಕಾಂ ಶಾಕ್ ಕೊಟ್ಟಿದೆ. ಜಗದೀಶ್, ಈಗ ಸರ್ಕಾರದ ಮೊರೆ ಹೋಗಿದ್ದಾರೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪದ ನಿವಾಸಿಯಾಗಿರುವ ಜೈ ಜಗದೀಶ್, ಇಲ್ಲಿ 10 ಎಕರೆ ಜಮೀನು ಹೊಂದಿದ್ದು, 5 ಎಚ್.ಪಿ. ಮೋಟಾರ್ ಅಳವಡಿಸಿದ್ದಾರೆ.
ಕೆಲವೊಮ್ಮೆ ಮಾತ್ರ ಪಂಪ್ ಬಳಸಿದ್ದು, ಅಚ್ಚರಿ ಅಂದರೆ ಲಕ್ಷ ಲಕ್ಷ ರು. ಬಿಲ್ ಬರುತ್ತಿದೆ. ಕೆಲ ತಿಂಗಳ ಹಿಂದೆ 2.32 ಲಕ್ಷ ಬಿಲ್ ಬಂದಿದೆ.
ಬುಧವಾರ ಸಂಬಂಧಪಟ್ಟಅಧಿಕಾರಿಗಳು, ಸಂಸದ ಪ್ರತಾಪ್ ಸಿಂಹಗೆ ಜೈ ಜಗದೀಶ್, ಮನವಿ ನೀಡಿ ನ್ಯಾಯ ಕೊಡಿಡುವಂತೆ ಮನವಿ ಮಾಡಿದ್ದಾರೆ.