
ಹೊಸಕೋಟೆ (ನ.04): ಕನ್ನಡ ಹಾಗೂ ರಾಜ್ಯ ಸೇರಿದಂತೆ ಹಲವಾರು ರಾಜ್ಯಗಳು ತನ್ನದೇ ಆದ ವೈಶಿಷ್ಯಗಳಿಂದ ಕೂಡಿರುವ ಪರಿಣಾಮ ಕೇಂದ್ರದಿಂದ ಪ್ರಾದೇಶಿಕ ಆಚರಣೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರತ್ ಬಚ್ಚೇಗೌಡ - ಕಾಂಗ್ರೆಸ್ ಮೈತ್ರಿಗೆ ಆಯ್ತು ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ
ಕೆಂಡಾಮಂಡಲ : ತಾಲೂಕು ಆಡಳಿತ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೇವಲ ಬೆರಳೆಣಿಕೆಯಷ್ಟುಅಧಿಕಾರಿಗಳು ಮಾತ್ರ ಭಾಗಹಿಸಿದ್ದರು. ಇದನ್ನು ಕಂಡ ಶಾಸಕ ಶರತ್ ಬಚ್ಚೇಗೌಡ ತಹಸೀಲ್ದಾರ್ ಎದುರೇ ಕೆಂಡಮಂಡಲವಾದರು. ಸರ್ಕಾರಿ ಕೆಲಸ ಪಡೆದು, ನೀವು ನಿಮ್ಮ ಕುಟುಂಬ ಜೀವನ ನಡೆಸಲು ಸರ್ಕಾರಿ ಸಂಬಳ ಬೇಕು. ಆದರೆ ಸರ್ಕಾರಿ ಕಾರ್ಯಕ್ರಮಕ್ಕೆ ಹಾಜರಾಗಲು ಆಗಲ್ವ.
ಕಡ್ಡಾಯ ಹಾಜರಾತಿಗೆ ತಹಸೀಲ್ದಾರ್ ಆದೇಶಕ್ಕೂ ಕಿಮ್ಮತ್ತು ಇಲ್ವ. ಯಾವ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಬಂದಿಲ್ವೋ, ಅವರಿಗೆ ನೋಟಿಸ್ ಜಾರಿ ಮಾಡಿ, ಒಂದೆರಡು ದಿನದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಿರಿ. ಅಲ್ಲೆ ಬಂದು ಗೈರಾಗಿದ್ದಕ್ಕೆ ಸ್ಪಷ್ಟನೆ ಕೊಡಲಿ ಎಂದು ತಹಸೀಲ್ದಾರ್ ಗೀತಾ ಅವರಿಗೆ ತಾಕೀತು ಮಾಡಿದರು. ಅಲ್ಲದೇ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಧಿಕಾರಿಗಳ ಗೈರಿನ ಬಗ್ಗೆ ದೂರು ನೀಡಿ ಸಭೆ ನಿಗದಿ ಮಾಡುವಂತೆ ಶಾಸಕ ಶರತ್ ಬಚ್ಚೇಗೌಡ ಸೂಚಿಸಿದರು.